ಕಲ್ಯಾಣ ಕರ್ನಾಟಕ ಸರ್ವರಿಗೂ ಮಾದರಿಯಾಗಲಿ : ಬಸವರಾಜ ಪಾಟೀಲ ಸೇಡಂ ಜಿ.

Spread the love

ಕಲ್ಯಾಣ ಕರ್ನಾಟಕ ಸರ್ವರಿಗೂ ಮಾದರಿಯಾಗಲಿ : ಬಸವರಾಜ ಪಾಟೀಲ ಸೇಡಂ ಜಿ.

ಚಿಟಗುಪ್ಪಾ : ಕಲ್ಯಾಣ ಕರ್ನಾಟಕದ ಜನರಲ್ಲಿ ಕೌಶಲ್ಯ ಸುಧಾರಿಸಿ ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಪರಿಣಾಮಕಾರಿ ಬೆಳವಣಿಗೆ ಸಾಧಿಸಬೇಕೆನ್ನುವದು ನಮ್ಮ ಗುರಿ. ಕಲ್ಯಾಣ ಕರ್ನಾಟಕ ಈ ಭಾಗದ ಅಭಿವೃದ್ಧಿಗೆ ಹೊಸ ಮೆರಗು ನೀಡುವದು ಸಂಘದ ಪ್ರಮುಖ ಆದ್ಯತೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಸಂಘವು ಪೂರಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕೃಷಿ, ಆರೋಗ್ಯ, ಶಿಕ್ಷಣ, ಸ್ವಯಂ ಉದ್ಯೋಗ ಹಾಗೂ ಮಹಿಳಾ ಸಬಲೀಕರಣ ಮತ್ತು ಮಾನವೀಯ ಮೌಲ್ಯಗಳ ತತ್ವಗಳನ್ನು ಬಿತ್ತುವ ಹಲವು ಯೋಜನೆಗಳೊಂದಿಗೆ ಕಲ್ಯಾಣ ಕರ್ನಾಟಕ ಸಂಘವು ಕಾರ್ಯನಿರ್ವಹಿಸುತ್ತಿದೆ.ಹೀಗಾಗಿ ಜನರ ಬದುಕಿನಲ್ಲಿ ಹೊಸ ಶಕೆ ಪ್ರಾರಂಭವಾಗಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೇವೆ ಎಂದು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಸೇಡಂ ಜಿ ನುಡಿದರು. ಅವರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ಹಾಗೂ ವಿಕಾಸ ಅಕಾಡೆಮಿ ಚಿಟಗುಪ್ಪಾ ರವರ ಸಂಯುಕ್ತ ಆಶ್ರಯದಲ್ಲಿ  ಬನಶಂಕರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಕೇಂದ್ರ ಹಾಗೂ ಕೌಶಲ್ಯ ಕೇಂದ್ರ ಮುಖ್ಯಸ್ಥರ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾಜಿಕ ಜೀವನದಲ್ಲಿ ಅನೇಕ ಜನಪರ ಚಟುವಟಿಕೆ ನಡೆಯುತ್ತಲೆ ಇರುತ್ತವೆ ಆದರೆ ಒಂದು ವಿನೂತನ ರೀತಿಯಿಂದ ನಾವೆಲ್ಲರೂ ಜೊತೆಗುಡಿ ಪ್ರಯತ್ನ ಮಾಡದೆ ಇದ್ರೆ ನಿಜವಾದ ವಿಕಾಸ ಆಗಲಿಕ್ಕೆ ಸಾಧ್ಯವಿಲ್ಲ. ಹಾಗಾಗಿ ಬಹುಶ ನಾವು ಮಾಡುವ  ಪ್ರಯತ್ನ ಇಡೀ ಕರ್ನಾಟಕದ ಉಳಿದ ವಿಭಾಗಗಳಿಗೂ ಪ್ರೇರಣೆಯಾಗಿ, ಮಾದರಿಯಾಬೇಕು. ಅಂದಾಗಲೇ ನಾವು ಶ್ರಮ ಪಟ್ಟಿದ್ದು ಸ್ವಾರ್ಥಕವಾಗುತ್ತದೆ ಎಂದರು. ಈ ಸಂಘವು ಕಲ್ಯಾಣ ಕರ್ನಾಟಕ ವಿಭಾಗದ ಜನರ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡುವ ಮೂಲಕ ಈ ಭಾಗವನ್ನು ಸಮಗ್ರವಾಗಿ ಅಭಿವೃದ್ಧಿ ದಿಕ್ಕಿನಲ್ಲಿ ಕೊಂಡೊಯ್ಯುವ ಕೆಲಸ ಮಾಡೋಣವೆಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಕಲ್ಯಾಣ ಕರ್ನಾಟಕ ಸಂಘದ ಜಿಲ್ಲಾ ನಿರ್ದೇಶಕರಾದ ರೇವಣ್ಣಸಿದಪ್ಪಾ ಜಲಾದೆಯವರು ಮಾತನಾಡಿ ಕಲ್ಯಾಣ ಕರ್ನಾಟಕದ ಸಂಘವು ಕೃಷಿ, ಪರಿಸರ, ಮೂಲಭೂತ ಸೌಲಭ್ಯ, ನಿರುದ್ಯೋಗ ಸಮಸ್ಯೆ ನಿವಾರಣೆ ಮತ್ತು ಸಾಂಸ್ಕೃತಿಕ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ನೀಡುತ್ತಿದೆ. ಅದೇ ರೀತಿ  ಕೌಶಲ್ಯ ಅಭಿವೃದ್ಧಿ ಕೇಂದ್ರ,ಪ್ರಗತಿ ಕೇಂದ್ರ ಮತ್ತು ನಿರುದ್ಯೋಗ ನಿವಾರಣೆ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತಿದೆ.ಈ ನಿಟ್ಟಿನಲ್ಲಿ ಸಂಘವು ಜನಪರ ಸೇವಾ ಕಾರ್ಯಗಳನ್ನು ಮಾಡುತ್ತಿದ್ದೆ ಎಂದರು. ತರಬೇತಿಯಲ್ಲಿ ಭಾಗವಹಿಸಿದ ಪ್ರಗತಿ ಹಾಗೂ ಕೌಶಲ್ಯ ಕೇಂದ್ರದ ಮುಖ್ಯಸ್ಥರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾದರು. ಅತಿಥಿಗಳಾಗಿ ಭಾಗವಹಿಸಿದ್ದ, ಕಲ್ಯಾಣ ಕರ್ನಾಟಕ ಸಂಘದ ಜಿಲ್ಲಾ ಯುವ ಮತ್ತು ಸಂಸ್ಕೃತಿ ವಿಭಾಗದ ಅಧ್ಯಕ್ಷರಾದ ಲೀಲಾ ಕಾರಟಗಿಯವರು ಮಾತನಾಡಿ ಕಲ್ಯಾಣ ಕರ್ನಾಟಕದ ದೂರದೃಷ್ಠಿಯ ಈ ನಮ್ಮ ಯೋಜನೆಯ ಕಾರ್ಯಾಗಳು ಅತ್ಯಂತ ಶ್ಲಾಘನೀಯವಾಗಿವೆ. ಪ್ರಗತಿ ಕೇಂದ್ರ ಹಾಗೂ ಕೌಶಲ್ಯ ಕೇಂದ್ರಗಳು ಸಹ ಈ ನಮ್ಮ ವಿಭಾಗದ ಒಂದು ಸೇವಾ ಕಾರ್ಯಗಳು. ಅದಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಕೌಶಲ್ಯ ಕೇಂದ್ರವನ್ನು ತೆರೆಯಲಾಗಿದೆ. ಈ ಭಾಗದ ನಿರುದ್ಯೋಗಿ ಮಹಿಳೆಯರು ಹೋಲಿಗೆ ತರಬೇತಿ ಪಡೆಯಬೇಕು ಅದೇ ರೀತಿ ಪ್ರತಿ ಒಂದು ಹಳ್ಳಿಗೆ ಪ್ರಗತಿ ಕೇಂದ್ರ ಪ್ರಾರಂಭಿಸಲಾಗಿದೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಜೊತೆಗೆ ಒಳ್ಳೆಯ ಸಂಸ್ಕಾರದ ನೀತಿ ತತ್ವಗಳನ್ನು ನೀಡಲಾಗುತ್ತದೆ ಎಂದರು. ತಾಲೂಕು ವಿಕಾಸ ಅಕಾಡೆಮಿಯ ಸಂಚಾಲಕರಾದ ಸಂಗಮೇಶ ಎನ್ ಜವಾದಿಯವರು ಸ್ವಾಗತಿಸಿ,ಪ್ರಸ್ತಾಪಿಕವಾಗಿ ಮಾತನಾಡಿದರು. ಸಂಘದ ತಾಲೂಕು ಸಂಯೋಜಕರಾದ ಗುಂಡಪ್ಪಾ ಅತ್ತಿವಾಳೆ ನಿರೂಪಿಸಿದರು.ಬಸವರಾಜ ಮಂಕಲ್ ವಂದಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಚಾಲಕರಾದ ರೇವಣ್ಣಸಿದ್ಧ ಜಾಡರ್, ಬಸವರಾಜ ಅಸ್ಟಗಿ,ತಾಲೂಕು ಸಂಚಾಲಕರಾದ ಬಸಮ್ಮಾ ಮಠಪತಿ, ವಿಶಾಲ ಸಾಲಿಕಾರ್, ರಾಜಕುಮಾರ ಹರಕಂಚಿ, ಅಕಾಡೆಮಿಯ ಪ್ರಮುಖರಾದ ಸೂರ್ಯಕಾಂತ ಮಠಪತಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವರಾಜ್ ಹುಗ್ಗಿ, ಕಾರ್ಯದರ್ಶಿ ಪರಮೇಶ ಬಬಡಿ,ಮನೋಹರ್ ಸೀರಮುಂಡಿ,ದಯಾನಂದ ಪಾಟೀಲ್ ರಾಂಪುರ, ಗಣಪತಿ ಗಿರಿಗಿರಿ,ಎನ್ ಎಸ್ ಮಲ್ಲಶೆಟ್ಟಿ, ತಿಪ್ಪಣ್ಣ ಶರ್ಮಾ, ರವಿ ಸ್ವಾಮಿ ಕಮಲಾಪುರ, ವೀರೇಶ್ ತೋಗಾಂವ,ಬಸವರಾಜ ಪಾಟೀಲ, ಅರವಿಂದ ಪಂಚಾಳ,ಅನಿಲಕುಮಾರ ಸೀರಮುಂಡಿ ಸೇರಿದಂತೆ ಚಿಟಗುಪ್ಪಾ ತಾಲೂಕಿನ ಪ್ರಗತಿ ಕೇಂದ್ರ ಹಾಗೂ ಕೌಶಲ್ಯ ಕೇಂದ್ರದ ಮುಖ್ಯಸ್ಥರು, ಸಲಹಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ವರದಿ : ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *