ಪತ್ರಕರ್ತರ ಮಕ್ಕಳಿಗೆ ಉಚಿತ ಟ್ಯಾಬ್ ಗಳನ್ನು ವಿತರಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್,ಮತ್ತು  ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೆ ನೂತನ ಅಧ್ಯಕ್ಷರ ಪದಗ್ರಹಣ….

Spread the love

ಪತ್ರಕರ್ತರ ಮಕ್ಕಳಿಗೆ ಉಚಿತ ಟ್ಯಾಬ್ ಗಳನ್ನು ವಿತರಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್,ಮತ್ತು  ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಗೆ ನೂತನ ಅಧ್ಯಕ್ಷರ ಪದಗ್ರಹಣ….

ಬೆಂಗಳೂರು : ರಾಜಾಜಿನಗರದಲ್ಲಿರುವ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕೇಂದ್ರ ಕಚೇರಿಯಲ್ಲಿ  ಪತ್ರಕರ್ತರ ಮಕ್ಕಳಿಗೆ ಉಚಿತ ಟ್ಯಾಬ್ ನೀಡುವ  ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವಿವಿಧ ಘಟಕವಾರು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವನಕಲ್ಲು ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ. ಶ್ರೀ. ಶ್ರೀ.ಬಸವ ರಮಾನಂದ ಮಹಾ ಸ್ವಾಮೀಜಿಗಳು ವಹಿಸಿಕೊಂಡಿದ್ದರು.ಸಮಾಜದ ಅಂಕುಡೊಂಕನ್ನು ತಿದ್ದುವ ಕೆಲಸ ಪತ್ರಕರ್ತರದ್ದಾಗಿದ್ದು, ಅವರ ಬೆನ್ನೆಲುಬಾಗಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ನಿಂತಿದೆ ಈ ದಿನ ಸುಮಾರು 9 ಜನ ಪತ್ರಕರ್ತರ ಮಕ್ಕಳಿಗೆ ಉಚಿತ ಟ್ಯಾಬ್ ನೀಡುವ ಮತ್ತು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್  ವಿವಿಧ ಘಟಕವಾರು ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಡಾ. ಪುಣ್ಯವತಿ – ವೈದ್ಯಕೀಯ ಘಟಕ ರಾಜ್ಯ ಮಹಿಳಾ ಅಧ್ಯಕ್ಷರು, ಸೌಭಾಗ್ಯ – ರಾಜ್ಯ ಮಹಿಳಾ ಘಟಕ ಅಧ್ಯಕ್ಷರು,ಅನುರಾಧ ನಾಗರಾಜ್ – ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷರು, ಪ್ರದೀಪ್ – ಯೋಧರ ಮತ್ತು ಪೋಲೀಸರ ಹಿತರಕ್ಷಣ ಸಮಿತಿಯ ಬೆಂಗಳೂರು ನಗರ ಜಿಲ್ಲಾಧ್ಯಕ್ಷರು,ಮಾರುತಿ ಬಡಿಗೆರಿ – ರಾಯಚೂರು ಜಿಲ್ಲಾ ಘಟಕ ಅಧ್ಯಕ್ಷರನ್ನಾಗಿ ನೇಮಿಸಿ ಆದೇಶ ಪತ್ರ ವಿತರಣೆಯೊಂದಿಗೆ ಗೌರವ ಸನ್ಮಾನ ಮಾಡಲಾಯಿತು. ಈ ಸುಮಧುರ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಡಾ. ಟಿ. ಶಿವಕುಮಾರ್ ನಾಗರ ನವಿಲೆ ಯವರು , ನಮ್ಮ ಸಂಸ್ಥೆ  ಸಮಾಜ ಸೇವಾ ಮನೋಭಾವನೆಯ ಉದ್ದೇಶದ ನಿಟ್ಟಿನಲ್ಲಿ ಸ್ಥಾಪನೆಯಾಗಿದ್ದು, ಅಂದಿನಿಂದ ಇಂದಿನವರೆಗೂ ಬಹಳಷ್ಟು ಸಮಾಜಮುಖಿ ಕೆಲಸವನ್ನು ಮಾಡುತ್ತಾ ಬಂದಿದೆ.  ಕರೋನ ಸಂದರ್ಭದಲ್ಲಿ ಯಾವ ಸರ್ಕಾರವು ಮಾಡದಂತ ಕೆಲಸಗಳನ್ನು ನಮ್ಮ ತಂಡ ಮಾಡಿದೆ. ಬಡವರಿಗೆ, ಕೈಲಾಗದವರಿಗೆ, ಹಸಿದವರಿಗೆ ಅನ್ನದಾನ ಮಾಡಿದೆ, ಉಚಿತ ಆಹಾರ ಕಿಟ್ ನೀಡಲಾಗಿದೆ, ಪತ್ರಕರ್ತರಿಗೆ ಅನ್ಯಾಯವಾದರೆ ಅವರ ಪರವಾಗಿ ಉಗ್ರ ಹೋರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನಮನ್ನಣೆ ಪಡೆಯುವಂತ ಕೆಲಸಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವ ಉದ್ದೇಶ ನಮದಾಗಿದೆ . ಇದಕ್ಕೆ ನಮ್ಮ ಪದಾಧಿಕಾರಿಗಳ ಸಹಕಾರ ಕೋರುತ್ತೇನೆ ಎಂದರು. ಹಾಗೆಯೇ ಈ ದಿನ ನೂತನವಾಗಿ ಆಯ್ಕೆಯಾದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ವಿವಿಧ ಘಟಕವಾರು ಅಧ್ಯಕ್ಷರಿಗೆ ಅಭಿನಂದನೆಗಳು.ನಿಮಗೆ ಶುಭವಾಗಲಿ  ನಿಮಗೆ ವಹಿಸಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡಯ್ಯಬೇಕು ಎಂದರು. ಪತ್ರಕರ್ತರ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ನಮ್ಮ ಸಂಸ್ಥೆ ಈಗಾಗಲೇ ಕೊರೋನ ಸಮಯದಲ್ಲಿ ಉಚಿತ ಆಹಾರ ಕಿಟ್ ಗಳ ವಿತರಣೆ, ಪತ್ರಕರ್ತ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಇತರೇ ಸೇವೆಗಳನ್ನು ಮಾಡಿದ್ದೂ, ಈ ದಿನ ಉಚಿತ ಟ್ಯಾಬ್ ಗಳನ್ನು ನೀಡಲಾಗಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.ಮಕ್ಕಳು ಚನ್ನಾಗಿ ಓದಿ ನಮ್ಮ ದೇಶಕ್ಕೆ ಕೀರ್ತಿ ತರುವಂತ ಕೆಲಸ ಮಾಡಲಿ ಎಂದು ಹರಸಿದರು.ಶ್ರೀ ಶ್ರೀ ಶ್ರೀ. ಬಸವ ರಮಾನಂದ ಸ್ವಾಮೀಜಿಗಳು ಜ್ಞಾನಿಗಳು, ಅನಾಥ ಮಕ್ಕಳ ಆಶ್ರಯದಾತರು.ಧಾರ್ಮಿಕವಾಗಿ, ಸಾಮಾಜಿಕವಾಗಿ ಅವರ ಸಾಧನೆ ಅಪಾರವಾಗಿದೆ. ಇಂತಹ ಸ್ವಾಮಿಗಳನ್ನು ಪಡೆದ ನಾವೇ ಧನ್ಯರು. ಹಾಗೂ ಅವರ ಸಾನಿಧ್ಯದಲ್ಲಿ ಅಧಿಕಾರ ಸ್ವೀಕರಿಸುತ್ತಿರುವ ಮತ್ತು ಟ್ಯಾಬ್ ಗಳನ್ನು ಪಡೆದುಕೊಳ್ಳುತ್ತಿರುವ ತಾವುಗಳು ಪುಣ್ಯವಂತರು. ಇವರ ಆಶೀರ್ವಾದ ಸದಾ ನಮ್ಮೊಂದಿಗಿರಲೆಂದು ಬೇಡುತ್ತಾ,ಈ ಕಾರ್ಯಕ್ರಮಕ್ಕೆ ಆಗಮಿಸಿದ ಪೂಜ್ಯರಿಗೆ ಭಕ್ತಿಪೂರ್ವಕ ಧನ್ಯವಾದಗಳು ಎಂದರು.ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ.ಶ್ರೀ. ಶ್ರೀ. ಡಾ. ಬಸವ ರಮಾನಂದ ಸ್ವಾಮೀಜಿಗಳು ಮಾತನಾಡಿ, ಶಿವಕುಮಾರ್ ನಾಗರ ನವಿಲೆ ಅಪರೂಪದ ವ್ಯಕ್ತಿ ಮತ್ತು ವ್ಯಕ್ತಿತ್ವದವರು. ತಾನಂದುಕೊಂಡ ಯಾವುದೇ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸುವ ಛಲವಾಧಿ, ನಿಷ್ಠಾವಂತ ಪತ್ರಕರ್ತ,ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡವರು, ತಮ್ಮನ್ನು ತಾವು ಸಮಾಜಕ್ಕಾಗಿಯೇ ಮುಡುಪಾಗಿಸಿಕೊಂಡವರು. ನಮ್ಮ ಮಠ ಸಂಕಷ್ಟದಲ್ಲಿ ಸಿಲುಕಿದ್ದಾಗ ಬಹಳಷ್ಟು ಸಹಾಯ ಮಾಡಿದ ಪುಣ್ಯ ಇವರದು. ನಮ್ಮ ಮಠದ ಸುತ್ತಾ ಮುತ್ತಲಿರುವ ಹಳ್ಳಿ ಹಳ್ಳಿಗಳಲ್ಲೂ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಮಹತ್ವ ಹರಡಬೇಕು. ಅಲ್ಲಿನ ಜನಕ್ಕೂ ನಿಮ್ಮ ಸೇವಾ ಭಾಗ್ಯ ದೊರಕಬೇಕು. ಕೊರೋನ ಸಂದರ್ಭದಲ್ಲಿ ನಿಮ್ಮ ಸೇವೆ ಅಪಾರವಾಗಿದ್ದು, ಬಹಳ ಪ್ರಗತಿಪರ ಕಾರ್ಯಗಳನ್ನು ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ. ಕೆಲವೇ ದಿನಗಳಲ್ಲಿ ಈ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಹೆಸರು ಮಾಡಲಿದೆ ಎಂದರು.ನೂತನವಾಗಿ ಆಯ್ಕೆಯಾದ ಅಧ್ಯಕ್ಷರುಗಳಿಗೆ ಅಭಿನಂದನೆಗಳು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂಬ ಸದುದ್ದೇಶದಿಂದ ಟ್ಯಾಬ್ ಗಳನ್ನು ವಿತರಣೆ ಮಾಡುತ್ತಿರುವುದು ಸಂಸ್ಥೆಯ ಘನತೆಯನ್ನು ಹೆಚ್ಚಿಸುತ್ತಿದೆ. ಈ ದಿನ ಟ್ಯಾಬ್ ಪಡೆಯುತ್ತಿರುವ ಎಲ್ಲಾ ಮಕ್ಕಳಿಗೆ ಶುಭವಾಗಲೆಂದು ಆಶೀರ್ವಾದಿಸಿದರು.ಇದೇ ಸಂದರ್ಭದಲ್ಲಿ ಭಕ್ತಾದಿಗಳ ಗೌರವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕಲೆ ಮತ್ತು ಸಾಂಸ್ಕೃತಿಕ ಹಿತರಕ್ಷಣ ಸಮಿತಿಯ ಅಧ್ಯಕ್ಷರಾದ ರವಿ ಸಂತುರವರು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಉಪಾಧ್ಯಕ್ಷರಾದ ಜಿ. ಎನ್. ರವಿಕುಮಾರ್, ಎಂ. ಪಿ. ಮಂಜುನಾಥ್, ಕಲ್ಪನಾ, ಮಹೇಶ್, ಶ್ರೀಮಂತ ಮಂಜು, ಡಾ. ನಾಗರಾಜ್ ಪುಟ್ಟಸ್ವಾಮಿ, ಅನಿಲ್ ಕುಮಾರ್,ಹೇಮಂತ್, ಹನುಮಂತಚಾರಿ ಹಾಗೂ ಚಂದ್ರಶೇಖರ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ವರದಿ ಕಣ್ಣು ಪತ್ರಿಕೆ ಮಂಜು ಪಾವಗಡ

Leave a Reply

Your email address will not be published. Required fields are marked *