ತಾವರಗೇರಾ ಪಟ್ಟಣದಲ್ಲಿ ಡಾ//ಬಿ.ಆರ್.ಅಂಬೇಡ್ಕರವರ 130 ನೇ ಜಯಂತಿ ಇಂದು ಆಚರಿಸಲಾಯಿತು.

Spread the love

ತಾವರಗೇರಾ ಪಟ್ಟಣದಲ್ಲಿ  ಡಾ//ಬಿ.ಆರ್.ಅಂಬೇಡ್ಕರವರ 130 ನೇ ಜಯಂತಿ ಇಂದು ಆಚರಿಸಲಾಯಿತು.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಡಾ//ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ಡಾ//ಬಿ.ಆರ್.ಅಂಬೇಡ್ಕರ ರವರ 130 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಅದ್ದೂರಿ ಕಾರ್ಯಕ್ರಮ ಆಚರಿಸಲಾಯಿತು, ಡಾ//ಬಿ.ಆರ್.ಅಂಬೇಡ್ಕರ ರವರ ಮೂರ್ತಿಗೆ ಹೂವಿನ ಹಾರ ಹಾಗೂ ಜೈ ಭೀಮನ ಧ್ವಜಾರೋಣ ಮಾಡುವ ಮೂಲಕ ಜೊತೆಗೆ ಡಾ//ಬಿ.ಆರ್.ಅಂಬೇಡ್ಕರ ರವರ ಕ್ರಾಂತಿಕಾರಿ ಹಾಡು ಹಾಡುವ ಮೂಲಕ ಯುವಕರನ್ನ ಒಗ್ಗೂಡಿಸಿದರು, ವಿಶೇಷವಾಗಿ ಡಿಎಸ್.ಎಸ್. ಸಂಘದ ರಾಜ್ಯ ಸಂಚಾಲಕರಾದ ಶ್ರೀ ಅನಂದ ಬಂಡಾರಿಯವರ ನೇತೃತ್ವದ ಮೂಲಕ ಡಾ//ಬಿ.ಆರ್.ಅಂಬೇಡ್ಕರ ರವರ ವೃತ್ತದ ಹತ್ತಿರ ನೂತನವಾಗಿ ಬುದ್ದನ ವನಕ್ಕೆ ಪಾದರ್ಪಣೆ ಮಾಡುವ ಮೂಲಕ ಯಶಸ್ವಿಯಾಗಿ ಕಾರ್ಯಕ್ರಮ ಹಮ್ಮಿಕೊಂಡರು, ಎಲ್ಲ ಜನಾಂಗದಲ್ಲಿ ಕೂಡ ಬಡವರಿದ್ದು ಅವರ ಕುಟುಂಬ ಅಭಿವೃದ್ಧಿಯಾಗಬೇಕಾದರೆ ಮಕ್ಕಳಿಗೆ ಉತ್ತಮವಾದ ಶಿಕ್ಷಣ ನೀಡಿದಾಗ ಮಾತ್ರ ಸಾಧ್ಯ ಎಂದರು. ಅಂದಿನ ಸಮಾಜವನ್ನು ಆದರ್ಶ ಸಮಾಜವನ್ನಾಗಿ ಮಾಡುವ ಸಂಕಲ್ಪದೊಂದಿಗೆ ತಮ್ಮ ಕಲ್ಪನೆಯ ಸುಖಿರಾಜ್ಯ ವನ್ನಾಗಿ ಬದಲಾಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅಂಬೇಡ್ಕರ್ ರವರದು ಪ್ರಜಾಪ್ರಭುತ್ವವು ಕೇವಲ ಸರ್ಕಾರದ ಒಂದು ರೂಪವಲ್ಲ. ಅದು ಪ್ರಮುಖವಾಗಿ ಸಹಬಾಳ್ವೆಯ ಸೊಗಸು ಮತ್ತು ಅನುಭವವನ್ನು ಪರಸ್ಪರ ದಟೈಸುವ ಒಂದು ಜೋಡಣಿಯಾಗಿದೆಯೆಂದು ನಂಬಿದವರು. ಹಾಗಾಗಿ ಇವರು ಮೂಲಭೂತವಾಗಿ ಅದು ಸಹವರ್ತಿಗಳೆಡೆಗೆ ತೋರುವ ಗೌರವ ಭಾವನೆಗಳು ಸೇರಿ  ಹತ್ತು ಹಲವಾರು ಸಮಾಜಿಕ ಮೌಲ್ಯಾಧಾರಿತ ವೈಜ್ಞಾನಿಕ ಅಭಿವೃದ್ಧಿ ಪರ ಚಿಂತನಗಳ ಸಿದ್ದಾಂತ್ ಗಳು ದೇಶಕ್ಕೆ ನೀಡಿದ್ದಾರೆ ಎಂಬುದು ಮರೆಯುವಂತಿಲ್ಲ, ಇವರ  ತ್ಯಾಗ, ಸಾಮಾಜಿಕ ಸಮಾನತೆ, ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಕಚ್ಚೆದೇಯ ಮನೋಭಾವ ಹಾಗೂ ನೈಜತೆ ವಿಚಾರಗಳು ಇಂದಿನ ಸಮಾಜಕ್ಕೆ ಪ್ರೇರಣೆ, ಮಾರ್ಗದರ್ಶನ ಎನ್ನುವಂದತ್ತು ಸತ್ಯ. ಡಾ.ಬಿ.ಆರ್. ಅಂಬೇಡ್ಕರ ಅವರೊಬ್ಬ ಸಮಾಜಮುಖಿ ಚಿಂತಕ, ಆಧ್ಯಾತ್ಮ ಜೀವಿ, ರಾಜಕೀಯ ಮುತ್ಸದ್ದಿ, ಕಾನೂನು – ಆರ್ಥಿಕ ತಜ್ಞ, ಅಪ್ರತಿಮ ಸಂಶೋಧಕ, ನೇರ ನುಡಿಯ ಪತ್ರಕರ್ತ, ಚಿಂತನಶೀಲ ಸಾಹಿತಿ, ಅಪ್ರತಿಮ ರಾಷ್ಟ್ರೀಯವಾದಿ ಮತ್ತು ಅಗ್ರಮಾನ್ಯ ದೇಶಭಕ್ತ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಅಗಾಧ ಜ್ಞಾನಿ, ಅವರು ರಚಿಸಿದ ಸಂವಿಧಾನ ಭಾರತಕ್ಕಲ್ಲದೇ ಇಡಿ ವಿಶ್ವಕ್ಕೆ ಮಾದರಿ, ಈ ಕಾರ್ಯಕ್ರಮದಲ್ಲಿ ವಿಶೇಷ ಭಾಷಣಕಾರಿಯಾಗಿ ಡಾ// ಗವೀಸಿದ್ದಪ್ಪ ಅಂದ್ರಾಳರವರು, ಶೇಖರಗೌಡ ಸರನಾಡಗೌಡ್ರು, ಮುಂಕಧರಾವ್ ಭವಾನಿ ಮಠರವರು, ನಾಧರ ಪಾಷ್ ಮುಲ್ಲಾರವರು, ಶ್ರೀಮತಿ ಸುವರ್ಣಮ್ಮ ಕುಂಬಾರ ರವರು, ಪಿ.ಎಸ್.ಐ.ಗೀತಾಂಜಲಿ ಶಿಂಧೆಯವರು, ಆನಂದ ಬಂಡಾರಿಯವರು, ದುರುಗೇಶ ನಾರಿನಾಳರವರು, ಪಿ.ರಮೇಶ ರವರು, ಜಿಲಾನಿಸಾಬ ಬಳೂಟಗಿ ರವರು,  ಸಾಗರ ಬೇರಿ ರವರು, ಅಮರೇಶ ಗಾಂಜಿಯವರು, ರಾಜಾ ನಾಯಕ ರವರು, ಯಮನೂರಪ್ಪ ಬಿಳೆಗುಡ್ಡ ರವರು, ಹೇಮರಾಜ್ ವೀರಾಪುರ ರವರು, ಲಿಂಗದಹಳ್ಳಿ ಪಂಪಾಪತಿಯವರು,  ಇತರರು ಈ ವೇಧಿಕೆಯಲ್ಲಿ ಪಾಲುಗೊಂಡಿದ್ದರು   ವರದಿ – ಸಂಪಾದಕೀಯ

Leave a Reply

Your email address will not be published. Required fields are marked *