‘ಖುಷಿ’ಯ ‘ರೋಜಾ’ ಕವರ್ ಸಾಂಗ್ ಟೀಸರ್ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈ

Spread the love

ಖುಷಿರೋಜಾಕವರ್ ಸಾಂಗ್ ಟೀಸರ್ ಬಿಡುಗಡೆ ಮಾಡಿದ ಸಿಎಂ ಬಿಎಸ್ವೈ

ಬೆಂಗಳೂರಿನ ಗಾಂಧಿನಗರವು ಸಿನೀಮಾ ರಂಗದಲ್ಲಿ ಹೆಸರುವಾಸಿಯಾದ ತಾಣವಾಗಿದ್ದು, ಈ ಸಿನೀಮಾ ರಂಗವನ್ನು ದಿನೆದಿಂದ ದಿನಕ್ಕೆ ಪ್ರತಿಭೆಗಳು ಗಾಧಿ ನಗರದಲ್ಲಿ ಅಲೇಯುತ್ತಿದ್ದಾರೆ. ಇದರಲ್ಲಿ ಗೆಲ್ಲುವ ಕುದುರೆಗಳು ತುಂಬಾ ಕಡಿಮೆ ಅಂತಹ ವೇಳೆಯಲ್ಲಿ ಗೆದ್ದೆ ಗೆಲ್ಲುವೇ ಅನ್ನುವ ಅಟವಿಡಿದು ಪ್ರತಿ ಹೆಜ್ಜೆಯಲ್ಲು ನೋವು/ನಲೀವು ನುಂಗಿಕೊಂಡು ಬರುವ ಪ್ರತಿಭೆಗಳಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ನಾನಾ ವಿಭಾಗದ ಕಲಾವಿಧರು ಇಮದು ಬೆಂಗಳೂರಿನ ಗಾಂಧಿನಗರದಲ್ಲಿ ಸೀನಿಮಾ ರಂಗ ಕಲಾವಿಧರ ಅಂತರಾಳದಲ್ಲಿ ಅಚ್ಚಳಿಯದೆ ಹೆಸರುವಾಸಿಯಾಗಿದ್ದಾರೆ. ಅದು ನಮ್ಮ ಜಿಲ್ಲೆಗೆ ದೊರೇತ ಬಹುಮಾನವೇ ಸರಿ. ಅದು ನಮ್ಮ ಕೊಪ್ಪಳ ಜಿಲ್ಲೆಯ ಹಿರಿಮೆ.  ಕೊಪ್ಪಳ ಜಿಲ್ಲೆಯೇ ಸಿನೀಮಾ ನಗರಿಯಾಗಿ ಹೊರ ಒಮ್ಮುತ್ತಿದ್ದು, ಅಂದರೆ ತಪ್ಪಾಗದು ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ  ಹಿರಿಯ ಉದ್ಯಮಿ ಅಕ್ಕಿ ಕೊಟ್ರಪ್ಪ ಅವರ ಮೊಮ್ಮಗಳು (ಆನಂದ್ ಅಕ್ಕಿ  ಪುತ್ರಿ) ಖುಷಿ, ಬಾಲ ನಟಿಯಾಗಿ  ನಟಿಸಿರುವ ‘ರೋಜಾ’ ಎಂಬ ಮೊದಲ ಕವರ್ ಸಾಂಗ್​ನ ಟೀಸರ್​​ನನ್ನು ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಅಮೃತ ಹಸ್ತದಿಂದ ಬಿಡುಗಡೆ ಮಾಡಿದರು. ‘ರೋಜಾ’ ಕವರ್ ಸಾಂಗ್ ಟೀಸರ್ ಬಿಡುಗಡೆ ಮಾಡಿದ ಸಿಎಂ ಬಿಎಸ್​ವೈ, ಬಿಡುವಿಲ್ಲದ ಪ್ರವಾಸದ ಮಧ್ಯೆಯೂ ಐದು ನಿಮಿಷದ ಟೀಸರ್ ವೀಕ್ಷಿಸಿ ಗಮನ ಸೆಳೆದರು. ಹರ್ಷವರ್ಧನ್​ ಹಾಗೂ ಶಂಕರ್ ಕುರುಗೋಡು ನಿರ್ದೇಶನದಲ್ಲಿ ಈ ಕವರ್ ಸಾಂಗ್ ನಿರ್ಮಿಸಲಾಗಿದೆ. ಈ ರೋಜ ಕವರ ಸಾಂಗನಲ್ಲಿ ವಿಶೇಷವಾಗಿ ನಮ್ಮ ುತ್ತರ ಕರ್ನಾಟಕದ ಪ್ರತಿಭೆಗಳು ಪಾಲುಗೊಂಡಿರುವುದು ವಿಶೇಷವಾಗಿದೆ. ಗಂಗಾವತಿ ನಗರ, ಸಣಾಪುರ ಜಲಾಶಯ, ವೆಂಕಟಗಿರಿ ಕೆರೆ, ಆನೆಗೊಂದಿಯ ಪರಿಸರದಲ್ಲಿ ಹಾಡಿನ ಚಿತ್ರೀಕರಣ  ಮಾಡಲಾಗಿದೆ. ಟೀಸರ್  ಬಿಡುಗಡೆಯ ಸಂದರ್ಭದಲ್ಲಿ ನಗರಾಭಿವೃದ್ಧಿ  ಸಚಿವ  ಭೈರತಿ ಬಸವರಾಜ್,  ಶಾಸಕ ರಾಜುಗೌಡ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಇತರರು ಇದ್ದರು.   ವರಧಿ – ಸಂಪಾದಕೀಯ

 

Leave a Reply

Your email address will not be published.