ಸಾಮಾಜಿಕ ಬದಲಾವಣೆಯ ವಿಚಾರಗಳಲ್ಲಿ ಮೈಲಪ್ಪ ಬಿಸರಹಳ್ಳಿ ಅತ್ಯಂತ ನಂಬಿಕೆಯುಳ್ಳವರಾಗಿದ್ದರು. ಇವರ ಹಗಲಿಕೆ ದಲಿತ ಜನಾಂಗಕ್ಕೆ ಅಷ್ಟೇ ಅಲ್ಲ ಜಾತ್ಯತೀತ ಶಕ್ತಿಗಳಿಗೆ ತುಂಬಾ ನಷ್ಟವಾಗಿದೆ.

Spread the love

ಸಾಮಾಜಿಕ ಬದಲಾವಣೆಯ ವಿಚಾರಗಳಲ್ಲಿ ಮೈಲಪ್ಪ ಬಿಸರಹಳ್ಳಿ ಅತ್ಯಂತ ನಂಬಿಕೆಯುಳ್ಳವರಾಗಿದ್ದರು. ಇವರ ಹಗಲಿಕೆ ದಲಿತ ಜನಾಂಗಕ್ಕೆ ಅಷ್ಟೇ ಅಲ್ಲ ಜಾತ್ಯತೀತ ಶಕ್ತಿಗಳಿಗೆ ತುಂಬಾ ನಷ್ಟವಾಗಿದೆ.

8ವರ್ಷಗಳವರೆಗೆ (1992 ರ ಅವಧಿಯಲ್ಲಿ) CPIML ನ ಸಮೂಹ ವಿಚಾರದ ಕ್ರಾಂತಿಕಾರಿ ಯುವಜನ ರಂಗ (RYF) ದಲ್ಲಿ ಕೆಲಸ ಮಾಡಿದ್ದ ಬಿಸರಹಳ್ಳಿಯವರು   ಭೇಟಿಯಾದಾಗ; ಕಾಮ್ರೇಡ ಎಂದು ಮಾತನಾಡಿಸುತ್ತಿದ್ದರು. ಕಳೆದ ಒಂದು ತಿಂಗಳ ಹಿಂದೆ  ಮನೆಗೆ ಹೋಗಿ ಆರೋಗ್ಯ ವಿಚಾರಿಸಲಾಗಿತ್ತು. ಆ ಸಂದರ್ಭದಲ್ಲಿ ತನ್ನ ಅನಾರೋಗ್ಯದ ಮತ್ತು ಕುಟುಂಬದ ಸಮಸ್ಯೆಗಳ ಕುರಿತು ಮಾತನಾಡದೆ  ಹೋರಾಟದ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರು.  ಈಗಿನ ಕೆಲವು ಯುವಕರು ಹೋರಾಟದ ಹೆಸರಿನಲ್ಲಿ ಸಮಾಜಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆಂದು ಬೇಜಾರು ವ್ಯಕ್ತಪಡಿಸಿದ್ದರು.  ಸಕ್ಕರೆ ಕಾಯ್ಲೆ ಮತ್ತು ಕಿಡ್ನಿ ವೈಫಲ್ಯ ಅವರ ಸಾವಿಗೆ ಮೂಲ ಕಾರಣವಾಗಿದೆ.  ಸಮಾಜಿಕ ತಿಳುವಳಿಕೆ ಮತ್ತು ಆರೋಗ್ಯದ ಕಾಳಜಿಯಿಂದ ಐದಾರು ವರ್ಷಗಳವರೆಗೆ ಬದುಕಿದರು.         ಬಿಸರಹಳ್ಳಿ ಸ್ವಾಭಿಮಾನ ಬಲಿಕೊಟ್ಟು ಬದುಕಲಿಲ್ಲ.ಆ ಕಾರಣದಿಂದಲೇ   ಅವರ ಕುಟುಂಬ ತೀವ್ರ ಬಡತನದ ಸಂಕಷ್ಟದಲ್ಲಿದೆ.  ಅವರಿಗೆ ಕೃತಜ್ಞತೆ ಸಲ್ಲಿಸಲು ಬಯಸುವವರು ಅವರ ಕುಟುಂಬಕ್ಕೆ ಸಹಾಯ ಮಾಡಿ ತಮ್ಮ ಜವಾಬ್ದಾರಿ ತೋರಬೇಕು.  ತುಂಬಾ ದೂರದಲ್ಲಿದ್ದ  ಕಾರಣ ಅಂತಿಮ ಸಂಸ್ಕಾರದಲ್ಲಿ  ಭಾಗವಹಿಸಲು ಸಾಧ್ಯವಾಗಲಿಲ್ಲ. “ಹೋಗಿ ಬನ್ನಿ ಎಂದು   ಹೇಳುವುದಿಲ್ಲ”. “ಏಕೆಂದರೆ   ಆ ರೀತಿ ಹೇಳುವುದು ಭಾವನವಾದವಾಗುತ್ತದೆ”. ಅವರ ಸ್ವಾಭಿಮಾನದ ಜೀವನ ಈಗಿನ ಯುವಕರಿಗೆ ಆದರ್ಶವಾಗಲಿ. ಅಂತಿಮ ನಮನಗಳು.  ಡಿ.ಹೆಚ್.ಪೂಜಾರ ರಾಜ್ಯಾಧ್ಯಕ್ಷರು ಕರ್ನಾಟಕರೈತ ಸಂಘ (AIKKS).

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *