ತಾವರಗೇರಾ ಪಟ್ಟಣ ಪಂಚಾಯತಿಯ ಮುಂದೆ ಕ.ನ.ಸೇ ಯಿಂದ ಮೂಲಭೂತ ಸೌಕರ್ಯಗಳಿಗಾಗಿ ಧರಣಿ……

Spread the love

ತಾವರಗೇರಾ ಪಟ್ಟಣ ಪಂಚಾಯತಿಯ ಮುಂದೆ ಕ.ನ.ಸೇ ಯಿಂದ ಮೂಲಭೂತ ಸೌಕರ್ಯಗಳಿಗಾಗಿ ಧರಣಿ……

ಈ ಹಿಂದೆ ಹಲವು ಮಾಹನಿಯರು ಜಯ ಕಂಡಿದ್ದು ಹೋರಾಟದಿಂದ. ನಮ್ಮ ಹಕ್ಕುಗಳನ್ನು ನಾವು ಪಡೆಯಲು ಈ ಮೌನ ಯಾಕೆ..? ಏಳಿ ಏದ್ದೇಳಿ ನಮ್ಮ ಹಕ್ಕು ಪಡೆಯುವತನಕ ಹೋರಾಟದ ಕಿಚ್ಚು ಯುವಕರ ಎದೆಯಲಿ ಉರಿಯಲಿ, ಮೌನದಿಂದ ಏನನ್ನು ಸಾಧಿಸಲಾರೆವು, ಯುದ್ದು ಮತ್ತು ಹೋರಾಟದಿಂದ ಮಾತ್ರ ಸಾಧಿಸಬಲ್ಲೆವು ಬಡ/ಹಾಗೂ ದಿನ ಧಲಿತರ ಏಳಿಗೆಗಾಗಿ ಹೋರಾಟವೆ ಮೊದಲ ಸೂತ್ರ. ಮೌನಿಯಿಂದ ಎಲ್ಲಿಯವರೆಗೂ ಕೈ ಕಟ್ಟಿ ಕುಳಿತ್ತಿರುತ್ತಿರೊ ಅಲ್ಲಿಯವರೆಗೂ ಯಾವುದೇ ಅಭಿವೃದ್ದಿಯಾಗಲು ಸಾಧ್ಯವೆ ಇಲ್ಲಾ. ದುಡಿಯುವ ಕೈಗಳು, ಕೂಲಿ/ಕಾರ್ಮಿಕರು ಒಂದಾಗುವವರೆಗೂ, ಒಡೆದಾಳುವ ಈ ರಾಜ ನೀತಿಗೆ ಹೋರಾಟವೆ ಮದ್ದು ಈ ಹೋರಾಟದ ಕಿಚ್ಚಿನ ಶಕ್ತಿ ಪ್ರತಿಯೊಬ್ಬರಿಗೂ ಪೇರಣೆಯಾಗೋಣ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪಟ್ಟಣ ಪಂಚಾಯತಿಯ ಮುಂದೆ ಕರ್ನಾಟಕ ನವನಿರ್ಮಾಣ ಸೇನೆವತಿಯಿಂದ ಮೂಲಭೂತ ಸೌಕರ್ಯಗಳನ್ನು ಸರಿಯಾದ ಸಮಯಕ್ಕೆ ಒದಗಿಸುವಲ್ಲಿ ವಿಫಲವಾದ ತಾವರಗೇರಾ ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರು ಸಹ ಇಲ್ಲಿಯವರೆಗೂ ಅಂದರೆ ಮಂಡಲ ಪಂಚಾಯತಿಯಿಂದ ಗ್ರಾಮ ಪಂಚಾಯತಿಯಾಗಿ ಮುಂಬಡ್ತಿಯಿಂದ ಪಟ್ಟಣ ಪಂಚಾಯತಿಯಾಗಿ ಸುಮಾರು 5 ವರ್ಷಗಳು ಕಳೆದರು ಸಹ ಇಲ್ಲಿಯವರೆಗೂ ಚುನಾಯಿತ ಸದಸ್ಯರು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯಗಳಿಗೆ ಸ್ಫಂಧನೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿರುವುದು ಖಂಡನಿಯವಾಗಿದೆ. ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ವಿದ್ಯುತ್ ದೀಪ, ಮಹಿಳಿಯರ ಶೌಚಾಲಯದ ವ್ಯವಸ್ಥೆ, ಹಿಗೆ ಹತ್ತು ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ತಾವರಗೇರಾ ಪಟ್ಟಣದ ಪಂಚಾಯತಿಯ ಮುಂದೆ 5 ಮತ್ತು 6 ನೇ ವಾರ್ಡಿನ ಸಾರ್ವಜನಿಕರು ಶುಲಭ ಶೌಚಾಲಯ, ಕುಡಿಯುವ ನೀರು ಹಾಗೂ ವಿದ್ಯುತ್ ದೀಪದ ಮೋದಲಾದ ಮೂಲಭೂತ ಶೌಕರ್ಯಗಳಿಗಾಗಿ ಕ.ನ.ಸೇ ಜೊತೆಗೆ ಕೈ ಜೋಡಿಸಿ ಧರಣಿ ಹಮ್ಮಿಕೊಂಡಿದ್ದು. ಪಟ್ಟಣ ಪಂಚಾಯತಿಯ ಅಧಿಕಾರಿಗಳು ಕನಿಷ್ಠ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವುದು ಕಂಡರೆ ಮುಂದಿನ ದಿನಮಾನಗಳಲ್ಲಿ ತಾವರಗೇರಾ ಪಟ್ಟಣವು ಅಭಿವುದ್ದಿಯ ಕನಸ್ಸು ಕನಸ್ಸಾಗೆ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುವುದು ಪ್ರಜ್ಞಾವಂತರ ಮೂಖ ಪ್ರಶ್ನೆಯಾಗಿ ಕಾಡುತ್ತಿದೆ. ಇನ್ನ ಬಿದಿ ಬದಿ ವ್ಯಾಪಾರಿಗಳಿಗೆ ಸರಿಯಾದ ಸ್ಥಳ ಸಿಗದೆ ಬಿದಿ ಬದಿ ವ್ಯಾಪಾರಸ್ಥರು ಫರದಾಡುವಂತಹ ಸ್ಥಿತಿ ಉದ‍್ಭವವಾಗಿದೆ. ಈ ಹಿಂದೆ ಅಂಗಡಿ ಮಾಲಿಕರು ವಿದಿ ಬದಿ ವ್ಯಾಪಾರಿಗಳ ಮೇಲೆ ಅಲ್ಲೆ ನಡೆದರು ಸಹ, ಅಧಿಕಾರಿಗಳು ಮೌನಿಯಾಗಿದ್ದಾರೆ. ಈ ಧರಣಿಯಲ್ಲಿ ಪಂಟ್ಟಣ ಪಂಚಾಯತಿಯ ಅಧಿಕಾರಿಗಳು ಹಾಗೂ ನಾಡ ಕಚೇರಿಯ ಅಧಿಕಾರಿಗಳ ಜೊತೆಗೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಹಲವು ಭಾರಿ ಹಲವು ವಿಷಯಗಳ ಬಗ್ಗೆ ನೂರಾರು ಸಾರಿ ಮನವಿ ಪತ್ರ ನೀಡಿದರು ಸರಿಯಾಗಿ ಸ್ಫಂದನೆ ಕೊಡುವಲ್ಲಿ ತಾವುಗಳು ಸಂಪೂರ್ಣ ವಿಫಲವಾಗಿದ್ದಿರಿ ಎಂದು  W.P.I. ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ ಇವರು ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದರು. ತದ ನಂತರ ವಾದ/ವಿವಾದಗಳು ಮುಗಿದ ನಂತರ ಪಟ್ಟಣದ ಪ್ರಾಭಾರಿ ಪಿ.ಎಸ್.ಐ.ಗಳಾದ ಮಲ್ಲಪ್ಪ ವಜ್ರಾದ ಇವರ ಮಧ್ಯಸ್ಥಿಯಲ್ಲಿ ಕೊನೆಗೆ ಧರಣಿಯ ಮುಖ್ಯಸ್ಥರಿಂದ ಪಟ್ಟಣ ಪಂಚಾಯತಿಯ ಅಧಿಕಾರಿಗಳಾದ ಖಾಧರ ಪಾಷಾ ಹಾಗೂ ಪ್ರಾಣೇಸಿ ಬಳ್ಳಾರಿ ಜೊತೆಗೆ ಕಂದಾಯ ಇಲಾಖೆಯ ಶರಣಪ್ಪ ಧಾಸರ, ಸೂರ್ಯಕಾಂತ ಇತರೆ ಅಧಿಕಾರಿಗಳ ಜೊತೆಗೆ ಜಂಟಿ ಸಂಘಟನೆಯಾದ  ಕನಸೇ, ಹಾಗೂ W.P.I. ಇವರ ವತಿಯಿಂದ ಮನವಿ ಪತ್ರ ಸಲ್ಲಿಸುವುದರ ಜೊತೆಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದರ ಮೂಲಕ ಧರಣಿಯನ್ನು ಹಿಂದಕ್ಕೆ ತೆಗೆದುಕೊಂಡರು. ಮೌನದಿಂದ ಏನನ್ನು ಸಾಧಿಸಲಾರೆರು, ಯುದ್ದು ಮತ್ತು ಹೋರಾಟದಿಂದ ಮಾತ್ರ ಸಾಧಿಸಬಲ್ಲೆವು ಬಡ/ಹಗೂ ದಿನ ಧಲಿತರ ಏಳಿಗೆಗೆ ಹೋರಾಟವೆ ಮೊದಲ ಸೂತ್ರ ಹಾಗಾಗಿ ಮೌನಿಯಿಂದ ಎಲ್ಲಿಯವರೆಗೂ ಕೈ ಕಟ್ಟಿ ಕುಳಿತುಕೊಳ್ಳುವಿರೊ, ಅಲ್ಲಿಯವರೆಗೂ ನಾವುಗಳು ಅಭಿವೃದ್ದಿಯಾಗಲು ಸಾಧ್ಯವೆ ಇಲ್ಲಾ. ಇರಲಿ ಮುಂದಿನ ದಿನಮಾನಗಳಲ್ಲಿ ಈ ಹತ್ತು ಹಲವು ಬೇಡಿಕೆಗಳು ಇಡೆರಿಸದೆ ಇದ್ದಲ್ಲಿ ಮುಂದಿನ ದಿನ ಮಾನಗಳಲ್ಲಿ ತಹಶೀಲ್ದಾರ ಕಾರ್ಯಲಯದ ಮುಂದೆ ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಲವು ಅಕ್ರಮ ದಂಧೆಗಳ ಕುರಿತು ಧಾಖಲೆಗಳ ಸಹಿತ ಮುಂದೆ ಇಟ್ಟುಕೊಂಡು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಸಿದರು. ಈ ಧರಣಿಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆ ಹೋಬಳಿ ಘಟಕದ ಅಧ್ಯಕ್ಷ ಸಿದ್ಧನಗೌಡ, ನಗರ ಘಟಕದ ಅಧ್ಯಕ್ಷರಾದ  ನಬಿಸಾಬ್ ಎಲಿಗಾರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಜಾ ನಾಯಕ್,  ಯಮನೂರ್ ಬಿಳೆಗುಡ್ಡ, ಶರಣಪ್ಪ ಕಲಾಲ,  ಸಲೀಮ್. ಶಿವಾಜಿ. ರವಿ ಆರೆರ, ಪದ್ದಮ್ಮ ,ಶರಣಮ್ಮ, ರೇಣಮ್ಮ, ಶೋಭಾ, ಚಂದ್ರಮ್ಮ, ಲಕ್ಷ್ಮಿ, ಗೌರಮ್ಮ ಇನ್ನಿತರರು ಈ ಧರಣಿಯಲ್ಲಿ ಪಾಲುಗೊಂಡಿದ್ದರು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *