ಈದ್ ಮಿಲಾದುನ್ನಬಿ ಸರಳ ಆಚರಣೆ,….

Spread the love

 ಈದ್ ಮಿಲಾದುನ್ನಬಿ ಸರಳ ಆಚರಣೆ,….

ಹಜರತ್ ಸೈಯದ್ ಶಾವಲಿ ಅಂಜುಮನ್ ಕಮಿಟಿ ವತಿಯಿಂದ ಮಂಗಳವಾರ ಹಜರತ್ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ಯ ಮದರ್ಸ ಮಕ್ಕಳಿಂದ ನಾತ್ ಶರೀಫ್ ಕಾರ್ಯಕ್ರಮ ಹಮ್ಮಿಕೊಂಡಿದ್ದರು, ಯಲಬುರ್ಗಾ: ಪೈಗಂಬರ್ ರವರ ಜನ್ಮದಿನದ  ಪ್ರಯುಕ್ತ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ ಮುಸ್ಲಿಂ ಧರ್ಮದವರು ಹಜರತ್ ಸೈಯದ್ ಶಾವಲಿ  ಅಂಜುಮನ್ ಮಸೀದಿಯಿಂದ ಜಾಮಿಯಾ ಮಸೀದಿ ಹಳಪೇಟೆ ವರೆಗೂ ಮೆರವಣಿಗೆ ನಡೆಸಿದರು ನಂತರ ಮಸೀದಿಯಲ್ಲಿ ಎಲ್ಲರೂ ಪ್ರಾರ್ಥನೆ ಸಲ್ಲಿಸಿದರು. ಜಾಮಿಯಾ ಮಸೀದಿಯಲ್ಲಿ  ಪ್ರಾಸ್ತವಿಕವಾಗಿ ಮಾತನಾಡಿದ ‘ನೆರೆಹೊರೆಯವರು ಹಸಿವಿನಿಂದ ಬಳಲುತ್ತಿರುವಾಗ, ತಮ್ಮ ಮನೆಯಲ್ಲಿ ಊಟ ಮಾಡಿ ನೆರೆಹೊರೆಯವರ ಸಂಕಷ್ಟಕ್ಕೆ ಆಗದವರು ನಿಜವಾದ ಇಸ್ಲಾಂನಲ್ಲಿ ನಂಬಿಕೆ ಉಳ್ಳವರು ಅಲ್ಲ ಎಂದು ಪ್ರವಾಸಿ ಮೊಹಮ್ಮದ್‌ (ಸ) ಹೇಳಿದ್ದಾರೆ’ ಎಂಬ ಸಂದೇಶವನ್ನು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಸಾರಿದ್ದಾರೆ ಅದರಂತೆ ನಾವು ನಡೆದುಕೊಳ್ಳಬೇಕು ಎಂದು ಹಿರಿಯರಾದ ಸೈಯದ್ ಸಾಬ್ ಚೇರ್ಮನ್ ಹೇಳಿದರು. ನಂತರ ವಾಸಿಂ ಮೌಲಾನ್ ಖಾಜಿ ಕೊಪ್ಪಳ ಹಾಗೂ ಹಸನ್ ಸಾಬ್ ಹಿರೇಮನಿ ವಕೀಲರು ಮತ್ತು ಮಹಮ್ಮದ್ ಅಲಿ ಆರಬಳ್ಳಿನ ಮಾತನಾಡಿದರು ನಮ್ಮ ಎಲ್ಲಾ ಮುಸಲ್ಮಾನ ಬಾಂಧವರು ಶ್ರದ್ಧಾಪೂರ್ವಕವಾಗಿ ಈದ್ ಮಿಲಾದುನ್ನಬಿ ಹಬ್ಬ ಆಚರಣೆ ಮಾಡುತ್ತಿರುವುದು ಎಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು. ಮುಧೋಳ ಗ್ರಾಮದ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಆಯ್ಕೆಯಾದ 12 ವಿದ್ಯಾರ್ಥಿಗಳಿಗೆ ಜಾಮಿಯಾ ಮಸೀದಿ ಹಳೆಪೇಟೆ ಕಮಿಟಿಯ  ಶಿಕ್ಷಕರಾದ ಖಾದಿರ್ ಬಾಷಾ ನೂರಾಬಾಷಾ ಅವರಿಂದ ಡಿಕ್ಷನರಿ ಗ್ರಾಮರ್ ಬುಕ್ ವಿತರಣೆ ಮಾಡಿದರು. ಈದ್ ಮಿಲಾದ್ ಹಬ್ಬದ ಅಂಗವಾಗಿ ಟ್ರ್ಯಾಕ್ಟರ್ ಮೂಲಕ  ಮದೀನಾ ಪ್ರತಿಕೃತಿ  ಆಕರ್ಷಕವಾಗಿತ್ತು.ಗ್ರಾಮದ ಅನೇಕ ಸಾರ್ವಜನಿಕರು ಕೈಮುಗಿದು ಭಕ್ತಿ ಸಮರ್ಪಿಸಿದರು. ಸಮಾಜದ ಯುವಕರು ಮಕ್ಕಳು ಸೆಲ್ಫಿಗೆ ಮುಬಿದ್ದ ತೆಗೆದುಕೊಂಡು ಸಂಭ್ರಮಿಸಿದರು.ಅಂಜುಮನ್ ಕಮೀಟಿಯಿಂದ ಈದ್ ಮಿಲಾದ್ ಅಂಗವಾಗಿ ಗ್ರಾಮದ ಸಾರ್ವಜನಿಕರಿಗೆ ಸಿಹಿ ಹಾಲಿನ ಶರ್ಬತ್  ಹಂಚಲಾಯಿತು. ಇದೇ ಸಂದರ್ಭದಲ್ಲಿ ಭಾಗವಹಿಸಿದ್ದ ಗ್ರಾಮ ಪಂಚಾಯತಿ ಸದಸ್ಯರಾದ ಖಾದರ್ ಭಾಷಾ ತೊಳಗಲ್ ಮತ್ತು ಹೊನ್ನೂರಸಾಬ್ ವಟಪರ್ವಿ. ಸಮಾಜದ ಮುಖಂಡರ,ಮೌಲಾಸಬ್ ಮೋತೆಖಾನ್,ಹುಸೇನಸಾಬ್ ಹಿರೇಮನಿ,ಹುಸೇನಸಾಬ್ಎಲ್ಲಿಗಾರ್, ಮರ್ತುಜ ಒಜುದಿನ ನೂರಾಬಾಷಾ, ಇನ್ನು ಹಲವಾರು ಉಪಸ್ಥಿತರು ಭಾಗಿಯಾಗಿದ್ದರು..

ವರದಿ ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *