ಹೊಸಹಳ್ಳಿ ಗ್ರಾಮದಲ್ಲಿ  ಅಸ್ಪೃಶ್ಯತೆ ಆಚರಣೆ ಆರೋಪ  ಹೊಟೇಲ್ ನಲ್ಲಿ  ದಲಿತರಿಗೆ ಊಟ ಮಾಡಿಸಿ, ಹೇರ್ ಕಟಿಂಗ್ ಶಾಪ್ ನಲ್ಲಿ ಕ್ಷೌರ ಮಾಡಿಸಿ ಧೈರ್ಯ ತುಂಬಿದ  ತಹಶೀಲ್ದಾರ್.

Spread the love

ಹೊಸಹಳ್ಳಿ ಗ್ರಾಮದಲ್ಲಿ  ಅಸ್ಪೃಶ್ಯತೆ ಆಚರಣೆ ಆರೋಪ  ಹೊಟೇಲ್ ನಲ್ಲಿ  ದಲಿತರಿಗೆ ಊಟ ಮಾಡಿಸಿ, ಹೇರ್ ಕಟಿಂಗ್ ಶಾಪ್ ನಲ್ಲಿ ಕ್ಷೌರ ಮಾಡಿಸಿ ಧೈರ್ಯ ತುಂಬಿದ  ತಹಶೀಲ್ದಾರ್.

ದೊಡ್ಡಬಳ್ಳಾಪುರ : ತಾಲೂಕಿನ  ಹೊಸಹಳ್ಳಿ ಗ್ರಾಮದ ಹೊಟೇಲ್  ನಲ್ಲಿ ದಲಿತರ ಪ್ರವೇಶ ನಿರಕರಿಸಲಾಗಿದೆ ಮತ್ತು ಹೇರ್ ಕಟಿಂಗ್ ಶಾಪ್  ನಲ್ಲಿ ಕ್ಷೌರ  ಮಾಡುತ್ತಿಲ್ಲವೆಂದು ಆರೋಪಗಳ ಕೇಳಿ ಬಂದಿದ್ದವು. ದೊಡ್ಡಬಳ್ಳಾಪುರ  ಉಪ ವಿಭಾಗದ ಮಟ್ಟದ ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ  ಪಂಗಡಗಳ  ಕುಂದು  ಕೊರತೆ ಸಭೆಯಲ್ಲಿ  ದಲಿತರಾದ ನರಸಿಂಹಯ್ಯ ಅಧಿಕಾರಿಗಳ ಮುಂದೆ ಗ್ರಾಮದಲ್ಲಿ ಅಸ್ಪೃಶ್ಯತೆ  ಆಚರಣೆಯ ಬಗ್ಗೆ  ಆರೋಪ ಮಾಡಿದರು.  ತಕ್ಷಣವೇ ಎಚ್ಚೇತ್ತ ತಾಲೂಕು  ಆಡಳಿತ  ತಹಶೀಲ್ದಾರ್  ಟಿ.ಶಿವರಾಜ್  ನೇತೃತ್ವದಲ್ಲಿ  ಇನ್ಸ್ ಪೆಕ್ಟರ್  ನವೀನ್  ಕುಮಾರ್ ಮತ್ತು ತಾಲೂಕು  ಸಮಾಜ  ಕಲ್ಯಾಣಾಧಿಕಾರಿ  ಸೋಮಶೇಖರ್  ಗ್ರಾಮಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಹೊಟೇಲ್ ನಲ್ಲಿ  ದಲಿತರಿಗೆ  ಪ್ರವೇಶ ನಿರಾಕರಣೆ  ಮಾಡಲಾಗಿರುವ ಆರೋಪಕ್ಕೆ  ಹೊಟೇಲ್ ಗೆ ಭೇಟಿ ನೀಡಿದ ತಹಶೀಲ್ದಾರ್  ದಲಿತರೊಂದಿಗೆ ಊಟ ಮಾಡಿದರು, ನಂತರ ಹೇರ್ ಕಟಿಂಗ್ ಗೆ ಭೇಟಿ ನೀಡಿ ದಲಿತರಿಗೆ  ಕ್ಷೌರ ಮಾಡಿಸಿ ಧೈರ್ಯ ತುಂಬಿದರು. ಅಸ್ಪೃಶ್ಯತೆ  ಆಚರಣೆ  ಬಗ್ಗೆ  ಹೊಟೇಲ್  ಮತ್ತು ಹೇರ್ ಕಟಿಂಗ್  ಶಾಪ್  ಮಾಲೀಕರಿಗೆ ಎಚ್ಚರಿಕೆಯನ್ನ  ನೀಡಿ ಮುಂದಿನ ದಿನಗಳಲ್ಲಿ ಅಧಿಕಾರಿಗಳ ತಂಡ  ರಹಸ್ಯ  ಕಾರ್ಯಚರಣೆ  ನಡೆಸಲಾಗುವುದು ಒಂದು ವೇಳೆ  ಅಸ್ಪೃಶ್ಯತೆ  ಆಚರಣೆ  ಕಂಡು ಬಂದಲ್ಲಿ ಕಟ್ಟಿನ ಕಾನೂನು  ತೆಗೆದು ಕೊಳ್ಳುವ ಎಚ್ಚರಿಕೆಯನ್ನ ಗ್ರಾಮಸ್ಥರಿಗೆ ನೀಡಿದರು, ಪ್ರತಿಯೊಬ್ಬ  ಪ್ರಜೆ ಸಮಾನರು, ಲಿಂಗ, ಧರ್ಮ, ಜಾತಿ  ಹೆಸರಿನಲ್ಲಿ ಭೇಧ ಭಾವ ಮಾಡುವಂತಿಲ್ಲ, ಗ್ರಾಮಸ್ಥರು ಸಹಬಾಳ್ವೆಯಿಂದ ಜೀವನ ನಡೆಸುವಂತೆ ತಹಶೀಲ್ದಾರ್ ಬುದ್ದಿವಾದ ಹೇಳಿದರು. ಬೈಟ್ : ಟಿ.ಶಿವರಾಜ್,  ತಹಶೀಲ್ದಾರ್.

ವರದಿ – ಉಪ-ಸಂಪಾದಕೀಯ

Leave a Reply

Your email address will not be published. Required fields are marked *