3 ದಿನಗಳ ಕಾಲ ರಾಜ್ಯ ಸರಕಾರಿ ನೌಕರರಿಗೆ, ರಾಜ್ಯ ಮಟ್ಟದ ಕ್ರೀಡಾ ಕೂಟವನ್ನು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು,

Spread the love

3 ದಿನಗಳ ಕಾಲ ರಾಜ್ಯ ಸರಕಾರಿ ನೌಕರರಿಗೆ, ರಾಜ್ಯ ಮಟ್ಟದ ಕ್ರೀಡಾ ಕೂಟವನ್ನು ದಾವಣಗೆರೆಯಲ್ಲಿ  ಹಮ್ಮಿಕೊಳ್ಳಲಾಗಿತ್ತು,

ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ 2021ನೇ ಸಾಲಿನಲ್ಲಿ  ದಿನಾಂಕ 22ನೇ ಅಕ್ಟೋಬರ್ 2021 ರಿಂದ 24ನೇ ಅಕ್ಟೋಬರ್ 2021 ಮೂರು ದಿನಗಳ ಕಾಲ ರಾಜ್ಯ ಸರಕಾರಿ ನೌಕರರಿಗೆ, ರಾಜ್ಯ ಮಟ್ಟದ ರಾಜ್ಯ ಸರಕಾರಿ ನೌಕರರ  ಕ್ರೀಡಾ ಕೂಟವನ್ನು ದಾವಣಗೆರೆಯಲ್ಲಿ  ಹಮ್ಮಿಕೊಳ್ಳಲಾಗಿತ್ತು, ಸುಮಾರು ಜನ ವಿವಿಧ 31 ಜಿಲ್ಲೆಗಳಿಂದ  ಕರ್ನಾಟಕ ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು, ಈ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ನಮ್ಮ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಾಲಕಮಲದಿನ್ನಿಯ ಆಂಗ್ಲಭಾಷೆಯ ಸಹಾಯಕ ಶಿಕ್ಷಕರಾದ ಶ್ರೀ ಆನಂದ.ನಾಗಪ್ಪ.  ಬೇಗಾರ ರವರು ಕೂಡಾ ಭಾಗವಹಿಸಿ ಪುರುಷರ 77 ಕೆ.ಜಿ ಕುಸ್ತಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆ ಯಾಗಿದ್ದಾರೆ, ಇವರು ಕಳೆದ ಬಾರಿಯು ಇದೆ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಕ್ಕೆ  ದ್ವಿತೀಯ ಸ್ಥಾನ ಗಳಿಸಿದ್ದರು. ಇವರಿಗೆ ಹುನಗುಂದ ಮತ್ತು ಇಲಕಲ್  ತಾಲೂಕಿನ ರಾಜ್ಯ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಸಂಗಣ್ಣ ಹಂಡಿ ಹಾಗೂ ಶ್ರೀ ಪರಶುರಾಮ ಪಮ್ಮಾರ ಇವರು ಆನಂದ ಬೇಗಾರ ಇವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು, ಅದೇ ರೀತಿಯಾಗಿ ಹುನಗುಂದ ಮತ್ತು ಇಲಕಲ್ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ ಸಿದ್ದು ಶೀಲವಂತರು ಹಾಗೂ ಶ್ರೀ  ಮಾಸರಡ್ಡಿ ಇವರು ಕೂಡಾ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಅದರ ಜೋತೆಗೆ ತಾಲೂಕಿನ ಎಲ್ಲಾ ಶಿಕ್ಷಕರು ಹಾಗೂ ಅವಳಿ ತಾಲೂಕಿನ  ರಾಜ್ಯ ಸರಕಾರಿ ನೌಕರರು ಎಲ್ಲರೂ ಶುಭಾಶಯಗಳು ಕೋರಿ ತುಂಬಾ ಹರ್ಷ ವ್ಯಕ್ತಪಡಿಸಿದ್ದಾರೆ. ಇವರು ಸೇವೆ ಸಲ್ಲಿಸುತ್ತಿರುವ ಜಾಲಕಮಲದಿನ್ನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಎಸ್ ಎಲ್ ವನಜಕರ ಮಾತಾಡಿ ಇವರು ಬಹುಮುಖ ಪ್ರತಿಭೆಯುಳ್ಳ  ಪ್ರತಿಭಾವಂತ ಶಿಕ್ಷಕರಾಗಿದ್ದಾರೆ, ಕಳೆದ ವರ್ಷವು ಇದೆ ಕುಸ್ತಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು, ಈ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ನಮ್ಮ ತಾಲೂಕಿನ ನಮ್ಮ ಶಾಲೆಯ ಹೆಸರು ರಾಜ್ಯ ಹಾಗೂ ರಾಷ್ಟ್ರದ ಮಟ್ಟದಕ್ಕೆ ಹೆಸರು ತಂದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹೇಳುತ್ತಾ, ಇವರು  ಆಟಕ್ಕೂ  ಸೈ ಪಾಠಕ್ಕೂ ಸೈ ಎನ್ನುವಂತೆ  ನಮ್ಮ ಶಾಲೆಯಲ್ಲಿಯೂ ತುಂಬಾ ಚಟುವಟಿಕಾಭರಿತವಾಗಿ ಬೋಧಿಸುವ ಶಿಕ್ಷಕರಾಗಿದ್ದಾರೆ ಎಂದು ತಿಳಿಸಿದರು. ಹಾಗೆಯೇ ಇವರ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ತುಂಬಾ ಹರ್ಷ ವ್ಯಕ್ತಪಡಿಸಿ ಇವರಿಗೆ ಮುಂದಿನ  ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಶುಭವಾಗಲಿ ಹಾರೈಸಿದರು.  ಶ್ರೀ ಆನಂದ ಬೇಗಾರ ಶಿಕ್ಷಕರು ಇವರು ಮೂಲತಃ ಬಾಗಲಕೋಟ ಜಿಲ್ಲೆಯ ಇಲಕಲ್ ತಾಲೂಕಿನ ತಾರಿವಾಳ ಗ್ರಾಮದವರಾಗಿದ್ದಾರೆ, ತಾರಿವಾಳ ಗ್ರಾಮದ ನಾಗರಿಕರು ಹಾಗೂ ಯುವಕರು ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿ ನಮ್ಮೂರಿನ ಪ್ರತಿಭೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಜಯಶಾಲಿಯಾಗಲಿ ಎಂದು ಶುಭ ಹಾರೈಕೆಗಳನ್ನು ಕೋರಿದರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *