ನವಂಬರ್ 26ರಂದು ಗಂಗಾವತಿ ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುವುದು….

Spread the love

ನವಂಬರ್ 26ರಂದು ಗಂಗಾವತಿ ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಆಚರಿಸಲಾಗುವುದು….

ಆಮ್ ಆದ್ಮಿ ಪಕ್ಷಕ್ಕೆ ನವಂಬರ್ 26 ಅತ್ಯಂತ ಮಹತ್ವದ ಮತ್ತು ಪ್ರಮುಖ ದಿನವಾಗಿದ್ದು ಅಂದು ಆಮ್ ಆದ್ಮಿ ಪಕ್ಷ ಸ್ಥಾಪನೆಯಾದ ದಿನವಾಗಿದೆ. ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ದಿನವಾಗಿದೆ ಬಹುಪಕ್ಷ ಪದ್ಧತಿಯ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಕೇವಲ ಭ್ರಷ್ಟಾಚಾರವನ್ನು ವಿಷಯವನ್ನಾಗಿ ಇಟ್ಟುಕೊಂಡು ರಾಜಕೀಯ ಹಿನ್ನೆಲೆ ಇಲ್ಲದ ವ್ಯಕ್ತಿಗಳ ಸಮೂಹವೊಂದು ರಾಜಕೀಯ ಬದಲಾವಣೆ ಗೋಸ್ಕರ ಒಂದು ಪಕ್ಷವನ್ನು ಸಂಘಟಿಸಿ ಆ ಪಕ್ಷವನ್ನು ಅಧಿಕಾರಕ್ಕೆ ತರಲು ಮಾಡಿದ ನಿರಂತರ ಪ್ರಯತ್ನದ ಫಲವಾಗಿ ಇಂದು ದೆಹಲಿಯಲ್ಲಿ ಒಂದು ಮಾದರಿ ಸರಕಾರ ರಚನೆಯಾಗಿದೆ. ಹಣ ಬಲ ತೋಳ್ಬಲ ಜಾತಿಬಲ ಇವೆಲ್ಲವನ್ನು ಮೀರಿ ಸತ್ಯ ಮತ್ತು ಪ್ರಾಮಾಣಿಕ ಮಾರ್ಗದ ಮೂಲಕ ರಾಜಕಾರಣವನ್ನು ನಡೆಸಬಹುದು ಎಂಬುದನ್ನು ಭಾರತೀಯ ರಾಜಕೀಯ ವ್ಯವಸ್ಥೆಗೆ ಪರಿಚಯಿಸಿದ ಆಮ್ ಆದ್ಮಿ ಪಕ್ಷ ಜನಸಾಮಾನ್ಯರಿಗೆ ಓ ಸಫಲ ಯೋಜನೆಗಳನ್ನು ನೀಡುತ್ತಾ ಪ್ರತಿಯೊಬ್ಬ ಮತದಾರ ಮತ ಚಲಾಯಿಸುವ ಮುನ್ನ ಇಟ್ಟುಕೊಂಡ ಎಲ್ಲ ನಿರೀಕ್ಷೆಗಳನ್ನು ಇಂದು ನನಸಾಗಿಸಿದೆ. ಆಮ್ ಆದ್ಮಿ ಪಕ್ಷದ ಸಂಘಟನೆ ಇಂದು ಪ್ರತಿಯೊಂದು ರಾಜ್ಯದಲ್ಲಿ ನಡೆಯುತ್ತಿದ್ದರು ದೊಡ್ಡಮಟ್ಟದ ಸಂಘಟನೆ ಆಗುವಲ್ಲಿ ಹಲವು ನ್ಯೂನ್ಯತೆಗಳನ್ನು ಎದುರಿಸುತ್ತಿದೆ ಅವೆಲ್ಲವನ್ನು ಮೀರಿ ನಾವು ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಪಕ್ಷವನ್ನು ಸಂಘಟಿಸಬೇಕು ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ನಿರಂತರ ಶ್ರಮ ತ್ಯಾಗ ದಕ್ಷ ಕಾರ್ಯಕ್ಷಮತೆ ಫಲಾಪೇಕ್ಷೆಯಿಲ್ಲದ ದುಡಿಯುವ ಗುಣದಿಂದಾಗಿ  ಪಕ್ಷವು ಎಲ್ಲಾ ರಾಜಕೀಯ ಪಕ್ಷಗಳಿಗಿಂತಲೂ ವಿಭಿನ್ನವಾದ ಸ್ಥಾನದಲ್ಲಿ ನಿಲ್ಲುತ್ತದೆ . ಇಂತಹ  ಪಕ್ಷದ ಕಾರ್ಯಕರ್ತನಾಗಿ ಇರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ಬನ್ನಿ ನಾವೆಲ್ಲರೂ ಸೇರಿ ಪಕ್ಷದ ಸಂಸ್ಥಾಪನಾ ದಿನವಾದ ನವೆಂಬರ್ 26ರಂದು ಎಲ್ಲರೂ ಒಗ್ಗೂಡುವ ಮೂಲಕ ಪಕ್ಷವನ್ನು ಸಂಘಟಿಸಲು ಇರುವ ಎಲ್ಲ ಸವಾಲುಗಳನ್ನು ಎದುರಿಸೋಣ. ಮುಂಬರುವ ದಿನಗಳಲ್ಲಿ ಆಮ್ ಆದ್ಮಿ ಪಕ್ಷದ ವಿಜಯದ ದಿನಗಳನ್ನು ಎದುರು ನೋಡೋಣ. ಕರ್ನಾಟಕದಲ್ಲಿಯೂ ಕೂಡ ಆಮ್ ಆದ್ಮಿ ಪಕ್ಷವನ್ನು ಬಲಪಡಿಸಿ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡುವ ಮೂಲಕ ಜನಸಾಮಾನ್ಯನ ನಿರೀಕ್ಷೆಗಳನ್ನು ನನಸಾಗಿಸೋಣ. ನವಂಬರ್ 26ರಂದು ಗಂಗಾವತಿ ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಗುವುದು ಮತ್ತು ತಿರಂಗಾ ಯಾತ್ರೆಯನ್ನು ನಡೆಸಲಾಗುವುದು ಆದ್ದರಿಂದ ನನ್ನೆಲ್ಲ ಆತ್ಮೀಯ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕಾರಣೀಭೂತರಾಗಬೇಕೆಂದು ವಿನಂತಿ. ಹುಸೇನ್ ಸಾಬ್ ಗಂಗನಾಳ ಕೊಪ್ಪಳ ಜಿಲ್ಲಾ ಸಂಚಾಲಕರು ಆಮ್ ಆದ್ಮಿ ಪಕ್ಷ ಕೊಪ್ಪಳ….

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *