ಸದ್ಬಾವನ ವೇದಿಕೆಯಿಂದ ಪ್ರತಿವರ್ಷ ಶಾಂತಿ ಸೌಹಾರ್ದತೆ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ….

Spread the love

ಸದ್ಬಾವನ ವೇದಿಕೆಯಿಂದ ಪ್ರತಿವರ್ಷ ಶಾಂತಿ ಸೌಹಾರ್ದತೆ ಕಾರ್ಯಕ್ರಮ ನಡೆಸುತ್ತಿರುವುದು ಅತ್ಯಂತ ಶ್ಲಾಘನೀಯ….

ಇಸ್ಲಾಮೀಕ್ಕೆ ಹಿಂದ್ ಸಂಘಟನೆಯು ಈ ಕಾರ್ಯಕ್ರಮ ನಡೆಸುವ ಕಾರ್ಯದಲ್ಲಿ  ಪ್ರಮುಖ ಪಾತ್ರ ವಹಿಸಿದೆ. ಜಾತಿ, ಉಪಜಾತಿ ಜನರ  ಮಧ್ಯದ ಆಂತರಿಕ ಸಂಘರ್ಷ, ಕೋಮುವಾದ ಮತ್ತು ಮೂಲಭೂತವಾದದ ಕ್ರೌರ್ಯ ವಿಜ್ರಂಭಿಸುತ್ತಿರುವ  ಪ್ರಸ್ತುತ ದಿನಗಳಲ್ಲಿ ಇಂತಹ ಕಾರ್ಯಕ್ರಮ ಅತ್ಯಗತ್ಯವಾಗಿದೆ. ಧರ್ಮಗಳಿಗೆ ಹಲವು ಧೋರಣೆಗಳಿರಬಹುದು.ಆದರೆ ಮಾನವೀಯತೆಗೆ ಒಂದೇ ಧೋರಣೆ…. ಪರಸ್ಪರನ್ನು ಗೌರವಿಸುವ, ಪ್ರೀತಿಸುವ, ಸಮಾನತೆಯಿಂದ ನೋಡುವ, ಸಮಾನತೆ ಕೊಡಿಸುವ ಇತ್ಯಾದಿ. ಕಾಯಕವೇ ಕೈಲಾಸವೆಂದು ಸಮಾನತೆ ಬೋಧಿಸುವ  ಬಸವ ಧರ್ಮ ಯಾಕೆ ಸಾರ್ವತ್ರಿಕಗೊಳ್ಳುತ್ತಿಲ್ಲ. ಶ್ರಮ ಸಂಸ್ಕೃತಿಯಯನ್ನು ಎತ್ತಿ ಹಿಡಿಯುವ ಯಾವ ವಿಚಾರಗಳು ಬೆಳೆಯದಂತೆ ತಡೆ ಹೊಡ್ಡಲಾಗುತ್ತಿದೆ.ಇತಿಹಾಸದೂದ್ದಕ್ಕೂ  ದುಡಿಯುವ ವರ್ಗದ  ವಿಚಾರಗಳನ್ನು ಹತ್ತಿಕ್ಕಲಾಗಿದೆ.ಜಮಾತ ಇಸ್ಲಾಮೀ ಹಿಂದ್ ಸಂಘಟನೆಯ ಸಿಂಧನೂರ ಸ್ನೇಹಿತರು ಎಲ್ಲಾ ಧರ್ಮಗಳ ಮತ್ತುಎಲ್ಲಾ ಜಾತಿಯ ಜನರನ್ನು ಬೆಸೆಯುವ ಕಾರ್ಯದಲ್ಲಿ ಒಂದು ಹೆಜ್ಜೆ ಮುಂದೆ ಇದ್ದಾರೆ.ವಿಶಾಲವಾಗಿರುವ ದುಡಿಯುವ ಜನರ ಮಧ್ಯೆ ಶಾಂತಿ ಸೌಹಾರ್ದತೆಯಯನ್ನು ಬೆಸೆಯಬೇಕಾಗಿದೆ. ಮಾನವೀಯ ಮೌಲ್ಯಗಳಿಗಾಗಿ ಮತ್ತು ಸಮಾನತೆಗಾಗಿ ಹೋರಾಡಿದ; ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ, ಭಗತ್ ಸಿಂಗ್ ಇತರೆ ಮಹಾತ್ಮರ ವಿಚಾರಗಳನ್ನು ಗ್ರಾಮೀಣ ಭಾಗಕ್ಕೆ ಕೊಂಡೊಯ್ಯುವ  ಕಾರ್ಯಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ. ಸದ್ಬಾವನ ವೇದಿಕೆಯನ್ನು ಮುನ್ನಡೆಸುವ ಸದಸ್ಯ ಸಂಘಟನೆಗಳು ಈ ಕುರಿತು ಹೆಚ್ಚಿನ ಗಮನ ಸರಿಸಬೇಕಾಗಿದೆ. ಡಿ.ಹೆಚ್.ಪೂಜಾರ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *