ಲಸಿಕೆ ಪ್ರಮಾಣ ಹೆಚ್ಚು ಮಾಡಿ ಹಾಕಿ ರೋಗ ತಡೆಗಟ್ಟಿ RCH ವಿಜಯ ಕೆ…

Spread the love

ಲಸಿಕೆ ಪ್ರಮಾಣ ಹೆಚ್ಚು ಮಾಡಿ ಹಾಕಿ ರೋಗ ತಡೆಗಟ್ಟಿ RCH ವಿಜಯ ಕೆ…

ಲಿಂಗಸೂರ ತಾಲೂಕಿನ ಮುದಗಲ್ಲ ಎಲ್ಲಾಹಳ್ಳಿಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ  ಲಸಿಕೆ ಪ್ರಮಾಣ ಹೆಚ್ಚು ಮಾಡಿ…ಹೆಚ್ಚಿನ ಲಸಿಕೆ ಹಾಕುವ ಮೂಲಕ ಮಾರಕ ರೋಗಗಳನ್ನು ತಡೆಗಟ್ಟಬೇಕು ಎಂದು RCH ವಿಜಯ ಕೆ… ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಾಧಿಕಾರಿಗಳು ನಿಗದಿತ ಸಮಯಕ್ಕೆ ಹಾಜರಾಗಿ ಚಿಕಿತ್ಸೆ ನೀಡಬೇಕು. ಕೋವಿಡ್ ಲಸಿಕೆ: ಜನರ ಮನವೊಲಿಸಲು RCH ವಿಜಯ ಕೆ.ಸಲಹೆ… ಈ ಸಂಬಂಧ ರಾಜಕೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರ ಜತೆ ಸಮನ್ವಯದಿಂದ ಕೆಲಸ ಮಾಡಿ ಲಸಿಕಾ ಗುರಿ ತಲುಪಲು ಸಹಕಾರ ನೀಡಬೇಕು’ಎಂದು ಸಲಹೆ…ನಂತರ  ಮಾತನಾಡಿ,‘ಪ್ರತಿದಿನ ಲಸಿಕಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು’ಎಂದರು. ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಶಿಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಜನರ ಮನವೊಲಿಸಿ ಲಸಿಕಾ ಕೇಂದ್ರಗಳಿಗೆ ಕರೆತರಬೇಕು ಎಂದರು.ಪ್ರತಿಯೊಬ್ಬ ಅಧಿಕಾರಿ ಎಷ್ಟು ಜನಕ್ಕೆ ಲಸಿಕೆ ಹಾಕಿಸಿದ್ದಾರೆ. ಅವರ ಕಾರ್ಯವೈಖರಿಯ ಸಂಪೂರ್ಣ ಮಾಹಿತಿ ಕಲೆ ಹಾಕಲಾಗುತ್ತದೆ. ನಿರ್ಲಕ್ಷ್ಯವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು. ಕೊರೊನಾ ತಡೆಗಟ್ಟಲು ಜಿಲ್ಲಾಡಳಿತ ನಿರಂತರವಾಗಿ ಶ್ರಮಿಸುತ್ತಿದೆ. 3ನೇ ಅಲೆ ಬರುವುದಕ್ಕಿಂತ ಮುಂಚೆಯೇ ಲಸಿಕೆ ಹಾಕಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತಿದೆ. ಅನೇಕ ಹಳ್ಳಿಯಲ್ಲಿ ಲಸಿಕೆ ಪಡೆಯಲು ಜನರು ಹಿಂದೇಟು ಹಾಕುತ್ತಿದ್ದಾರೆ. ತಪ್ಪು ಕಲ್ಪನೆಗಳಿಂದ ಹೊರ ಬರಬೇಕು ಎಂದು ಹೇಳಿದರು. ಬಡ ವರ್ಗದ ರೋಗಿಗಳೇ ಸರಕಾರಿ ಆಸ್ಪತ್ರೆಗೆ ಬರುವುದರಿಂದ ಅವರಿಗೆ ಉತ್ತಮ ಚಿಕಿತ್ಸೆ ನೀಡಿ ಅವರ ಆರೋಗ್ಯವನ್ನು ಕಾಪಾಡಿದರೆ ಒಳ್ಳೆಯ ಹೆಸರು ಬರುತ್ತದೆ.  ಸರಕಾರದಿಂದ ಬರುವ ಎಲ್ಲಾ ಸವಲತ್ತುಗಳು ರೋಗಿಗಳಿಗೆ ತಲುಪುವಂತೆ ಮಾಡ ಬೇಕು.  ವೈದ್ಯರು  ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಪರಿಶೀಲಿಸಿ ಅವರಿಗೆ ಅಗತ್ಯ ವಾದ ಲಸಿಕೆ ಬಗ್ಗೆ ಮಾಹಿತಿ ನೀಡಬೇಕು ಮಾತ್ರೆ ಔಷಧಿಗಳನ್ನು ನೀಡಬೇಕು ಎಂದು ಸೂಚಿಸಿದರು. ಪಟ್ಟಣದ ಸಾರ್ವಜನಿಕ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ವೈದ್ಯರು ತಾತ್ಸಾರ ಮನೋಭಾವನೆ ತೋರಿಸುತ್ತಾರೆ.  ಸ್ವಚ್ಛತೆ ಇಲ್ಲ, ಎಂಬ ದೂರು ಗಳು ಸಾರ್ವಜನಿಕರಿಂದ ಬರುತ್ತಿದ್ದು, ನಿಯೋಜಿತ ಆಡಳಿತಾಧಿಕಾರಿ ಯಾದ ಅನಂತ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು..‌ನೀವು ಏನು ಕೆಲಸ ಮಾಡುತ್ತಿದ್ದೀರ ಎಂದು RCH ವಿಜಯ ಕೆ…ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ, ಆಸ್ಪತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಬಳಕೆ ಮಾಡಬೇಕು ಹಾಗೂ ಮಾತ್ರೆ ಔಷಧ ಇಲ್ಲದೆ ಇದ್ದರೆ ಇಲಾಖೆ ಯಿಂದ ತರಿಸಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುದಗಲ್ಲ ನ  ಪ್ರದೇಶದಲ್ಲಿ ಆರೋಗ್ಯ ನಿರೀಕ್ಷಕರು ಹಾಗೂ ಎಎನ್‌ಎಂಗಳು ಪ್ರತಿ ಮನೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಹಾಗೂ ಲಸಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಬೇಕು. ಪಸ್ಟ್ ಡೋಸ್ ಹಾಗೂ ಸೆಕೆಂಡ್ ಡೋಸ್ ಲಸಿಕೆ ಬಗೆ  ಎಲ್ಲಾ ಸಿಬ್ಬಂದಿ ಮನೆಮನೆಗೆ ತೆರಳಿ ಸಮೀಕ್ಷೆ ಮಾಡುವಂತೆ ಸೂಚಿಸಿದರು.. ಆರೋಗ್ಯ ಮನುಷ್ಯನಿಗೆ ತುಂಬಾ ಅಗತ್ಯವಾದುದು. ಬಡವರು ಸರಕಾರಿ ಆಸ್ಪತ್ರೆಗಳನ್ನೇ ನಂಬಿರುತ್ತಾರೆ. ಅವರಿಗೆ ಮೋಸ ವಾಗಬಾರದು ನಿಯತ್ತಿನಿಂದ ಕೆಲಸಮಾಡಿ ಸಮಾಜದಲ್ಲಿ ಉತ್ತಮ ಹೆಸರು ಪಡೆಯಿರಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ RCH ವಿಜಯ ಕೆ ಸಮುದಾಯ ಆರೋಗ್ಯ ಕೇಂದ್ರ ವೈದ್ಯರು ರಾದ ಅನಂತ ಕುಮಾರ್ ಹಾಗೂ ತಾಲ್ಲೂಕ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀ ಈಶ್ವರ್ ಎಮ್ ವಜ್ಜಲ್* ಘಟಕ ಅಧ್ಯಕ್ಷರಾದ ಸಣ್ಣ ಸಿದ್ದಯ್ಯ ಜ್ಞಾನಪ್ಪಯ್ಯನವರ್, ಕಾರ್ಯದರ್ಶಿಯಾದ ಮಂಜುನಾಥ ನಂದವಾಡಗಿ,ನಾಮ ನಿರ್ದೇಶನ ಸದಸ್ಯರಾದ ಫಕೀರಪ್ಪ ಕುರಿ, ಉದಯ್ ಕಮ್ಮಾರ, ಹಾಗೂ ಚಂಧಾವಲಿ ಸಾಬ್ ಜಂಗ್ಲಿ, ಶರಣಪ್ಪ ಹಂಚನಾಳ, ಗದ್ಯಪ್ಪ ಜಕ್ಕೇರಮಡು, ರಫಿ ಟೊಮೊಟೊ, ಆದರ್ಶ ಸಜ್ಜನ್, ಷಣ್ಮುಖ, ನೇತಾಜಿ, ರಮೇಶ್, ಹಾಗೂ ಪಕ್ಷದ ಎಲ್ಲಾ ಪಧಾದಿಕಾರಿಗಳು ಮುಖಂಡರು ಕಾರ್ಯಕರ್ತರು ಭಾಗವಹಿಸಿದರು. ವರದಿ – ಸಂಪಾದಕೀಯ

Leave a Reply

Your email address will not be published. Required fields are marked *