ಲಿಂಗನಬಂಡಿ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕೆ ಭೂದಾನ ಮಾಡಿರುವ ಕಾರ್ಯ ಅಮೋಘ,

Spread the love

ಲಿಂಗನಬಂಡಿ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕೆ ಭೂದಾನ ಮಾಡಿರುವ ಕಾರ್ಯ ಅಮೋಘ,

ಯಲಬುರ್ಗಾ:ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸುವ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಪಂ ಮಾಜಿ ಸದಸ್ಯ ಸಿ.ಎಚ್.ಪೋಲಿಸಪಾಟೀಲ ಕರಮುಡಿ ಹೇಳಿದರು. ಪಟ್ಟಣದಲ್ಲಿ ಶನಿವಾರ ಗುತ್ತಿಗೆದಾರ ಬಾಲಚಂದ್ರ ಸಾಲಭಾವಿ ನಿವಾಸದಲ್ಲಿ ಹಮ್ಮಿಕೊಂಡಿದ್ದ ಕೊಪ್ಪಳ ಜಿಲ್ಲಾ ಉತ್ಸವದ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡ ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಬರೆದು 10 ಸರಕಾರಿ ಹುದ್ದೆಗಳಿಗೆ ಆಯ್ಕೆಗೊಂಡ ಚಿಕ್ಕಮನ್ನಾಪೂರದ ಗ್ರಾಮೀಣ ಪ್ರತಿಭೆ ಸಂಗನಗೌಡ ಮಾಲಿಪಾಟೀಲ ಈ ಇಬ್ಬರು ಸಾಧಕರಿಗೆ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಿ ಅವರು ಮಾತನಾಡಿದರು.ಡಾ.ಶಿವರಾಜ ಗುರಿಕಾರ ಅವರು ಕಳೆದ ಎರಡು ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.ಈಗಾಗಲೇ ತಮ್ಮ ಬರವಣಿಗೆಯ ಮೂಲಕ ಹಲವಾರು ಪುಸ್ತಕಗಳನ್ನು ಹೊರತಂದು ಬಹುದೊಡ್ಡ ಸಾಹಿತಿಯಾಗಿ ಹೊರ ಹೊಮ್ಮುತ್ತಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಯಲಬುರ್ಗಾ ಪ್ರಥಮ ದರ್ಜೆ ಕಾಲೇಜು ಉತ್ತರ ಕರ್ನಾಟಕದಲ್ಲಿಯೇ ಮಾದರಿ ಕಾಲೇಜು ಆಗಿ ಹೊರಹೊಮ್ಮಲು ಇವರ ಕಾರ್ಯ ವೈಖರಿಯೇ ಸಾಕ್ಷಿಯಾಗಿದೆ, ಚಿಕ್ಕಮನ್ನಾಪೂರ ಯುವಕ ಸಂಗನಗೌಡ ಪಾಟೀಲ ಇಂದಿನ ಯುವ ಜನತೆಗೆ ಮಾದರಿಯಾಗಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ 10 ಹುದ್ದೆ ಪಡೆದಿರುವ ಕಾರ್ಯ ಅಮೋಘವಾಗಿದೆ. ಯುವ ಜನತೆಗೆ ಪ್ರೇರಣೆಯಾಗಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಸಿದ್ದತೆ ನಡೆಸಿರುವ ವಿದ್ಯಾರ್ಥಿಗಳು ಇವರ ಮಾರ್ಗದರ್ಶನ ಪಡೆಯಿರಿ ಎಂದರು.ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಮಾನಪ್ಪ ಪೂಜಾರ್ ಮಾತನಾಡಿ ಗುತ್ತಿಗೆದಾರ ಬಾಲಚಂದ್ರ ಸಾಲಭಾವಿ ಅವರು ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಿದ್ದು ಅವರ ವಿಶಾಲ ಮನೋಭಾವನೆಯನ್ನು ತೋರಿಸುತ್ತದೆ. ಪ್ರತಿ ವರ್ಷ ರಾಷ್ಟ್ರೀಯ ಹಬ್ಬ ಆಚರಣೆಗಳ ಸಂದರ್ಭದಲ್ಲಿ ಇವರು ತಮ್ಮ ಗ್ರಾಮದ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ಕ ವಿತರಿಸುವ ಕಾರ್ಯ ಮಾಡಿದ್ದು ಹಾಗೇ ಲಿಂಗನಬಂಡಿ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕೆ ಉಚಿತ ಭೂದಾನ ಮಾಡಿ ಮಾನವೀಯತೆ ಕಾರ್ಯ ಮಾಡಿದ್ದಾರೆ. ಸದಾ ಸಮಾಜಕ್ಕೆ ಪ್ರೋತ್ಸಾಹಿಸುವ ಕಾರ್ಯ ಬಹಳ ಮಹತ್ವದ್ದಾಗಿದೆ, ತಾಲೂಕಿನ ಕೆಲ ಬಡ ವಿದ್ಯಾರ್ಥಿಗಳಿಗೆ ತಮ್ಮ ವೈಯಕ್ತಿಕ ಹಣದಲ್ಲಿ ಪ್ರವೇಶ ಶುಲ್ಕವನ್ನು ಭರಿಸಿದ ಉದಾಹರಣೆಗಳು ಸಾಕಷ್ಟಿವೆ. ಇನ್ನಷ್ಟು ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳಲು ಭಗವಂತ ಅವರಿಗೆ ಆಯುಷ್ಯ, ಆರೋಗ್ಯ, ಸಿರಿ ಸಂಪತ್ತು ಕೊಟ್ಟು ಕಾಪಾಡಲಿ ಎಂದರು. ಸನ್ಮಾನಗೊಂಡು ಪ್ರಾಚಾರ್ಯ ಡಾ.ಶಿವರಾಜ ಗುರಿಕಾರ, ಯುವ ಪ್ರತಿಭೆ ಸಂಗನಗೌಡ ಪಾಟೀಲ ಮಾತನಾಡಿ ಸನ್ಮಾನದಿಂದ ಜವಬ್ದಾರಿ ಹೆಚ್ಚಾಗಿದೆ. ಜೀವನದಲ್ಲಿ ಕೊರತೆಗಳು ಇದ್ದೇ ಇರುತ್ತವೆ. ಅವುಗಳನ್ನು ವಿದ್ಯಾರ್ಥಿಗಳು ದೂಷಿಸುತ್ತಾ. ಕೂಡದೇ ಸಾಧನೆಗೆ ತಯಾರಿ ಮಾಡಿಕೊಳ್ಳಬೇಕು. ಬಡತನ, ಕಷ್ಟಗಳು ಸಾಧನಗೆ ಅಡ್ಡಿಯಾಗುವುದಿಲ್ಲ, ನಿರಂತರ ಪರಿಶ್ರಮದಿಂದ ಸಾಧನೆ ಮಾಡಲು ಸಾದ್ಯವಾಗುತ್ತದೆ, ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯ ಹಮ್ಮಿಕೊಂಡ ಪ್ರತಿಯೊಬ್ಬರಿಗೂ ಅಭಾರಿಯಾಗಿದ್ದೇವೆ ಎಂದರು. ಇದೆ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ರಾಮಣ್ಣ ಸಾಲಭಾವಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಸದಸ್ಯ ರೇವಣೆಪ್ಪ ಹಿರೇಕುರಬರ, ಗುತ್ತಿಗೆದಾರ ಬಾಲಚಂದ್ರ ಸಾಲಭಾವಿ, ಮುಖಂಡರಾದ ಗದ್ದೆಪ್ಪ ಕುಡಗುಂಟಿ, ಈಶ್ವರ ಅಟಮಾಳಗಿ, ಫಿಕಾರ್ಢ ಬ್ಯಾಂಕ್ ಮಾಜಿ ನೀರ್ದೇಶಕ ಶರಣಗೌಡ ಪಾಟೀಲ, ಕರ್ನಾಟಕ ಜನ ಕಲ್ಯಾಣ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಸ.ಶರಣಪ್ಪ ಪಾಟೀಲ, ಉಪನ್ಯಾಸಕರಾದ ಹುಸೇನ ಬಡಿಗೇರ, ಹುಚ್ಚಪ್ಪ ಬೊಮ್ಮನಾಳ, ಮಹೇಶ ನಾಯಕ, ಭೀಮಪ್ಪ ರಾವಣಕಿ,, ಕಲ್ಲಪ್ಪ ಕರೇಗೌಡ್ರ, ಹಿರಿಯ ಸಾಹಿತಿಗಳಾದ ವಿ.ಎಸ್.ಶಿವಪ್ಪಯ್ಯನಮಠ, ಶರಣಬಸಪ್ಪ ದಾನಕೈ, ಮಲ್ಲು ಮಾಟರಂಗಿ, ಬಸವರಾಜ ಜಂಬಾಳಿ, ಕನಕರಾಜ ಸಾಲಭಾವಿ, ಮಂಜು ಪೂಜಾರ, ಅಮರೇಶ ಅರಕೇರಿ, ಪ್ರಕಾಶ ಧನ್ನೂರು, ಮುನ್ನಾಸಾಬ, ಇತರರು ಇದ್ದರು.

  ವರದಿ, ಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *