ಸಿಟಿ ಹೈಸ್ಕೂಲ್ ವಿಜಯನಗರ ಹುಬ್ಬಳ್ಳಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತಿ….

Spread the love

ಸಿಟಿ ಹೈಸ್ಕೂಲ್ ವಿಜಯನಗರ ಹುಬ್ಬಳ್ಳಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಜಯಂತಿ….

ಹುಬ್ಬಳ್ಳಿಯ ವಿಜಯನಗರದಲ್ಲಿ ಇರುವ ಸಿಟಿ ಹೈಸ್ಕೂಲ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಶಾಲೆಯ ಮುಖ್ಯ ಗುರುಮಾತೆಯರಾದ ಶ್ರೀಮತಿ ವ್ಹಿ.ಡಿ ಜೋಶಿಯವರು ಕಾರ್ಯವನ್ನು ಉದ್ದೇಶಿಸಿ  ಮಾತನಡಿ ಮಹಾತ್ಮ ಗಾಂಧೀಜಿಯವರ ಜೀವನದ  ಸರಳತೆ ಹಾಗೂ ತತ್ವಗಳನ್ನು ಮತ್ತು ಶಾಸ್ತ್ರೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀಮತಿ ವ್ಹಿ.ಡಿ.ಜೋಶಿ, ಹಾಗೂ ಸಹ ಶಿಕ್ಷಕರಾದ ಶ್ರೀ ಪಿ.ಎ ಪೂಜಾರಿ, ಶ್ರೀ ಅಜಯ ಜಯರಾಮನವರ, ಶ್ರೀಮತಿ ಎಸ್.ಎಸ್ ಗೌರಿ, ಶ್ರೀಮತಿ ಎಸ್.ಎಮ್ ಗೋಧಿ, ಶ್ರೀಮತಿ ಆರ್.ಪಿ ಬೆಳ್ಳೂಬಿ, ಶ್ರೀಮತಿ ಸಂಗೀತಾ. ಬಿ , ಶ್ರೀಮತಿ ಮಾಧುರಿ ಕಟ್ಟಿ, ಶ್ರೀ ರಮೇಶ ಇಟಗೋಣಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ : ಮಹೇಶ ಶರ್ಮಾ

Leave a Reply

Your email address will not be published. Required fields are marked *