ಕರ್ನಾಟಕ ಪ್ರಾಂತ ರೈತ ಸಂಘದಿಂದ  ನರೇಗಾ ಕಾರ್ಮಿಕರಿಗೆ ಕೂಲಿ ನೀಡಿ…..

Spread the love

ಕರ್ನಾಟಕ ಪ್ರಾಂತ ರೈತ ಸಂಘದಿಂದ  ನರೇಗಾ ಕಾರ್ಮಿಕರಿಗೆ ಕೂಲಿ ನೀಡಿ…..

ಮುಧೋಳ ಗ್ರಾಮ ಪಂಚಾಯಿತಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘಟನೆಯ ಅಧ್ಯಕ್ಷ ಶಿವರುದ್ರಪ್ಪ ಓಲಿ ಮತ್ತು ಕೂಲಿ ಕಾರ್ಮಿಕರ ಜೊತೆ ಪ್ರತಿಭಟನೆ ನಡೆಸಿದರು ಯಲಬುರ್ಗಾ: ತಾಲ್ಲೂಕಿನ ಮುಧೋಳ ಗ್ರಾಮದ ಉದ್ಯೋಗ ಕೂಲಿಕಾರ್ಮಿಕರ  ಸಮಸ್ಯೆಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಶಿವರುದ್ರಪ್ಪ ಓಲಿ ಅವರು ಮತ್ತು (ಮೇಟಿ ) ಕೂಲಿ ಕಾರ್ಮಿಕರೊಂದಿಗೆ  ಗುರುವಾರ ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿದರು. ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ನಿಂದ ಹಿಡಿದು ಗ್ರಾಮ ಪಂಚಾಯಿತಿವರೆಗೆ ಧಿಕ್ಕಾರ ಕೂಗುತ್ತ ಪ್ರತಿಭಟನಾಕಾರರು ಆಗಮಿಸಿದರು. ಮುಧೋಳ ಗ್ರಾಮದಲ್ಲಿ 45 ದಿನಗಳಿಂದ ನರೇಗಾ ಅಡಿ ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ಏಳು ದಿನ ಏನ್ ಎಂ ಆರ್ ತೆಗೆದದ್ದು ಕಾಮಗಾರಿ ಮುಗಿದ ಮೇಲೆ 45 ದಿನಗಳ ಆದರೂ ರಾಜಕೀಯ ವೈಷಮ್ಯದಿಂದ ಇದುವರೆಗೂ 4ಏನ್ ಎಂ ಆರ್ ಗಳ ಫಾರ್ಮ್ ನಂಬರ್ 6 ನ್ನು ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ, ಇನ್ನು ಎರಡು ದಿವಸದ ಒಳಗಾಗಿ ಮಾಡದಿದ್ದರೆ ನವಂಬರ್ 28ರಂದು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದ್ದೇವೆ ಎಂದು ರೈತ ಸಂಘದ ಅಧ್ಯಕ್ಷ ಶಿವರುದ್ರಪ್ಪ ಓಲಿ ಅವರು ಹೇಳಿದರು,  ಗ್ರಾಮಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಾದ ಪಕೀರಪ್ಪ ಕಟ್ಟಿಮನಿ ಹಾಗೂ ಯಲಬುರ್ಗಾದ AD ಗೀತಾ ಮೇಡಂ ಅವರಿಗೆ ಮನವಿಯನ್ನು ಸಲ್ಲಿಸಿದರು ಮುಖಂಡರಾದ ಕ,ಪ್ರಾ, ರೈ,ಮಹಿಳಾ ಸಂಘ ಕಾರ್ಯದರ್ಶಿಗಳಾದ ಮಹಾದೇವಿ ನಿಡಗುಂದಿ, ಹುಸೇನಸಾಬ್ ಹಿರೇಮನಿ, ಚಿಕ್ಕಪ್ಪ ಬೆಟಿಗೇರಿ, ಬಸನಗೌಡರು, ಹುಚ್ಚಿರಪ್ಪ ತಮಿನಾಳ, ಸಿದ್ದಪ್ಪ ಮಾದರ, ಮರ್ತುಜಾ ಹಿರೇಮನಿ, ಕಲ್ಪನಾ ನಿಡಗುಂದಿ, ಶರಣಯ್ಯ ಬೀಳಗಿ ಮಠ, ಬಸವರಾಜ್ ಓಲಿ ಇನ್ನು ಹಲವಾರು ಉಪಸ್ಥಿತರುಕೂಲಿ ಕಾರ್ಮಿಕರು ಗ್ರಾಮದ ಸಾರ್ವಜನಿಕರು ಭಾಗಿಯಾಗಿದ್ದರು,

ವರದಿ – ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *