ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಬೇಕು..

Spread the love

ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಪ್ರೋತ್ಸಾಹಿಸಬೇಕು..

ಹುಮನಾಬಾದ : ಜಾನಪದ  ಕಲೆ ನಮ್ಮ ಸಂಪ್ರದಾಯಕ, ಸಾಂಸ್ಕೃತಿಕ ಸಂಪತ್ತು, ಮುಂದಿನ ಪೀಳಿಗೆ ಮುಂದುವರೆಸಿಕೊಂಡು ಹೋಗಲು ಅವರಲ್ಲಿ ಆಸಕ್ತಿ ಮೂಡಿಸಬೇಕು.  ಜಾನಪದ ಕಲೆ ಹಾಗೂ ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ  ಶೀಘ್ರವಾಗಿ ಆಗಬೇಕು ಎಂದು ಮಾಜಿ ಸಚಿವರು, ಹಾಲಿ ಶಾಸಕರಾದ ರಾಜಶೇಖರ ಬಿ ಪಾಟೀಲರು ನುಡಿದರು. ಕರ್ನಾಟಕ ಜಾನಪದ ಪರಿಷತ್ತು ಬೀದರ ಹಾಗೂ ತಾಲೂಕು ಘಟಕ ಹುಮನಾಬಾದ ವತಿಯಿಂದ ಆಯೋಜಿಸಿದ್ದ ಬೀದರ ಜಿಲ್ಲಾ ಜಾನಪದ ಕಲಾ ಸಮ್ಮೇಳನ ಮತ್ತು ರಾಷ್ಟ್ರೀಯ ಜನಪದ  ನೃತ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಾನಪದ ಕಲೆ ಇತಿಹಾಸದ ಪ್ರಸಿದ್ಧವಾದ ಕಲೆಯಾಗಿದೆ. ಹಳ್ಳಿಯ ಸೊಗಡಿನ ಸುಂದರ ಸಂಸ್ಕೃತಿಯ ಭಾಷೆಯ ಸೊಬಗೇ ನಮ್ಮ ಸಂಪ್ರದಾಯದ ಜಾನಪದ ಕಲೆ, ಹಾಗಾಗಿ ಇದನ್ನು ಉಳಿಸಿಕೊಂಡು ಹೋಗುವುದು ನಮೆಲ್ಲರ ಆದ್ಯ ಕರ್ತವ್ಯವಾಗಿದೆ.ಅದೇ ರೀತಿ ನಗರದ ವೀರಭದ್ರಶ್ವೇರ ದೇವಾಲಯದಿಂದ ಕಲ್ಯಾಣ ಮಂಟಪದ ವರೆಗೆ ಸಾವಿರಾರು ಜನರು ಸ್ವ ಇಚ್ಚೆಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದು ಐತಿಹಾಸಿಕ, ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ ಕಲಾವಿದರ ಕಲಾ ಸಾಧನೆ ಮೆರುಗು ನೀಡಿದೆ. ನಮ್ಮ ಹಳ್ಳಿಯ ಸಂಸ್ಕೃತಿ ಮರೆತು ಹೋಗುತ್ತಿರುವ ಈ ಹೊತ್ತಿನಲ್ಲಿ ಇವರ ಕಲೆ ಕಂಡು ನಾವೆಲ್ಲರೂ ಮೂಕವಿಸ್ಮಯರಾಗಿದ್ದೇವೆ. ಇವರ ಕಲಾ ಸಾಧನೆಯನ್ನು ನೋಡಿ ನಮ್ಮ ಸಂಪ್ರದಾಯ ಉಳಿಸುವ ದಿಸೆಯಲ್ಲಿ ನಾವೆಲ್ಲರೂ ಮುಕ್ತ ಮನಸ್ಸಿನಿಂದ ಯೋಚನೆ ಮಾಡಬೇಕಾಗಿದೆ. ಹೊಸ ಮಾಹಿತಿ ತಂತ್ರಜ್ಞಾನದಿಂದ ನಮ್ಮ ಸಂಪ್ರದಾಯ ಹಾಳಾಗಿ ಹೋಗುತ್ತಿದೆ. ಇದನ್ನು ಕಾಪಾಡಲು ಪರಿಷತ್ತು ಮುಂದಾಗಬೇಕು.ಇಂದಿನ ದಿನಗಳಲ್ಲಿ ಬದಲಾಗುತ್ತಿರುವ ತಂತ್ರಜ್ಞಾನ ಮನಸ್ಥಿತಿ, ಟಿವಿ, ಸಿನಿಮಾ ಸೆಳೆತಗಳ ನಡುವೆ ಇನ್ನೂ ಜಾನಪದ ಕಲೆ ಉಳಿದಿದೆ ಎಂದರೆ ಅದಕ್ಕಿರುವ ಶಕ್ತಿ ಹಾಗೂ ಅದನ್ನು ಬೆಳೆಸಲು ಹೊರಟಿರುವ ಕಲಾವಿದರ ಆಸಕ್ತಿ ಕಾರಣ. ಜನಪದ ಕಲೆಗೆ ಸೂಕ್ತ ವೇದಿಕೆ, ಕಲಾವಿದರಿಗೆ ಪೂರಕ ಅವಕಾಶ, ಪ್ರೋತ್ಸಾಹವನ್ನು ಸರ್ಕಾರ, ಸಮಾಜ ಹಾಗೂ ನಾವೆಲ್ಲ ನೀಡಿ, ನಮ್ಮ ಸಾಂಸ್ಕೃತಿಕ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ.ಇಲ್ಲಿ ಅನೇಕ ಸಂತರು,ಶರಣರು,ಖುಷಿ ಮುನಿಗಳು ಜಾನಪದ ಸಂಸ್ಕೃತಿಗಾಗಿ ಶ್ರಮಿಸಿದ್ದಾರೆ. ಅವರನ್ನು ಗೌರವಿಸುವ ಕೆಲಸ ಸಹ ಆಗಬೇಕು.ಹಳೆ ಹಾಡುಗಳ ಮೂಲಕ ಜಾನಪದ ಸಾಹಿತ್ಯ ಉಳಿಸುವ ನಿಟ್ಟಿನಲ್ಲಿ ನಮ್ಮ ಹಿರಿಯರು ದುಡಿಯುತ್ತಿದ್ದಾರೆ.ಇವರನ್ನು ಗೌರವಿಸುವ ಕೆಲಸ ಮಾಡಬೇಕು.ಮಕ್ಕಳಿಂದ ಅತ್ಯುತ್ತಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾನಪದ ಲೋಕದ ರಸದೌತಣವನ್ನು ನಮ್ಮಗೆಲ್ಲರಿಗೂ ಉಣಬಡಿಸಿದ್ದಾರೆ.

ಹಿರಿಯ ಸಾಹಿತಿಗಳ ಮಾರ್ಗದಲ್ಲಿ ಈ ಸುಂದರ ಕಾರ್ಯ ಮೂಡಿ ಬರುತ್ತಿರುವುದು ಖುಷಿ ತಂದಿದೆ ಎಂದರು.ಕಲಾ ತಂಡಗಳ ನೃತ್ಯ ನೋಡಿ ಹುಮನಾಬಾದ ಜನರಿಗೆ ಬಹಳ ಆನಂದ ತಂದಿದೆ. ಜಾನಪದ ಸಾಹಿತಿಗಳ ಉನ್ನತಿಗಾಗಿ ಹಾಗೂ ಇವರ ಅಭ್ಯುದಯಕ್ಕಾಗಿ ದುಡಿಯಲು ಸಿದ್ಧರಿದ್ದೇವೆ. ಮಾಸಾಶನ 60 ವರ್ಷದಿಂದ ಕೊಡುವ ಬದಲು 50 ವರ್ಷಗಳಿಂದ ನೀಡುವಂತೆ ನಾಡಿನ ಮುಖ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸೋಣ ಎಂದರು.ಅತ್ಯಂತ ಕಡಿಮೆ ಜನಸಂಖ್ಯೆ ಇರುವ ಗೋಂಧಳಿ ಸಮಾಜದ ಸಿದ್ರಾಮ ವಾಘಮಾರೆ ಯವರನ್ನು ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. ಗೋಂಧಳಿ ಸಮಾಜದ ಕಲಾ ಸೇವೆ ನಿಜಕ್ಕೂ ಮಾದರಿಯಾಗಿದೆ. ಜನಪದ ಅಭಿರುಚಿ ಸರ್ವರಲ್ಲಿಯೂ ಮೂಡಿಬರಲಿ ಎಂದು ಹೇಳಿದರು. ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರು, ಹಿರಿಯ ಸಾಹಿತಿಗಳಾದ ಜಗನ್ನಾಥ ಹೆಬ್ಬಾಳೆಯವರು ಆಶಯ ಮಾತನಾಡಿ ಕರ್ನಾಟಕ ಜಾನಪದ ಪರಿಷತ್ತು 50 ವರ್ಷಗಳ ಹಿಂದೆ ಹುಟ್ಟಿದು,ಇದನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಹೊಣೆ ಪ್ರತಿಯೊಬ್ಬರ ಮೇಲಿದೆ.ಇದಕ್ಕೆ ಹಲವು ಹಿರಿಯ ಜಾನಪದ ಕಲಾವಿದರ ತ್ಯಾಗವಿದೆ. ಈ ದಿಕ್ಕಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ. ಹೀಗಾಗಿ ಜಾನಪದ ಲೋಕಕ್ಕೆ 3 ಕೋಟಿ ಅನುದಾನವನ್ನು ಬಿಡುಗಡೆ ಮಾಡಲು ರಾಜಕುಮಾರ ಹೆಬ್ಬಾಳೆಯವರ ಬಹಳ ಶ್ರರಮವನ್ನು ವಹಿಸಿ

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಅದಕ್ಕೆ ನಾನು ಅವರಿಗೆ ಅಭಾರಿಯಾಗಿದ್ದೇನೆ ಎಂದರು.ಇನ್ನು ಸಿದ್ರಾಮ ವಾಘಮಾರೆ ರವರ ಜನಪದ ಕಲಾ ಸೇವೆ ದೊಡ್ಡದು, ಹತ್ತು ಹಲವು ಕಡೆ ಅವರ ಕಲಾ ಸೇವೆಯನ್ನು ಪ್ರಚುರಪಡಿಸಿದ್ದಾರೆ.ಹೀಗಾಗಿ ಇವರನ್ನು ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದರು.ಇಲ್ಲಿಯ ಜನಪ್ರಿಯ ಶಾಸಕರಾದ ರಾಜಶೇಖರ ಪಾಟೀಲರ ಅಭಿವೃದ್ಧಿಯ ಸೇವೆಯ ಜೊತೆಗೆ ಸಂಸ್ಕೃತಿ ಕಟ್ಟುವ ಕೆಲಸವನ್ನು ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿರುವುದು ಶ್ರೇಷ್ಠ ಕೆಲಸ ಎಂದರು. ಈ ಕಾರ್ಯಕ್ಕೆ ಶಾಸಕರ ಸಹಕಾರ ಹಾಗೂ ಪ್ರೋತ್ಸಾಹ  ಬಹಷ್ಟು ಇದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ಜೊತೆಗೆ  ಎಲ್ಲಾ ಕಲಾವಿದರನ್ನು ಗೌರವಿಸುವ ಸಂಸ್ಕೃತಿ ಶಾಸಕರ ಕುಟುಂಬಕ್ಕೆ ಸಲ್ಲುತ್ತದೆ ಎಂದರು. ಬೀದರ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜಾನಪದ ಕಲಾವಿದರನ್ನು ಗುರುತಿಸುವ ಕೆಲಸವನ್ನು ಜಾನಪದ ಪರಿಷತ್ತು ಮಾಡುತ್ತಿದೆ.ಅದೇ ರೀತಿ ಬೀದರ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಜಾನಪದ ಸಮ್ಮೇಳನ ಮಾಡುವ ಉದ್ದೇಶ ಹೊಂದಿದ್ದೇವೆ.ಈ ದಿಸೆಯಲ್ಲಿ ಈ ಸಮ್ಮೇಳನ ಯಶಸ್ವಿಗೆ 5 ಕೋಟಿ ಬಿಡುಗಡೆ ಮಾಡಲು ಸರಕಾರಕ್ಕೆ  ಈಗಾಗಲೇ ಮನವಿಯನ್ನು ಸಲ್ಲಿಸಲಾಗಿದೆ.

ಈ ಸದರಿ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳಿಂದ ಸುಮಾರು 163 ಜಾನಪದ ಕಲಾವಿದರು ಈ ಸಮಾರಂಭಕ್ಕೆ ಆಗಮಿಸಿ, ಮೆರವಣಿಗೆ ಉದ್ದಕ್ಕೂ ಶೋಭೆಯನ್ನು ತಂದಿರುತ್ತಾರೆ. ಅದೇ ರೀತಿ ವಿವಿಧ ಶಾಲೆಯ ಮಕ್ಕಳಿಂದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಸುಂದರವಾಗಿ ಮೂಡಿ ಬರುತ್ತೀವೆ. ಮಾಸಾಶನವನ್ನು ಹಲವು ಕಲಾವಿದರಿಗೆ ಕೊಡಿಸುವ  ನಿಟ್ಟಿನಲ್ಲಿ ಪ್ರಮಾಣಿಕವಾಗಿ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು. ಜಾನಪದ ಹಿರಿಯ ಕಲಾವಿದರು,ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದ ಸಿದ್ರಾಮ ವಾಘಮಾರೆಯವರು ಮಾತನಾಡಿ ಬೀದರ ಜಿಲ್ಲೆಯ ಜನಪದ ಕಲೆಗಳು ಬಹು ವಿಶಿಷ್ಟವಾಗಿವೆ. ಪ್ರತಿಯೊಂದು ಕಲೆಗಳಲ್ಲಿ ತನ್ನದೇ ಆದ ಗತವೈಭವ ಹೊಂದಿವೆ. ಜಾನಪದವೆಂದರೆ ಅದೊಂದು ಜನ ಜೀವನ. ಈ ನಮ್ಮ ಜೀವನವೇ ಒಂದು ದೊಡ್ಡ ಕಲೆ. ಮನುಷ್ಯ ಹುಟ್ಟಿನಿಂದಲೇ ಕಲೆಗಳು ಜನ್ಮ ತಾಳಿವೆ.ಮಗುವಿನ ಕಾಲ ಬಡಿದಿಂದ ಕಲೆಯಾಗಿ ಹುಟ್ಟಿ ಸಾಯುವರೆಗೂ ಕಲೆಗಳು ಮೈದಾಳಿ ನಂತಿವೆ.ಇದೊಂದು ದೇಶಿ ಸಂಸ್ಕೃತಿಯ ಕಲೆ ಎಂದರೆ ತಪ್ಪಾಗಲಾರದು. ಜಾನಪದ ಕಲೆ ಬಿಟ್ಟರೆ ಜೀವನ ಶೂನ್ಯವಾಗುತ್ತದೆ. ಜಾಗತೀಕರಣದ ಈ ಸಂದರ್ಭದಲ್ಲಿ ನಮ್ಮ ಕಲೆಯನ್ನು ಹಳ್ಳಿಗಳಲ್ಲಿ ಉಳಿಸಿಕೊಂಡು ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆ ಪಡುವ ಸಂಗತಿ. ಇಲ್ಲಿ ಜಾತಿ ಮತ ಧರ್ಮ ಪಂಥಗಳು ಬದಿಗೊತ್ತಿ ಕಲೆಯನ್ನು ಪ್ರೀತಿಸುವ ಸಂಸ್ಕೃತಿಯನ್ನು ಈ ಜಾನಪದ ಕಲೆಯಿಂದ ಬದುಕಲು ಸಾಧ್ಯ, ಕಲೆಯೇ ನಮಗೆ ಅನ್ನ ಹಾಕುತ್ತದೆ.ಇದೆ ನಮಗೆ ಜೀವನ,ದೇವರು, ಎಲ್ಲವೂ ಇದೆ. ಹಾಗಾಗಿ  ವಿಶ್ವಕ್ಕೆ ನೀಡಿದ ಅಪರೂಪದ ಐತಿಹಾಸಿಕ ಜಾನಪದ ಕಲೆಗಳಾಗಿವೆ ಎಂದು ಹೇಳಿದರು. ಹುಮನಾಬಾದ ತಾಲೂಕು ಘಟಕದ ಅಧ್ಯಕ್ಷ ಶರದ ನಾರಾಯಣಪೇಟರು ಸ್ವಾಗತಿಸಿ, ಪ್ರಸ್ತಾಪಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ  ಮಾಣಿಕ ಪ್ರಭು ಸಂಸ್ಥಾನ ಕಾರ್ಯದರ್ಶಿ ಆನಂದ ಮಾಹಾರಾಜರು,ಚಲನಚಿತ್ರ ನಟಿ, ರಂಗಕಲಾವಿದೆ  ಗೀತಾ ವೀರೇಶ ಹಿರೇಮಠ, ಲಕ್ಷ್ಮಣ ಬುಳ್ಳಾ,ತಹಸೀಲ್ದಾರ್ ನಾಗಯ್ಯ ಹಿರೇಮಠ, ರಾಜುಕುಮಾರ ಹೆಬ್ಬಾಳೆ,ಶರಣಪ್ಪ ವಡಿಗೇರಿ, ಸೋಮನಾಥ ಯಾಳವಾರ, ಎಚ್ ಕಾಶಿನಾಥ್ ರಡ್ಡಿ, ಜಗದೇವಿ ಗಾಯಕವಾಡ್,ಗವಿಸಿದ್ಧಪ್ಪಾ ಪಾಟೀಲ,ರವೀಂದ್ರ ರಡ್ಡಿ, ಗ್ರಾ.ಪಂ ಅಧ್ಯಕ್ಷೆ ಚೈತ್ರಾಂಜಲಿ ಮಾಣಿಕ, ಪುರಸಭೆ ಅಧ್ಯಕ್ಷೆ ಕಸ್ತೂರಿಬಾಯಿ ಪರಸನೂರ,ಉಪಾಧ್ಯಕ್ಷೆ ಸತ್ಯವತಿ ಹಿರೇಮಠ,ಮಾಹಾರುದ್ರಪ್ಪಾ ಅಣದೂರೆ, ದಯಾನಂದ ಸಾಗರ ಸೇರಿದಂತೆ ಹಲವಾರು ಸಾಹಿತಿ, ಜಾನಪದ ಕಲಾವಿದರು ಉಪಸ್ಥಿತರಿದ್ದರು.

ವರದಿ :- ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *