ಮಾರಮ್ಮನಹಳ್ಳಿ:ಮಕ್ಕಳ ಅನ್ನ ಕದಿಯೋ ಕಳ್ಳರನ್ನು ಹಿಡಿದ ಗ್ರಾಮಸ್ಥರು…..

Spread the love

ಮಾರಮ್ಮನಹಳ್ಳಿ:ಮಕ್ಕಳ ಅನ್ನ ಕದಿಯೋ ಕಳ್ಳರನ್ನು ಹಿಡಿದ ಗ್ರಾಮಸ್ಥರು…..

-ವಿಜಯನಗರ ಜಿಲ್ಲೆ  ಕೂಡ್ಲಿಗಿ ತಾಲೂಕು ಗಂಡಬೋಮ್ಮನಹಳ್ಳಿ ಗ್ರಾಮ ಪಂಚಾಯ್ತಿ ಮಾರಮ್ಮನಹಳ್ಳಿ, ಅಂಗನವಾಡಿ ಕೇಂದ್ರದ ಶಿಕ್ಷಕಿ ಅಯೋದ್ಯಮ್ಮ ಕಾಳಸಂತೆಯಲ್ಲಿ ಮಕ್ಕಳ ಆಹಾರ ಸಾಗಿಸುವಾಗ. ಆಹಾರ ಸಾಮಾಗ್ರಿಗಳೊಂದಿಗೆ ಸಾಗಿಸುವರನ್ನು ಹಿಡಿದು ಕೂಡಿ ಹಾಕಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ. ಇಲಾಖಾಧಿಕಾರಿ ನಿರ್ಲಕ್ಷ್ಯ-ಆಕ್ರೋಶ- ಮಾಲು ಸಮೇತ ಹಿಡಿದು ಸಂಬಂಧಿಸಿದ ಇಲಾಖಾಧಿಕಾರಿ ಗಮನಕ್ಕೆ ತಂದಿದ್ದು, ಸರ್ಕಾರ ಇಲಾಖಾಧಿಕಾರಿಗೆ ವಾಹನ ಸೇರಿದಂತೆ ಎಲ್ಲಾ ಸೌಕರ್ಯಗಳು ಇವೆ. ಆದರೂ ಘಟನೆ ಜರುಗಿ ಹತ್ತಾರು ತಾಸುಗಳಾದರು ಕೂಡ ಈವರೆಗೂ ಸ್ಥಳಕ್ಕೆ ಆಗಮಿಸಿಲ್ಲ,ಈ ಮೂಲಕ ಅವರು ನಿರ್ಲಕ್ಷ್ಯ ತೋರಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ.ಇದು ಅಧಿಕಾರಿಗಳು ಕಾಳಾಂತೆಕೊರರ ಪರ ಮೃದು ಧೊರಣೆ ತಾಳುತ್ತಿರುವುದಕ್ಕೆ ಸಾಕ್ಷಿಯಾಗಿದೆ,ಈ ಹಿಂದೆ ಜರುಗಿರುವ ಇಂತಹ ಪ್ರಕರಣಗಳಲ್ಲಿ ಭ್ರಷ್ಟರ ಕಾಳಾಂತೆಕೋರರ ಪರ ಇಲಾಖಾ ಧಿಕಾರಿಗಳು ನಿಂತಿರುವುದಕ್ಕೆ ಸಾಕಷ್ಟು ಸಾಕ್ಷ್ಯೆಗಳಿವೆ.ಇಂತಹ ಪ್ರಯತ್ನ ಇಲ್ಲಿಯೂ ಜರುಗಿದ್ದು ತಾವು ಅದಕ್ಕೆ ಆಸ್ಪದ ನೀಡಿಲ್ಲ,ಕಾಳಾಂತೆಕೋರರನ್ನು ಹಾಗೂ ಕಾಳಾಂತೆಯಲ್ಲಿ ಸಾಗಿಸುತ್ತಿದ್ದವರನ್ನು ಕೂಡಿಹಾಕಿ ರಾತ್ರಿ ಇಡೀ ಕಾದು ಜಾಗರಣೆ ಮಾಡಿರುವುದಾಗಿ ಗ್ರಾಮಸ್ಥರು ಭ್ರಷ್ಟಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರಕರಣ ಮುಚ್ಚಿಹಾಕುವ ಕುತಂತ್ರ ನಡೆದಿದ್ದು ಅಧಿಕಾರಿಗೆ ಸರ್ಕಾರಿ ವಾಹನ ಹಾಗೂ ಎಲ್ಲಾ ಸೌಲಭ್ಯವಿದ್ದರೂ ಕೂಡ,ಸುದ್ದಿ ತಿಳಿದೂ ತಿಳಿಯದವರಂತೆ ಹಾಗೂ ಜಾಣ ವಿಳಂಬ ನೀತಿ ತೋರಿ ಪ್ರಕರಣಕ್ಕೆ ಅಂತ್ಯ ಕಾಣಿಸುವ ಪ್ರಯತ್ನಕ್ಕೆ ಸಹಕರಿಸಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ. ಜಿಲ್ಲಾಧಿಕಾರಿಗೆ ಮನವಿ- ತಾಲೂಕು ಇಲಾಖಾಧಿಕಾರಿ ನೆರವಿನೊಂದಿಗೆ ಪ್ರಕರಣ ಮುಚ್ಚಿಹಾಕುವ ಎಲ್ಲಾ ಪ್ರಯತ್ನ ಕಾಣದ  ಕೈಗಳು ಮಾಡುತ್ತಿವೆ,ಕಾರಣ ಜಿಲ್ಲಾಧಿಕಾರಿಗಳು ಖುದ್ದು ನೇರವಾಗಿ ಪ್ರಕರಣ ಕೈಗೆತ್ತಿಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಕ್ಕಳ ಆಹಾರ ಸಾಮಾಗ್ರಿಗಳನ್ನು ಮೋಳಕಾಲ್ಮುರು ತಾಲೂಕಿನ  ಕೋಂಡ್ಲಹಳ್ಳಿಯ  ಕಿರಾಣಿ ಅಗಂಡಿಯವರಿಗೆ,ಕಾಳಸಂತೆ ಮೂಲಕ ಸಾಗಿಸಲಾಗುತ್ತಿತ್ತು ಈ ಸಂದರ್ಭದಲ್ಲಿ ಮಾಲು ಸಮೇತ ತಾವು ಹಿಡಿದಿರುವುದಾಗಿ ಗ್ರಾಮಸ್ಥರು  ತಿಳಿಸಿದ್ದಾರೆ.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *