ಹನಸಿ:ಸಾರ್ವಜನಿಕ ಶೌಚಾಲಯಕ್ಕಾಗಿ ವಂದೇ ಮಾತರಂ ಆಗ್ರಹ……

Spread the love

ಹನಸಿ:ಸಾರ್ವಜನಿಕ ಶೌಚಾಲಯಕ್ಕಾಗಿ ವಂದೇ ಮಾತರಂ ಆಗ್ರಹ……

ವಿಜಯನಗರ  ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು  ಹನಸಿ ಗ್ರಾಮ,ಕೂಡ್ಲಿಗಿ ತಾಲೂಕು ಹಾಗೂ ಬೊಮ್ಮನಹಳ್ಳಿ ತಾಲೂಕಿನ ಹತ್ತಾರು ಹಳ್ಳಿಗಳಿಗೆ ವ್ಯವಹಾರ ಕೇಂದ್ರ ಹಾಗೂ ವೃತ್ತ ಕೇಂದ್ರವಾಗಿದೆ.ನಿತ್ಯ ಸಾವಿರಾರು ಜನ ಸಂಪರ್ಕಿಸುವ ಗ್ರಾಮವಾಗಿದ್ದು ಶೌಚಾಲಯ ಸೌಕರ್ಯ ಇಲ್ಲವಾಗಿದೆ,ಹೀಗಾಗಿ ಸಾರ್ವಜನಿಕರು ತಮ್ಮ ನಿಸರ್ಗದ ಕರೆಗಳನ್ನು ನಿಭಾಯಿಸುವುದು ದುಸ್ಥರವಾಗಿದೆ.ಅದಕ್ಕಾಗಿ ಬಸ್ ನಿಲ್ದಾಣದ ಹತ್ತಿರವಿರುವ ದನದ ದೊಡ್ಡಿಯನ್ನೇ ಅವಲಂಬಿಸುವಂತಾಗಿದೆ, ಸ್ತ್ರೀಯರು ವೃದ್ಧರು ಹಾಗೂ ಮಕ್ಕಳ ಗೋಳು ಹೇಳತೀರದಂತಾಗಿದೆ. ಇದು ಕೇವಲ ಹನಸಿ ಗ್ರಾಮದ ಗೋಳು ಮಾತ್ರವಲ್ಲ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯ್ತಿ ಕೇಂದ್ರ ಸ್ಥಳಗಳ ಚಿಂತಾಜನಕ ಕಥೆ ವ್ಯತೆಯಾಗಿದೆ. ಇದನ್ನು ಅರಿತೂ ಕೂಡ ಸಂಬಂದಿಸಿದ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ಸೌಕರ್ಯಗಳನ್ನು ಕಲ್ಪಿಸುವಲ್ಲಿ ಆಸಕ್ತಿ ತೋರುತ್ತಿಲ್ಲ,ಈ ಮೂಲಕ ಅವರು ತಮ್ಮ ನಿರ್ಲಕ್ಷ್ಯ ಹಾಗೂ ನಿರ್ಲಝ್ಯ ಮನೋಧರ್ಮ ತಾಳಿದ್ದಾರೆ.ಇದು ನಾಗರೀಕ ಸಮಾಜ ತಲೆ ತಗ್ಗಿಸುವ ದುಸ್ಥಿತಿಯಾಗಿದೆ, ಇದು ಭ್ರಷ್ಟ ಅಧಿಕಾರಿ ಹಾಗೂ ಭ್ರಷ್ಟ ಜನಪ್ರತಿನಿಧಿಗಳ ನಾಚಿಕೆ ಗೇಡಿನ ಸಂಗತಿ ಎನ್ನುತ್ತಾರೆ ವಂದೇ ಮಾತರಂ ಜಾಗೃತಿ ವೇದಿಕೆ ಪದಾಧಿಕಾರಿಗಳು. ಹನಸಿ ಗ್ರ‍ಾಮದ ಬಸ್ ನಿಲ್ದಾಣದಲ್ಲಿ ಅತಿ ಶೀಘ್ರವಾಗಿ ಸಾರ್ವಜನಿಕರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಬೇಕಿದೆ, ಸಂಬಂದಿಸಿದಂತೆ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಹಾಗೂ ತಾಪಂ ಅಧಿಕಾರಿಗಳು ಅಗತ್ಯ ಕ್ರಮ ಜರುಗಿಸಬೇಕಿದೆ.ಕಾರಣ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಪ್ರಕೃತಿ ಕರೆಗೆ ಸ್ಪಂದಿಸಲು ಮೂಲಭೂತ ಸೌಕರ್ಯಗಳು ಇಲ್ಲವಾಗಿವೆ, ಸಾರ್ವಜನಿಕ ಶೌಚಾಲಯವನ್ನು ಸ್ಥಳೀಯ ಆಡಳಿತ ಶೀಘ್ರವೇ ನಿರ್ಮಿಸಬೇಕೆಂದು ವೇದಿಕೆ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.  ಈ ಕುರಿತು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಅಧಿಕಾರಿಗಳಿಗೆ,ಈ ಮೂಲಕ ವಂದೇ ಮಾತರಂ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ  ವಿ.ಜಿ.ವೃಷಭೇಂದ್ರ ಒತ್ತಾಯಿಸಿದ್ದಾರೆ. ಅವರು ಮಾತನಾಡಿ ಜಿಲ್ಲೆಯ ಎಲ್ಲ‍ಾ ಗ್ರ‍ಾಪಂ ಕೇಂದ್ರ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು,ನಿರ್ಲಕ್ಷ್ಯ ತೋರಿದ್ದಲ್ಲಿ ಜಿಪಂ ಹಾಗೂ ತಾಪಂ ಇಲಾಖೆಗಳ ವಿರುದ್ಧ ಕಾನೂನು ರೀತ್ಯ ಹೋರಾಟ ಅನಿವಾರ್ಯವಾಗಿ ಹಮ್ಮಿಕೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.ಗ್ರ‍ಾಮದ ಮುಖಂಡರು ಹಾಗೂ ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428

Leave a Reply

Your email address will not be published. Required fields are marked *