ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪಪುನರುಚ್ಛರಿಸೋಣ: ಸಿಎಂ ಬೊಮ್ಮಾಯಿ….

Spread the love

ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪ ಪುನರುಚ್ಛರಿಸೋಣ: ಸಿಎಂ ಬೊಮ್ಮಾಯಿ….

 

ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂವಿಧಾನ ದಿನದ ಶುಭಾಶಯ ತಿಳಿಸಿದ್ದಾರೆ. 1949 ರಲ್ಲಿ ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿದ ನೆನಪಿಗಾಗಿ ದೇಶ ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸುತ್ತಿದೆ. 2015ರಿಂದ ಈ ಆಚರಣೆ ಜಾರಿಗೆ ಬಂದಿದೆ. 1949ರ ನ.26ರಂದು ಭಾರತದ ಸಂವಿಧಾನ ಅಂಗೀಕಾರವಾಯ್ತು. ನಮ್ಮ ಸಂವಿಧಾನದ ಸದಾಶಯಗಳನ್ನು ಸಂರಕ್ಷಿಸುವ ಹಾಗೂ ಪಾಲಿಸುವ ದೃಢ ನಿಶ್ಚಯದೊಂದಿಗೆ ಕರ್ತೃಗಳನ್ನು ಸ್ಮರಿಸೋಣ. ನಮ್ಮ ಎಲ್ಲ ಸಂವಿಧಾನ ಕರ್ತೃಗಳನ್ನು ಸ್ಮರಿಸೋಣ. ಸಂವಿಧಾನಕ್ಕೆ ಸದಾ ಬದ್ಧರಾಗಿರುವ ಸಂಕಲ್ಪ ಪುನರುಚ್ಛರಿಸೋಣ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿ ಶುಭಾಷಯ ತಿಳಿಸಿದ್ದಾರೆ. ಸಂವಿಧಾನವೇ ನಮ್ಮ ರಾಷ್ಟ್ರಧರ್ಮ. ಪ್ರತಿಯೊಬ್ಬ ಭಾರತೀಯನ ಸ್ವಾತಂತ್ರ್ಯ, ಹಕ್ಕು, ಘನತೆಯನ್ನು ಸಂವಿಧಾನ ರಕ್ಷಿಸುತ್ತದೆ. ಸಮಾನತೆಯೊಂದಿಗೆ ನಮ್ಮ ವಿಚಾರ, ಅಭಿವ್ಯಕ್ತಿ, ಶ್ರದ್ಧೆ, ಉಪಾಸನೆಯ ಸ್ವಾತಂತ್ರ್ಯವೂ ಸಂವಿಧಾನದತ್ತವಾಗಿದ್ದು. ಸಂವಿಧಾನದ ಸದಾಶಯ ಸಂರಕ್ಷಿಸುವ ಕೆಲಸ ಮಾಡೋಣ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರು ಸಂವಿಧಾನ ದಿನದ ಶುಭಾಷಯ ಹೇಳಿದ್ದಾರೆ.

  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *