ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಸವರ್ಣಿಯರ ವಿರುದ್ಧ ದೂರು ಸಲ್ಲಿಸಿದ ಮೋಹನ್ ಕುಮಾರ್ ದಾನಪ್ಪ…

Spread the love

ಮಗು ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಂಡ ವಿಧಿಸಿದ ಸವರ್ಣಿಯರ ವಿರುದ್ಧ ದೂರು ಸಲ್ಲಿಸಿದ ಮೋಹನ್ ಕುಮಾರ್ ದಾನಪ್ಪ…

 

ಬೆಂಗಳೂರು: ಸೆ 28, ಕೊಪ್ಪಳ ಜಿಲ್ಲೆ ಮಿಯಾಪುರ ಗ್ರಾಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಚನ್ನದಾಸರ ಸಮಾಜದ ಎರಡು ವರ್ಷದ ಮಗು ಜನ್ಮ ದಿನದ ನಿಮಿತ್ಯ ತಂದೆಯು ಮಗುವನ್ನ ದೇವರ ದರ್ಶನಕ್ಕೆ ಕರೆದೊಯ್ದ ಸಂದರ್ಭದಲ್ಲಿ ಬಾಲಕ ದೇವಸ್ಥಾನದೊಳಗೆ ಅಚಾನಕ್ ಆಗಿ ಪ್ರವೇಶಿಸಿದ್ದಕ್ಕೆ ಮಗುವಿನ ಕುಟುಂಬಕ್ಕೆ 25 ಸಾವಿರ ರೂಪಾಯಿ ದಂಡ ವಿಧಿಸಿ ದೇವಸ್ಥಾನ ಅಪವಿತ್ರವಾಗಿದ್ದು ಕೈಗೊಳ್ಳುವ ಶುದ್ಧಿಕಾರ್ಯ, ಹೋಮ ಹವನ ಕಾರ್ಯಕ್ರಮಗಳಿಗೆ ತಗುಲುವ ವೆಚ್ಚವನ್ನ ನೀಡುವಂತೆ ಷರತ್ತು ವಿಧಿಸಿ ದಲಿತ ಕುಟುಂಬದ ಮೇಲೆ  ದೌರ್ಜನ್ಯವೆಸಗಿ ಅಸ್ಪೃಶ್ಯತೆ ಆಚರಣೆ ಮಾಡಿ ಅಮಾನವೀಯ ಕೃತ್ಯವೆಸಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ  ಕರ್ನಾಟಕ ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾ ನಿರ್ದೇಶಕರಾದ ಡಾ.ಪಿ.ರವೀಂದ್ರನಾಥ್, ಐಪಿಎಸ್. ರವರಿಗೆ ರಾಜ್ಯ ದಲಿತ ಮುಖಂಡರು ಹಾಗೂ ಹೈ ಕೋರ್ಟ್ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ದೂರು ನೀಡಿದರು,  ದೂರು ಸ್ವೀಕರಿಸಿದ ಡಿಜಿಪಿರವರು ಮಗುವಿನ ಕುಟುಂಬದವರು ದೂರು ನೀಡಲು ಮುಂದಾಗದೇ ಇರುವುದರಿಂದ ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚನೆ ನೀಡಿ ಅವರ ಮುಖಾಂತರ ಪ್ರಕರಣ ದಾಖಲಾಯಿಸಿದ್ದು ಅಗತ್ಯ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ರಾಜ್ಯದಲ್ಲಿ ಯಾವುದೇ ನಗರ, ಗ್ರಾಮಗಳಲ್ಲಿ ದಲಿತ ಸಮುದಾಯದವರಿಗೆ ದೇವಸ್ಥಾನ ಪ್ರವೇಶಕ್ಕೆ ಅಡ್ಡಿಪಡಿಸುವವರು, ದಲಿತ ಸಮುದಾಯದವರಿಗೆ ಹೋಟೆಲ್ ಗಳಲ್ಲಿ ಪ್ರತ್ಯೇಕವಾಗಿ ಕೂಡುವುದಕ್ಕೆ, ಪ್ರತ್ಯೇಕ ತಟ್ಟೆ ಲೋಟಗಳಲ್ಲಿ ತಿಂಡಿ ಪದಾರ್ಥಗಳನ್ನ ನೀಡುವವರ, ಚೌರ ಮಾಡಲು ನೀರಾಕರಿಸಿ ಅಸ್ಪೃಶ್ಯತೆ ಆಚರಣೆಗಳನ್ನ  ಮಾಡುತ್ತಿದ್ದರೆ ಅಂಥವರ ವಿವರಗಳನ್ನು ಲಿಖಿತ ದೂರು ಮೂಲಕ ನಮ್ಮ ಗಮನಕ್ಕೆ ತಂದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು!  ವರದಿ – ಸಂಪಾದಕೀಯ

Leave a Reply

Your email address will not be published. Required fields are marked *