ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಸಿಹಿ ಪಾಯಸ ನೀಡುವ ಮೂಲಕ ಶಾಲೆ ಪ್ರಾರಂಭಿಸಲಾಯಿತು…

Spread the love

ಕೊಪ್ಪಳ ಜಿಲ್ಲಾ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ಸಿಹಿ ಪಾಯಸ ನೀಡುವ ಮೂಲಕ ಶಾಲೆ ಪ್ರಾರಂಭಿಸಲಾಯಿತು

ಜಗತ್ತೆ ಈ ಕರೊನ ಮಹಾಮಾರಿ ರೋಗಕ್ಕೆ ತುತ್ತಾಗಿ, ಸಾವು ನೋವುಗಳ ನಡುವಿನಲ್ಲಿ ಸಾವಿರಾರು ಕುಟುಂಬಗಳು ಬಿಧಿ ಪಾಲಾಗಿ ಜೀವಿಸುವುದು ಅನಿವಾರ್ಯವಾಗಿದೆ. ಜೊತೆಗೆ ವಿಧ್ಯಾರ್ಥಿಗಳ ಬದುಕು ಹೇಳಲಾಗದ ಪರಿಸ್ಥಿತಿ ಉದ್ಭವವಾಗಿದೆ, ಆದರೂ ಸರಕಾರವು ದಿಟ್ಟ ನಿರ್ಧಾರ ತೆಗೆದುಕೊಂಡು ಇಂದು ಶಾಲೆಗಳನ್ನು ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದ್ದು ವಿಶೇಷವಾಗಿದೆ, ಜೊತೆಗೆ ಸರ್ಕಾರವು ನೀಡಿರುವ ಷರತ್ತುಗಳಿಗೆ ತಕ್ಕಂತೆ ಶಾಲೆಯಲ್ಲಿ ಶಿಕ್ಷಕರು ಸರ್ಕಾರದ ಷರತ್ತುಗಳನ್ನು ಚಾಚು ತಪ್ಪದೆ ಪಾಲಿಸಬೇಕು ಕೆಲವೊಂದು ಸರ್ಕಾರದ ಅಧಿಸೂಚನೆಗಳು, ಇರಲಿ ಒಟ್ಟಿನಲ್ಲಿ ಮುದ್ದು ಮಕ್ಕಳ ಭವಿಷ್ಯಕ್ಕಾಗಿ ಶಿಕ್ಷಕರು ತಮ್ಮ ಜೀವನವನ್ನೆ ಲೆಕ್ಕಿಸದೆ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಶಿಕ್ಷಕ ವೃಂದಕ್ಕೆ ಧನ್ಯವಾದಗಳು ಸಲ್ಲಿಸುತ್ತ, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಸಂಗನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸರ್ಕಾರ ನಿಡಿರುವ ಷರತ್ತುಗಳ ಆಧಾರದಡಿಯಲ್ಲಿ ಕರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಮಧ್ಯಾಹ್ನದ ಬಿಸಿ ಊಟವನ್ನು ಶಾಲೆಯಲ್ಲಿ ಮುದ್ದು ಮಕ್ಕಳಿಗೆ ಸಿಹಿ ಪಾಯಸದೊಂದಿಗೆ ಪ್ರಾರಂಭ ಮಾಡಿ ಮಕ್ಕಳೊಂದಿಗೆ ಮುಖ್ಯೋಪಾಧ್ಯಾಯರು ಸಿಹಿ ತಿನ್ನುವ ಮುಖಾಂತರ ಪ್ರಾರಂಬಿಸಲಾಯಿತು.   ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಜಯರಾಮ ಸರ್  ಹಾಗೂ ಶಿಕ್ಷಕ ಬಳಗದವರು ಮುರುಳಿ ಸರ್ ಸೌಮ್ಯ ಮೆಂಡಮ್ಮ ಸುಮಿತ್ರಾ ಮೆಂಡಮ್ಮ  ಪ್ರೀತಿ ಮೆಂಡಮ್ಮ ಹಾಜರಿದ್ದರು  ( ಅಡುಗೆ ಹಾಳಾದರೆ ಒಂದು ದಿನ ನಷ್ಟ, ಬೆಳೆ ಹಾಳಾದರೇ ಒಂದು ವರ್ಷ ನಷ್ಟ ಆದರೆ ವಿದ್ಯಾಭ್ಯಾಸ ಹಾಳಾದರೇ ಇಡೀ ಬದುಕೇ ನಷ್ಟ )

ವರದಿ – ಸೋಮನಾಥ ಹೆಚ್ ಎಮ್   

Leave a Reply

Your email address will not be published. Required fields are marked *