ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಎಲ್ಲರನ್ನೂ ಹೊರತೆಗೆಯುವುದರ ಅಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಸಾವನ್ನಪ್ಪಿದ್ದರು  ಏನಾದರೂ ಅನಾಹುತ ಸಂಭವಿಸಿದರೆ ವೇಗವಾಗಿ ಬರುವುದೇ ಅಗ್ನಿಶಾಮಕ ದವರ….

Spread the love

 

ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ಎಲ್ಲರನ್ನೂ ಹೊರತೆಗೆಯುವುದರ ಅಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಸಾವನ್ನಪ್ಪಿದ್ದರು  ಏನಾದರೂ ಅನಾಹುತ ಸಂಭವಿಸಿದರೆ ವೇಗವಾಗಿ ಬರುವುದೇ ಅಗ್ನಿಶಾಮಕ ದವರ….

9/10 2021 ನಡೆದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ಕಾಲುವೆ ಹತ್ತಿರ ಆಟವಾಡುತ್ತಿದ್ದಾಗ ಕಾಲು ಜಾರಿ ಕರಿಮಸೂತಿ ಕಾಲುವೆಗೆ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ. ಸ್ಥಳೀಯರು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಾಯದಿಂದ ನೀರಿಗೆ ಬಿದ್ದವರನ್ನು ಹೊರ ತಗೆಯುವಷ್ಟರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಕುರಿತು ಐಗಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮದ ಸರಕಾರಿ ಪ್ರೌಢ ಶಾಲೆಯ ಹತ್ತಿರ ಹಾಯ್ದು ಹೋಗಿರುವ ಕರಿಮಸೂತಿ ಕಾಲುವೆ ನೀರು ತುಂಬಿ ಹರಿಯುತ್ತಿದೆ. ಶನಿವಾರ ಸಂಜೆ 5 ಗಂಟೆ ಸುಮಾರಿಗೆ ನಾಲ್ಕು ಜನ ಮಕ್ಕಳು ಕಾಲುವೆ ಹತ್ತಿರ ಆಟವಾಡುತ್ತಿದ್ದರು. ಆ ಸಂದರ್ಭದಲ್ಲಿ ನಾಲ್ಕೂ ಜನರು ಕಾಲು ಜಾರಿ ಕಾಲುವೆಗೆ ಬಿದ್ದಿದ್ದರು. ಇವರಲ್ಲಿ ಶ್ರೀಧರ ಶಂಕರ ಪುಂಡಿಪಲ್ಲೆ, ವಿಶ್ವನಾಥ ವಿನಾಯಕ ಪುಂಡಿಪಲ್ಲೆಯನ್ನು ಕಾಲುವೆಯಿಂದ ಹೊರ ತೆಗೆಯಲಾಗಿದ್ದು ಅವರು ಆರೋಗ್ಯವಾಗಿದ್ದಾರೆ. ಆದರೆ ವಿಜಯ ವಿನಾಯಕ ಪುಂಡಿಪಲ್ಲೆ (7) ಹಾಗೂ ಸ್ವಪ್ನಾ ವಿನಾಯಕ ಪುಂಡಿಪಲ್ಲೆ (11) ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂಬ ಕೊರಗಿನಲ್ಲೇ ಆತ್ಮಹತ್ಯೆ ಮಾಡಿಕೊಂಡ ಯುವಕ.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *