ಕಿಚ್ಚ ಸುದೀಪ್ ತಂದೆ ಸಂಜೀವ್ ಕಣ್ಣೀರು ಹಾಕಿದ್ದರು… ಯಾಕೆ…?

Spread the love

ಕಿಚ್ಚ ಸುದೀಪ್ ತಂದೆ ಸಂಜೀವ್ ಕಣ್ಣೀರು ಹಾಕಿದ್ದರುಯಾಕೆ…?

ಬೆಂಗಳೂರು: ಕಿಚ್ಚ ಸುದೀಪ್ ಅವರಿಗೆ ತಂದೆ ಮೇಲೆ ತುಂಬಾನೇ ಪ್ರೀತಿ. ಆಗಾಗ್ಗೆ ಹಳೆ ನೆನಪು ಮೆಲುಕು ಹಾಕುತ್ತಿರುತ್ತಾರೆ. ಸ್ಪರ್ಷ ಸಿನಿಮಾ ಹೆಸರು ತಂದುಕೊಟ್ಟರೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹಿಟ್ ಆಗಲಿಲ್ಲ. ಮೊದಲು ಜಾಹೀರಾತು, ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಸುದೀಪ್ ಅವರಿಗೆ ಸ್ಟಾರ್ ಪಟ್ಟ ತಂದುಕೊಟ್ಟ ಸಿನಿಮಾ “ಹುಚ್ಚ”. ಈ ಸಿನಿಮಾದಲ್ಲಿ ನಟಿಸಿದ್ದ ಸುದೀಪ್ ಅಭಿನಯಕ್ಕೆ ಎಲ್ಲರೂ ತಲೆದೂಗಿದ್ದರು, ಅಭಿನಂದಿಸಿದ್ದರು. ಚಿತ್ರದಲ್ಲಿ ಹುಚ್ಚನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ಸುದೀಪ್ ಅಭಿನಯಕ್ಕೆ ಪ್ರಶಸ್ತಿಯೂ ಬಂದಿತ್ತು. ಚಿತ್ರದ ಅರ್ಧಭಾಗದ ನಂತರ ಬರುವ ಹುಚ್ಚನ ಪಾತ್ರದಲ್ಲಿ ಸುದೀಪ್ ನಟನೆ ಕಂಡ ಸುದೀಪ್ ತಂದೆ ಸಂಜೀವ್ ಅವರು ಅಲ್ಲಿಂದ ಎದ್ದು ಹೊರಗೆ ಬಂದು ಕಣ್ಣೀರು ಹಾಕಿದರು. ಮಗನ ಅದ್ಬುತ ನಟನೆ ಕಂಡು ಹರ್ಷದ ಕಣ್ಣೀರು ಹಾಕಿದ್ದರು. ಸ್ವಾತಿಮುತ್ತು ಚಿತ್ರದಲ್ಲಿನ ನಟನೆ ಕೂಡ ಅಮೋಘ. ಸ್ವತಃ ಕಮಲ್ ಹಾಸನ್ ಅವರೇ ನನಗಿಂತಲೂ ಚೆನ್ನಾಗಿ ಸುದೀಪ್ ನಟಿಸಿದ್ದಾರೆ ಎಂಬ ಶಹಬ್ಬಾಸ್ ಗಿರಿ ನೀಡಿದ್ದರು. ಆ ಬಳಿಕ ಸುದೀಪ್ ಸೃಷ್ಟಿಸಿದ್ದು ಇತಿಹಾಸ‌. ಇನ್ನು ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದು ತುಂಬಾನೇ ಖುಷಿ ಕೊಟ್ಟಿತ್ತು. ಒಟ್ಟಿನಲ್ಲಿ ಏರಿಳಿತ ಕಂಡು ಇಡೀ ಭಾರತೀಯ ಸಿನಿಮಾ ರಂಗ ತನ್ನತ್ತ ನೋಡುವಂತೆ ಮಾಡಿದ ಸುದೀಪ್ ಗೆ ಸುದೀಪ್ ಸಾಟಿ. ಅದಕ್ಕೆ ಅವರನ್ನು ಅಭಿನಯ ಚಕ್ರವರ್ತಿ ಅಂತಾ ಕರೆಯೋದು. ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *