ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ-

Spread the love

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಬೃಹತ್ ಪ್ರಮಾಣದ ವಿದ್ಯುತ್ ಲೈನ್ ಹಾದುಹೋಗುವ ರೈತರ ಭೂಮಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ  ರೈತರಿಂದ ತಾಲೂಕು ಕಚೇರಿ ಮುತ್ತಿಗೆ. ವೇರವಣಗೆ  ಮುಖಾಂತರ ಬಂದ ರೈತರು ತಾಲೂಕು ಕಚೇರಿ ಗೇಟಿನ ಬೀಗ ಬರೆದ ಕರಣ ಬೀಗ ಒಡೆದು ರೈತರು ಒಳಗೆ ಪ್ರವೇಶಿಸಿ  ಪ್ರತಿಭಟನೆ ನಡೆಸಿದರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೂಲಭೂತ ಸೌಕರ್ಯಗಳಲ್ಲಿ ಮುಖ್ಯವಾದ ವಿದ್ಯುತ್  ಕ್ಷೇತ್ರವನ್ನು ತೆರೆಮರೆಯಲ್ಲೇ ಖಾಸಗೀಕರಣ ಗುರುತಿಸುವುದು ಈ ದೇಶದ ರೈತರ ಬದುಕಿಗೆ ಬರೆ ಎಳೆದು ಬಂಡವಾಳಶಾಹಿ ಮತ್ತು ವಿದೇಶಿ ಕಂಪನಿಗಳಿಗೆ ರತ್ನಗಂಬಳಿ ಹಾಸಿ ದೇಶದ ಅನ್ನದಾತರನ್ನು ಖುಷಿ ಕ್ಷೇತ್ರದಿಂದ ಒಕ್ಕಲೆಬ್ಬಿಸು ತ್ತಿರುವ ದೇಶದ ರೈತರು ದುರಂತ ಬೃಹತ್ ಪ್ರಮಾಣದ ವಿದ್ಯುತ್ ಲೈನುಗಳನ್ನು ರೈತರ ಕೃಷಿ ಭೂಮಿಯಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರದೇ ಯಾವುದೇ ರೀತಿಯ ಮಾಹಿತಿ ನೀಡದೆ ಏಕಾಏಕಿ ತಮಗೆ ಇಷ್ಟಬಂದಂತೆ ಬೃಹತ್ ಪ್ರಮಾಣದ ಕಂಬಗಳನ್ನು ನೇಡಲು ಮುಂದಾಗಿರುವುದು ಅನ್ನದಾತರಿಗೆ ಮಾಡುತ್ತಿರುವ ಅನ್ಯಾಯ ಮತ್ತು ದೌರ್ಜನ್ಯ,  ಈ ಬೃಹತ್ ಪ್ರಮಾಣದ ವಿದ್ಯುತ್ ತಂತಿ ಹಾದು ಹೋಗುವ ಮಾರ್ಗದಲ್ಲಿ ರೈತರು ಯಾವುದೇ ರೀತಿಯ ಕೃಷಿ ಚಟುವಟಿಕೆಗಳನ್ನು ಮಾಡಲು ಸಾಧ್ಯವಿಲ್ಲ ಈ ಮಾರ್ಗ ಕಣ್ಣಿಗೆ ಕಾಣದ ಕಾಳಿಂಗಸರ್ಪ ಇದ್ದಂತೆ ತೋಟಗಾರಿಕೆ ಬೆಳೆಗಳಾದ ತೆಂಗು ಅಡಿಕೆ  ಮುಂತಾದ ದೀರ್ಘವಾಧಿ ಬೆಳೆ ಬೆಳೆಯಲು ಸಾಧ್ಯವಿಲ್ಲ ಹಾಗೂ ಮಳೆ ಬಂದರೆ ಲೆನ್ ಗಳ ಕೆಳಗೆ ಓಡಾಡಲು ಸಹ ಆಗುವುದಿಲ್ಲ ಇಂತಹ ಅನೇಕ ಸಮಸ್ಯೆ ಮತ್ತು ತೊಂದರೆಗಳು ಜೊತೆಗೆ ಭೂಮಿಯ ಮೌಲ್ಯ ಕೂಡ ಕಳೆದುಕೊಳ್ಳುತ್ತಿದ್ದಾರೆ  ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ  ಅವರ ಪಾಲಿನ ಭೂಮಿಯು ಸಹ ಹರಿದು ಹಂಚಿಕೆಯಾಗಿ ಅರ್ಧ ಎಕರೆ 1ಎಕರೆ ಅಥವಾ ಎರಡು ಕಡೆಗಳಲ್ಲಿ ತಮ್ಮ ಖುಷಿ ಮತ್ತು ಹೈನುಗಾರಿಕೆಯ ಮೂಲಕ ಬದುಕನ್ನು ಕಟ್ಟಿಕೊಂಡಿರುತ್ತಾರೆ ಇನ್ನಿತರ ಅನೇಕ ತೊಂದರೆಗಳಿಗೆ ಒಳಪಡುವ ರೈತರ ಕುಟುಂಬಗಳಿಗೆ ಸೂಕ್ತ ರೀತಿಯ ವೈಜ್ಞಾನಿಕ ಪರಿಹಾರವನ್ನು ನೀಡಲು ಆಗ್ರಹಿಸಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *