ಮೃತ ಕಾರ್ಮಿಕ ಕುಟುಂಬಕ್ಕೆ 2ಲಕ್ಷ₹ ಪರಿಹಾರ ಕೊಡಿ-ಗುನ್ನಳ್ಳಿ ರಾಘವೇಂದ್ರ ಆಗ್ರಹ …..

Spread the love

ಮೃತ ಕಾರ್ಮಿಕ ಕುಟುಂಬಕ್ಕೆ 2ಲಕ್ಷಪರಿಹಾರ ಕೊಡಿಗುನ್ನಳ್ಳಿ ರಾಘವೇಂದ್ರ ಆಗ್ರಹ …..

ವಿಜಯನಗರ  ಜಿಲ್ಲೆ ಕೂಡ್ಲಿಗಿ,ಕಾರ್ಮಿಕ ಕಾರ್ಡ್ ಫಲಾನುಭವಿ ಹಾಗೂ ಕಟ್ಟಡ ಕಾರ್ಮಿಕ ಮೃತಪಟ್ಟಾಗ ಸರ್ಕಾರ, ಇಲಾಖೆಯ ಮೂಲಕ ಮೃತ ಕಾರ್ಮಿಕ ಕುಟುಂಬಕ್ಕೆ ಅಂತ್ಯ ಸಂಸ್ಕಾರ ಹಾಗೂ ಅನುಗ್ರಹ ರಾಶಿ ವೆಚ್ಚಕ್ಕೆಂದು ಒಟ್ಟು 54ಸಾವಿರ₹ಗಳನ್ನು ಮಂಜೂರು ಮಾಡುತ್ತಿದೆ. ಬೆಲೆ ಏರಿಕೆ ಹಿನ್ನಲೆಯಲ್ಲಿ  ಅದು ನೊಂದ ಹಾಗೂ ಸಂಕಷ್ಟದಲ್ಲಿರುವ ಕುಟುಂಬಕ್ಕೆ, ಯಾವುದೇ ರೀತಿಯಲ್ಲಿ ಖಾಯಂ ನೆರವಿಗೆ ಸಹಕಾರಿಯಾಗಲಾರದು. ಕಾರಣ ಸರ್ಕಾರ ಮೃತ ಕಾರ್ಮಿಕ ಕುಟುಂಬಕ್ಕೆ ತಲಾ 2ಲಕ್ಷಕ್ಕೂ ಹೆಚ್ಚು ಹಣ ಮಂಜೂರು ಮಾಡಬೇಕೆಂದು, ಸಿಐಟಯು ಕಾರ್ಯದರ್ಶಿ ಹಾಗೂ ಕಾರ್ಮಿಕ ಮುಖಂಡ ಗುನ್ನಳ್ಳಿ ರಾಘವೇಂದ್ರ ಸರ್ಕಾರಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ.ಅವರು ಹಲವು ದಿನಗಳ ಹಿಂದೆಯಷ್ಟೆ ಮೃತಪಟ್ಟಿದ್ದ,ಕೂಡ್ಲಿಗಿ ತಾಲೂಕು ಬಂಡೇ ಬಸಾಪುರ ತಾಂಡ ನಿವಾಸಿ ಹಾಗೂ ಕಟ್ಟಡ ಕಾರ್ಮಿಕ ತಾವರೆನಾಯ್ಕ ಕುಟುಂಬಕ್ಕೆ. ಸರ್ಕಾರ ಕಾರ್ಮಿಕ ಇಲಾಖೆಯಿಂದ ನೀಡಲ್ಪಟ್ಟಿರುವ 54ಸಾವಿರ ಹಣವನ್ನು ಮಂಜೂರು ಮಾಡಿದ್ದು, ಕಾರ್ಮಿಕ ಸಂಘಟನೆ ಯ ಕಚೇರಿಯಲ್ಲಿ ಲಭ್ಯವಾದ ಪರಿಹಾರ ಹಣ ಮಂಜೂರು ಆಗಿರುವ ಪತ್ರವನ್ನು.ಪಟ್ಟಣದ ಶ್ರೀಕೊತ್ತಲಾಂಜನೇಯ ದೇವಸ್ಥಾನದ ಹತ್ತಿರವಿರುವ, ಸಿಐಟಿಯು ಹಾಗೂ ಕಟ್ಟಡ ಕಾರ್ಮಿಕ ಸಂಘದ ಕಚೇರಿಯಲ್ಲಿ ಬಿಬಿ ತಾಂಡದ ಲಕ್ಷ್ಮೀಬಾಯಿ ತಾವರೆ ನಾಯ್ಕರವರಿಗೆ,ಕಾರ್ಮಿಕ ಇಲಾಖೆಯಿಂದ ನೀಡಲ್ಪಡುವ ಹಣ ಮಂಜೂರಾತಿ ಪತ್ರ ನೀಡಿ ಮಾತನಾಡಿದರು.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಲೆ ಏರಿಕೆ ನೀತಿ ಕಾರ್ಮಿಕರಿಗೆ ಹಾಗೂ ರೈತರಿಗೆ ಮಾರಕವಾಗಿದ್ದು,ಕಾರ್ಮಿಕರಿಗೆ ಕಿಟ್ಟು ಕೊಡೋ ನೆಪದಲ್ಲಿ ಸರ್ಕಾರಗಳಿಂದ ಕಾರ್ಮಿಕರ ಹಣವನ್ನು ಲೂಟಿ ಹೊಡೆಯುವ ಹುನ್ನಾರ ನಡೆಸಲಾಗಿದೆ. ಕೋವಿಡ್ ಹಣ ಸಮರ್ಪಕವಾಗಿ ಒದಗಿಸಿಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಿಲ್ಲ,ನೊಂದ ಅರ್ಹ ಫಲಾನುಭವಿಗಳಿಗೆ ಯೋಗ್ಯ ಪರಿಹಾರ ಹಣ ನೀಡುತ್ತಿಲ್ಲ, ಕಾರ್ಮಿಕರ ಹಣದಲ್ಲಿ ಆಡಳಿತ ನಡೆಸುವ ಸರ್ಕಾರಗಳು,ಕಾರ್ಮಿಕರ ಕಣ್ಣೀರೊರವಸುವುದನ್ನು ಬಿಟ್ಟು ಅವೈಜ್ಞಾನಿಕ ನೀತಿಯ ಮಾನದಂಡದಂತೆ ಪರಿಹಾರ ನೀಡಲಾಗುತ್ತಿದದೆ.ಇದು ಸರ್ಕಾರ ಕಾರ್ಮಿಕರ  ಮೂಗಿಗೆ ತುಪ್ಪ ಸವರುವ ಕಾರ್ಯವಾಗಿದೆ ಎಂದು ಆಕ್ರೋಶ ವ್ಯೆಕ್ತಪಡಸಿದರು.ಶೀಘ್ರವೇ ಸರ್ಕಾರ  ಪರಿಹಾರ ಹಣ ಹೆಚ್ಚಿಸಬೇಕು ಹಾಗೂ ಸೌಲಭ್ಯಗಳನ್ನು ತುರ್ತಾಗಿ ಒದಗಿಸಬೇಕಿದೆ ಎಂದು, ಗುನ್ನಳ್ಳಿ ರಾಘವೇಂದ್ರ ಸರ್ಕಾರಗಳಿಗೆ ಈ ಮೂಲಕ ಒತ್ತಾಯಿಸಿದರು.ಕಾರ್ಮಿಕ ಮುಖಂಡರು ಹಾಗೂ ಕಾರ್ಮಿಕ ಸಂಘದ ಪದಾಧಿಕಾರಿಗಳು ಇದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *