ಗಮೇಸಾ ಕಾರ್ಮಿಕರನ್ನು ಶೀಘ್ರವೇ ಕೆಲಸಕ್ಕೆ ಪುನರ್ ನೇಮಕ ಮಾಡಿಕೊಳ್ಳದಿದ್ದರೆ ಕಂಪನಿಗೆ ಬೀಗ ಮುದ್ರೆಯ ಎಚ್ಚರಿಕೆ

Spread the love

ಗಮೇಸಾ ಕಾರ್ಮಿಕರನ್ನು ಶೀಘ್ರವೇ ಕೆಲಸಕ್ಕೆ ಪುನರ್ ನೇಮಕ ಮಾಡಿಕೊಳ್ಳದಿದ್ದರೆ ಕಂಪನಿಗೆ ಬೀಗ ಮುದ್ರೆಯ ಎಚ್ಚರಿಕೆ ಶಿವಕುಮಾರ ಮ್ಯಾಗಳಮನಿ.

ಪಟ್ಟಣ ಸಮೀಪ ತೊಪ್ಪಲದೊಡ್ಡಿ ಗ್ರಾಮದ ಹತ್ತಿರ ಇರುವ ಗಮೇಸಾ ವಿಂಡ್ ಟರ್ಬೈನ್ ಕಂಪನಿಯ 19 ಹೆಚ್ಚು ಕಾರ್ಮಿಕರನ್ನು ಕಾನೂನು ಬಾಹಿರ ವಾಗಿ ಕೆಲಸದಿಂದ ವಜಾ ಮಾಡಿದ್ದನ್ನು ಖಂಡಿಸಿ ಹಾಗೂ ಪುನರ್ ನೇಮಕ ಮಾಡಿಕೊಳ್ಳಲು ಒತ್ತಾಯಿಸಿ, ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ CITU ನೇತೃತ್ವದಲ್ಲಿ ಕಂಪನಿಯ ಮುಂಭಾಗದಲ್ಲಿ ಕಾರ್ಮಿಕರು ನಡೆಸುತ್ತಿರುವ ಹೋರಾಟವು 32 ನೆಯ ದಿನಕ್ಕೆ ಕಾಲಿಟ್ಟಿದೆ.  ಈ ಹೋರಾಟಕ್ಕೆ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜಾ ವೆಂಕಟಪ್ಪ ನಾಯಕ, ಲೋಕಸಭಾ ಸದಸ್ಯರಾದ ರಾಜಾ ಅಮರೇಶ್ವರ ನಾಯಕ ಸೇರಿ ಸ್ಥಳಿಯ ಜನ ಪ್ರತಿನಿಧಿಗಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ರೈತರ, ಗ್ರಾಮಸ್ಥರ ಬೆಂಬಲವು ಇದೆ ಆದರೆ ಕಂಪನಿಯ ಮಾಲೀಕರು ಮಾತ್ರ ಹೋರಾಟವನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿ ಕಾರ್ಮಿಕರನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ಭೂಮಿ, ಗಾಳಿ, ನೀರು ಸೇರಿ ಎಲ್ಲವು ನಮ್ಮದು ಆದರೆ ಕೆಲಸ ಮಾತ್ರ ಪರರಿಗೆ ಕೊಟ್ಟಿದ್ದಾರೆ, ಏಳು ವರ್ಷಗಳ ಕಾಲ ಕಾರ್ಮಿಕರನ್ನು ದುಡಿಸಿಕೊಂಡು ಈಗ ವಜಾ ಗೊಳಿಸಿ ಸ್ಥಳೀಯರಲ್ಲದವರನ್ನು ನೇಮಕ ಮಾಡಿಕೊಂಡಿದ್ದು ಕಾನೂನು ಮತ್ತು ಸಂವಿಧಾನ ವಿರೋಧಿ ನಡೆಯಾಗಿದೆ ಕೂಡಲೇ ಎಚ್ಚೆತ್ತುಕೊಂಡು ಕಾರ್ಮಿಕರನ್ನು ಪುನಃ ಕೆಲಸಕ್ಕೆ ನೇಮಕ ಮಾಡಿಕೊಳ್ಳದಿದ್ದರೆ ಹತ್ತಿರದಲ್ಲೆ  ರೈತರ ‌ಮತ್ತು ಗ್ರಾಮಸ್ಥರ, ಜನಪ್ರತಿನಿಧಿಗಳ, ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಬೀಗ ಮುದ್ರೆಯನ್ನು ಹಾಕಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೋರಾಟದಲ್ಲಿ ಭಾಗವಹಿಸಿದ SFI ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ ಮಾತನಾಡಿ ಹೇಳಿದರು. ನಂತರ ಹೋರಾಟ ವನ್ನು ಉದ್ದೇಶಿಸಿ SFI ಕವಿತಾಳ ನಗರ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ ಮತ್ತು ಕಾರ್ಮಿಕ ಮುಖಂಡರಾದ ಲಕ್ಷ್ಮಣ್ ಸಿಂಗ್, ಸಿದ್ದರಾಮಯ್ಯ ಮಾತನಾಡಿದರು. ಈ ಸಂದರ್ಭದಲ್ಲಿ ಕವಿತಾಳ ನಗರ ಘಟಕದ ಕಾರ್ಯದರ್ಶಿ ವೆಂಕಟೇಶ, ಮುಖಂಡರಾದ ನಾಗಮೋಹನ್ ಸಿಂಗ್, ಮಲ್ಲಿಕಾರ್ಜುನ, ಮಹೇಶ್ ಯಡವಲ,  ಅರುಣ್ ಕುಮಾರ್ ಹಣಿಗಿ, ಲಿಂಗಣ್ಣ ಹುಸೇನಪುರ, ನಿಂಗಪ್ಪ ನಾಯಕ ತೊಪ್ಪಲದೊಡ್ಡಿ ಸೇರಿದಂತೆ ಕಾರ್ಮಿಕರು ಇದ್ದರು. ವರದಿ –   ಆನಂದ್ ಸಿಂಗ್ ಕವಿತಾಳ

Leave a Reply

Your email address will not be published. Required fields are marked *