ಲೇಖನ – ಪ್ರತಿಭಾವಂತ ಕಲಾವಿದ ಸಿದ್ರಾಮ ವಾಘಮಾರೆ…

Spread the love

ಲೇಖನಪ್ರತಿಭಾವಂತ ಕಲಾವಿದ ಸಿದ್ರಾಮ ವಾಘಮಾರೆ

ಬೀದರ ಜಿಲ್ಲೆಯ ಗೋಂಧಳಿಯ ಸಮಾಜದ ಹಿರಿಯ ಕಲಾವಿದ,ಸಮಾಜಿಕ ಸೇವಕರಾದ ಸಿದ್ರಾಮ ದಾದಾರಾವ್ ವಾಘಮಾರೆ ಅವರು ಬಹುಮುಖ ಪ್ರತಿಭಾವಂತ ಕಲಾವಿದರಾಗಿ ಈ ನಮ್ಮ ಭಾಗದಲ್ಲಿ ಶ್ರಮಿಸುತ್ತಿದ್ದಾರೆ. ಅವರ ಕಾಯಕ ವೃತ್ತಿಯೊಂದಿಗೆ ಇನ್ನಿತರ ಹಲವು ಸೇವಾ ಚುಟುವಟಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಸಾಮಾನ್ಯರ ಪ್ರೀತಿಗೆ ಪಾತ್ರರಾಗಿದ್ದಾರೆ.  ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಜಲಸಂಗಿಯ ಹಿರಿಯ ಕಲಾವಿದ ದಾದಾರಾವ ಮತ್ತು ದ್ರೌಪದಬಾಯಿ ದಂಪತಿಗಳ ಮಗನಾಗಿ 01-12-1961 ರಂದು ಜನಿಸಿದಾರೆ.  ಜಲಸಿಂಗಿಯ ಸರಕಾರಿ ಶಾಲೆ ಪ್ರಾಥಮಿಕ, ದುಬಲಗುಂಡಿಯಲ್ಲಿ ಪ್ರೌಢ ಶಾಲೆ ಹಾಗೂ ಹುಮನಾಬಾದ,ಬೀದರದಲ್ಲಿ ಬಿಎ ಪದವಿಯನ್ನು ಪಡೆದಿದ್ದಾರೆ. ನಂತರ ಕೆ ಎಸ್ ಆರ್ ಟಿ ಸಿ ಯಲ್ಲಿ, ಬಸ್ ಕಾರ್ಯನಿರ್ವಾಹಕರಾಗಿ,ಇಪ್ಪತ್ತು ಮೂರು ವರ್ಷ ಸೇವೆ ಸಲ್ಲಿಸಿ,ಸ್ವಯಂ ನಿವೃತ್ತಿ  ಪಡೆದಿದ್ದಾರೆ. ಹೀಗೆ ಕಾಯಕ ಬದುಕಿನೊಂದಿಗೆ ಅವರ ಕಲಾ ಸೇವೆಯನ್ನು ಮುಂದುವೆರೆಸಿಕೊಂಡು ಇಲ್ಲಿಯವರೆಗೆ ಬಂದಿರುವುದು ಹೆಮ್ಮೆಯ ಸಂಗತಿ ಎಂದರೆ ತಪ್ಪಾಗಲಾರದು. ಇಂದಿಗೂ ಎಷ್ಟೇ ಕಷ್ಟವಾದರು ತಮ್ಮ ವೃತ್ತಿ ಕಲೆ ಗೋಂಧಳಿ ಹಾಕುವದನ್ನು ನಿಲ್ಲಿಸಲಿಲ್ಲ. ಹೀಗೆ ಕಲೆಯೇ ಉಸಿರಾಗಿಸಿಕೊಂಡು,ತಮ್ಮ ಇಡೀ ಜೀವನ ಅವರ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಹಗಲಿರುಳು ದುಡಿಯುತ್ತಿದ್ದಾರೆ. 1980 ರಿಂದ ಇಲ್ಲಿಯವರೆಗೆ ಸಮಾಜದ ಅಭ್ಯುದಯಕ್ಕಾಗಿ ಹಾಗೂ ಕಲೆಯನ್ನು ಜೀವಂತವಾಗಿ ಉಳಿಸುವ ನಿಟ್ಟಿನಲ್ಲಿ ವಲಯ,ತಾಲೂಕಾ,ಜಿಲ್ಲಾ,ವಿಭಾಗ,ರಾಜ್ಯ ಹಾಗೂ ಅಂತರಾಜ್ಯಗಳಲ್ಲಿ ಕಲಾ ಪ್ರದರ್ಶನ ನೀಡಿದ್ದಾರೆ.ನೀಡುವ ಮೂಲಕ ಭೇಷ್ ಎನ್ನುವ ಮಟ್ಟಕ್ಕೆ ಸಾಧನೆ ಮಾಡಿರುವುದು ಇವರ ಕಲಾಸೇವೆಗೆ ಹಿಡಿದ ಕೈಗನ್ನಡಿಯಾಗಿದೆ. ಹೀಗಾಗಿಈ ಮೂಲಕ ಅವರ ಕಲೆ ಇಂದಿನ ಭರಾಟೆಯ ಜಾಗತಿಕರಣದ ಯುಗದ ಹೊತ್ತಿನಲ್ಲಿ ಉಳಿಸಿ ಬೆಳೆಸಿಕೊಂಡು ಬರುತ್ತಿದ್ದಾರೆ.ಅಪಾರ ಜ್ಞಾನ ಜ್ಞಾಪಕ ಶಕ್ತಿ ಹೊಂದಿರುವ ಇವರು ಹಗಲು ರಾತ್ರಿ ಎನ್ನದೇ ಗೊಂಧಳಿ ಹಾಡುಗಳು ಹಾಡಿ, ಉಪ ಕಥೆಗಳು ಹೇಳುವ ಮೂಲಕ ಜನರಲ್ಲಿ ಉತ್ಸಾಹ ತುಂಬುತ್ತಿದ್ದಾರೆ.ಅಲೆಮಾರಿ ಜನಾಂಗದ ಕಲೆಯನ್ನು ಇನ್ನು ಇವರು ಜೀವಂತವಿಟ್ಟಿದ್ದಾರೆ ಬಂಧುಗಳೇ. ಪಾರಂಪರಿಕ ಕಲೆ ಸಾಂಬಾಳ ಹೊತ್ತು ಗೊಂದಲ ಹಾಕುವರು ಅದೇ ರೀತಿ ಅಂಬಾಭವಾನಿ,ಯಲ್ಲಮ್ಮ ತಾಯಿ ಇವರ ಮನೆಯ ಮುಖ್ಯ ದೇವರು. ಹಿಂದಿನಿಂದಲೂ ಪ್ರಮುಖವಾಗಿ ಹಬ್ಬ,ಹುಣ್ಣಿಮೆ,ಹರಿದಿನಗಳಲ್ಲಿ ಗೊಂದಲ ಹಾಕಿ ತಮ್ಮ ಹಾಡು,ಕಥೆ,ಉಪ ಕಥೆ,ಹೇಳಿ ರಂಜಿಸುವುದು ಇವರ ಕಾಯಕ ಧರ್ಮ.ಇವರಿಗೆ ಇಷ್ಟೇ ಹಣ ನೀಡಬೇಕೆಂದಿಲ್ಲ,ಕೊಟ್ಟಷ್ಟರಲ್ಲಿ ತೃಪ್ತಿ ಹೊಂದಿ, ಹೇಳಿದಂತೆ ನಡೆಯುವುದು ಇವರ ಕರ್ತವ್ಯ. ಸತ್ಯ, ಪ್ರಮಾಣಿಕತೆಗೆ ಹೆಚ್ಚು ಆದ್ಯತೆ ಜೊತೆಗೆ ಗೌರವವನ್ನು ಸದಾ ನೀಡುತ್ತಾ ಬರುತ್ತಿದ್ದಾರೆ.ಜಾನಪದ ಅಕಾಡೆಮಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಸರಕಾರದ ಹಂಪಿ ಉತ್ಸವ, ಹೀಗೆ ಬೇರೆ ಬೇರೆ ಇಲಾಖೆಯಗಳ ಸಹಕಾರ,ಸಂಯೋಗದಲ್ಲಿ ಅಡಿಯಲ್ಲಿ ಪ್ರದರ್ಶನ ನೀಡಿ ಕಲೆಯನ್ನು ಪ್ರಚುರಪಡಿಸಿದ್ದಾರೆ‌.ಕಲೆಯೇ ಉಸಿರಾಗಿಸಿಕೊಂಡು ಹಗಲಿರುಳು ದಣಿವರಿಯದ ಕಲಾವಿದರಾಗಿ ಸಿದ್ರಾಮರು ಮಿಂಚುತ್ತಿರುವುದು ನಾವೆಲ್ಲರೂ ಕಾಣುತ್ತಿದೇವೆ. ಸಿದ್ರಾಮರು ಓದನ್ನು ಇಷ್ಟಪಟ್ಟು ಓದಿದವರು.ಕಷ್ಟಪಟ್ಟು ಮೇಲೆ ಬಂದವರು.ಅಪಾರ ಜ್ಞಾನ ಹೊಂದಿ,ಸಂವಿಧಾನದ ಕಲಂಗಳನ್ನು ಅಧ್ಯಯನ ಮಾಡಿದವರು.ಸದಾ ಒಂದಿಲ್ಲೊಂದು ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ ಅಜಾತ ಶತ್ರುಗಳಾಗಿದ್ದಾರೆ.ಸಾಮಾಜಿಕ ವ್ಯವಸ್ಥೆ ಪ್ರಶ್ನಿಸುವ,ಅದನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿ,ತನ್ನ ಅಲೆಮಾರಿ ಜನಾಂಗಗಳಿಗೆ ಜಮೀನು,ಮನೆ,ಮಾಶಾಸನ ಮಾಡಿಸುವಲ್ಲಿ ಶ್ರಮ ವಹಿಸಿದ್ದಾರೆ. ಕಲೆಯೊಂದಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಿ ಶೆಡೋಳ ಗ್ರಾಮ ಪಂಚಾಯತ ಸದಸ್ಯರಾಗಿ,ಕಾಂಗ್ರೇಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ,ರಾಜ್ಯ ಓಬಿಸಿ ಸದಸ್ಯರಾಗಿ,ರಾಜ್ಯ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ದಿ ಮಂಡಳಿಯ ನಾಮ ನಿರ್ದೇಶಿತ ಸದಸ್ಯರಾಗಿ,ರಾಜ್ಯ ಶೋಷಿತ ಸಮುದಾಯದ ಉಪಾಧ್ಯಕ್ಷರಾಗಿ,ರೇಣುಕಾ ಗೋಂಧಳಿ ಸಮಾಜದ ಜಿಲ್ಲಾಧ್ಯಕ್ಷರಾಗಿ, ಅಖಿಲ ಭಾರತೀಯ ಗೋಂಧಳಿ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ರಾಗಿ,ಎನ್.ಎಸ್.ಕೆ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ಸೇವಾ ಕೈಂಕರ್ಯಗಳು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ. ಹೀಗೆ ಇವರ ಸಾಧನೆಗೆ ಹಲವು ಮಠ,ಮಂದಿರ  ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವುಸಿವೆ,ಇವುಗಳಲ್ಲಿ ಪ್ರಮುಖವಾದವು ಜಿಲ್ಲಾ ಗಣರಾಜ್ಯೋತ್ಸವ,ಕನಕ ಸಿರಿ,ಯಲ್ಲಾಲಿಂಗೇಶ್ವರ,ಸುವರ್ಣ ಕನ್ನಡಿಗ,ಕಲಾ ಸಿರಿ ,ಜಾನಪದ ಸಿರಿ,ಕಲ್ಯಾಣ ಚನ್ನಶ್ರೀ, ಗುಲಬರ್ಗಾ ವಿಶ್ವ ವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ. ಇವರ ಕಲೆ ಕಲಾ ಸಾಧನೆ ಗುರುತಿಸಿ ಇದೇ ತಿಂಗಳು 26 ರಂದು ಜರುಗುವ ರಾಷ್ಟ್ರೀಯ ಜನಪದ ನೃತ್ಯೋತ್ಸವ,ಮತ್ತು ಬೀದರ ಜಿಲ್ಲಾ ಜಾನಪದ ಕಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿರುತ್ತಾರೆ. ಸಿದ್ರಾಮರ ಕಲಾ ಸೇವೆ ಹೀಗೆ ಯಶಸ್ವಿಯಾಗಿ ಮುಂದುವರಿಯಲಿ,ಇನ್ನಷ್ಟು ಪ್ರಶಸ್ತಿ, ಗೌರವ,ಸ್ಥಾನಮಾನಗಳು ಸೀಗಲೆಂದು ಶುಭ ಹಾರೈಸುತ್ತೇವೆ.

ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ. ಲೇಖಕರು,ಪತ್ರಕರ್ತರು ಹಾಗೂ ಅಂಕಣ ಬರಹಗಾರ.

Leave a Reply

Your email address will not be published. Required fields are marked *