ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿ:

Spread the love

ಮಾನವಿ : ಹಸಿರು ಕ್ರಾಂತಿ ಹರಿಕಾರ, ರಾಷ್ಟ್ರನಾಯಕ, ಭಾರತದ ಉಪಪ್ರಧಾನಮಂತ್ರಿಗಳಾದ ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿದ್ದು, ಅವರ ವ್ಯಕ್ತಿತ್ವ ಹಾಗೂ ಜೀವನ ಚರಿತ್ರೆಯನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ ಎಂದು ಸಹ ಶಿಕ್ಷಕಿ ಬಂಡೆಮ್ಮ ಹೇಳಿದರು. ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಡಾ. ಬಾಬು ಜಗಜೀವನರಂ ರವರ114ನೇ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಡಾ.ಬಾಬು ಜಗಜೀವನರಾಂರವರ ಜೀವನ ಎಲ್ಲರಿಗೂ ಸ್ಪೂರ್ತಿದಾಯಕವಾಗಿದೆ. ಹೀಗಾಗಿ ನಾವೆಲ್ಲರೂ ಇವರ ಆದರ್ಶಗಳು ಮೈಗೂಡಿಸಿಕೊಂಡು ದೇಶದ ಬೆಳವಣಿಗೆಗೆ ಸಹಕಾರಿಯಾಗಿ ಕೆಲಸ ಮಾಡೋಣ ಎಂದರು. ದೈಹಿಕ ಶಿಕ್ಷಕ‌ ಜೈಭೀಮ್ ಇವರು‌ ಮಾತನಾಡಿ, ಡಾ. ಬಾಬು ಜಗಜೀವನರಾಂ ಅವರು ದಲಿತ ಕುಟುಂಬದಲ್ಲಿ‌ ಹುಟ್ಟಿ ದೇಶದ ಶೋಷಿತರ ಏಳ್ಗೇಗಾಗಿ ಶ್ರಮಿಸಿದರು. ದೇಶದ ಮೊದಲ‌ ಉಪಪ್ರಧಾನಿ ಮಂತ್ರಿಯಾಗಿ ಕಾರ್ಯನಿರ್ವಹಿಸಿದ ಮೊದಲ ವ್ಯಕ್ತಿ ಬಾಬು ಜಗಜೀನರಾಂರವರು, ಇವರು ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳನ್ನು ತಂದು ದೇಶ ಪ್ರಗತಿಗೆ ಒಳ್ಳೆಯ ಕೆಲಸ ಮಾಡಿದ್ದರಿಂದ ಇವರನ್ನು ಹಸಿರು‌ಕಾಂತ್ರಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದರು. ದಲಿತ ಕುಟುಂಬದಲ್ಲಿ ಹುಟ್ಟಿ ಬೆಳೆದ ಇವರು ದೇಶಕ್ಕೆ‌ ಬಹಳಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು. ಅತಿಥಿ ಶಿಕ್ಷಕ ಲಕ್ಷ್ಮಣರಾವ್ ಕಪಗಲ್ ಮಾತನಾಡಿದರು. ಇದಕ್ಕೂ‌ ಮೊದಲು ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಭಾಗೀರಥಿ ಮತ್ತು ಸಹ ಶಿಕ್ಷಕಿ ವಿದ್ಯಾವತಿ ಇವರು ಡಾ.ಬಾಬು ಜಗಜೀವನರಾಂ ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಹಂಪನಗೌಡ, ರಜಿನಿ ಶ್ಯಾಮರಾವ್, ಜಯಮಂಗಳಾ, ಶೈಲ ನಾಯಕ, ಅತಿಥಿ ಶಿಕ್ಷಕಿ ವೀಣಾ ಅನ್ನದಾನ್ನಯ್ಯ ಸ್ವಾಮಿ ಚೀಕಲಪರ್ವಿ ಸೇರಿದಂತೆ ವಿದ್ಯಾರ್ಥಿಗಳಿದ್ದರು.  ಸಂಪಾದಕೀಯ

Leave a Reply

Your email address will not be published. Required fields are marked *