ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಸಂಗನಾಳ ಗ್ರಾಮ ಪಂಚಾಯಿತಿಯಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ನಮ್ಮ ನಡಿಗೆ ಪ್ಲಾಸ್ಟಿಕ್ ಮುಕ್ತ ಕಡೆಗೆ…..

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಸಂಗನಾಳ ಗ್ರಾಮ ಪಂಚಾಯಿತಿಯಲ್ಲಿ  ಸ್ವಚ್ಛ ಭಾರತ್ ಮಿಷನ್ (ಗ್ರಾ) ನಮ್ಮ ನಡಿಗೆ  ಪ್ಲಾಸ್ಟಿಕ್‌ ಮುಕ್ತ ಕಡೆಗೆ…..

ಪರಿಸರ ಹಾಗೂ ಜೀವಿಗೆ ಹಾನಿಯಾಗಬಹುದಾದ ಪ್ಲಾಸ್ಟಿಕ್‌ ನಿಷೇಧಕ್ಕೆ ಸಂಬಂಧಸಿದಂತೆ ಜಿಲ್ಲೆಯಲ್ಲಿ ಆಗಾಗ ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದರೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಹೆಚ್ಚು ಮುತುವರ್ಜಿ ವಹಿಸಬೇಕಾದ ಸ್ಥಳೀಯ ಸಂಸ್ಥೆಗಳು ಕೆಲವೆಡೆ ಕಂಡು ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿವೆ. ಜಿಲ್ಲಾಡಳಿತದಲ್ಲಿ ಸಭೆ ನಡೆದ ತಕ್ಷಣ ಅಲ್ಲಲ್ಲಿ ದಾಳಿ ಮಾಡಿದಂತೆ ತೋರುವ ಸ್ಥಳೀಯ ಸಂಸ್ಥೆಗಳು ಮುಂದಿನ ಹಂತದಲ್ಲಿ ಕಾರ್ಯಾಚರಣೆ ಚುರುಕುಗೊಳಿಸದ ಕಾರಣ ಜಿಲ್ಲೆಯಲ್ಲಿ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆದಿದೆ ಎಂಬ ಮಾತು ಕೇಳಿದೆ. ಕಾಯ್ದೆ ಜಾರಿ ಬಳಿಕ ಆರಂಭದಲ್ಲಿ ಜಿಲ್ಲೆಯಲ್ಲೆಡೆ ವ್ಯಾಪಕ ಪ್ರಮಾಣದಲ್ಲಿ ದಾಳಿ ನಡೆಸಿ ಪ್ಲಾಸ್ಟಿಕ್‌ ವಸ್ತು ವಶಕ್ಕೆ ಪಡೆಯಲಾಗಿತ್ತು. ಇನ್ನೇನು ಪ್ಲಾಸ್ಟಿಕ್‌ ವಸ್ತುಗಳು ಸಂಪೂರ್ಣ ಕಣ್ಮರೆಯಾಗಲಿವೆ ಎಂಬ ಭಾವನೆ ಎಲ್ಲರಲ್ಲೂ ಮೂಡಿತ್ತು. ಜತೆಗೆ ಕೆಲ ಕಾಲ ಪೇಪರ್‌ ಬ್ಯಾಗ್‌ಗಳು ಜಿಲ್ಲೆಯ ಹಲವೆಡೆ ಕಂಡು ಬಂದಿದ್ದವು. ಆದರೆ, ಅಧಿಕಾರಿಗಳು ಆರಂಭದಲ್ಲಿ ತೋರಿಸಿದ ಉತ್ಸಾಹ ನಂತರದಲ್ಲಿ ತೋರಲಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಯಥಾಸ್ಥಿತಿ ಮುಂದುವರೆದಿದೆ. ಇತ್ತೀಚೆಗೆ ಕೆಲ ದಿನಗಳಿಂದೀಚೆ ಜಿಲ್ಲೆಯ ಹಲವೆಡೆ ದಾಳಿ ಮಾಡಿ ಪ್ಲಾಸ್ಟಿಕ್‌ ವಸ್ತುಗಳನ್ನು ವಶಕ್ಕೆ ಪಡೆಯುತ್ತಿರುವುದು ಕೇಳಿ ಬರುತ್ತಿದ್ದರೂ ಕಠಿಣ ಕ್ರಮ ಇಲ್ಲವಾದ್ದರಿಂದ ಕಾಟಾಚಾರದ ದಾಳಿ ಎಂಬಂತಾಗಿದೆ ಎಂಬುದು ಪರಿಸರವಾದಿಗಳ ಅಭಿಪ್ರಾಯವಾಗಿದೆ. ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಇಂದಿಗೂ ನಿಂತಿಲ್ಲ. ಪರಿಸರ ರಕ್ಷಣೆ ನಿಟ್ಟಿನಲ್ಲಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಬೀಳಬೇಕು. ಇದಕ್ಕೆ ಆಡಳಿತ ಬಿಗಿ ನಿಲುವು ಅತ್ಯಗತ್ಯವಾಗಿದೆ. ಶೇ.15ರಿಂದ 20 ಜನತೆ ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿದ್ದು ಜನರಲ್ಲೂ ಜಾಗೃತಿ ಮೂಡಬೇಕು. ಸ್ಥಳೀಯ ಆಡಳಿತ ಪರಾರ‍ಯಯ ವ್ಯವಸ್ಥೆ ಮೂಲಕ ನಿಷೇಧಿತ ಪ್ಲಾಸ್ಟಿಕ್‌ ವಸ್ತುಗಳಿಗೆ ಬ್ರೆಕ್‌ ಹಾಕಬೇಕೆಂದು ಈ ಸಂಧರ್ಭದಲ್ಲಿ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀಮತಿ ಕವಿತಾ ಪಾಟೀಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಯಮನಮ್ಮ ಹಾಗು ಉಪಾಧ್ಯಕ್ಷರು ಶರಣಪ್ಪ ಹಂಚಿನಾಳ ಗ್ರಾಮ ಪಂಚಾಯಿತಿ ಕಾರ್ಯದರ್ಶಿಯಾದ ಯಮನೂರ ಪೂಜಾರಿ, ಜೊತೆಗೆ ಆನಂದ್ ನೀರಲೂಟಿ ವಿಠೋಬ ಕಂಪ್ಯೂಟರ್ ಆಪರೇಟರ್ ಹಾಗೂ    ಗ್ರಾಮ ಪಂಚಾಯ್ತಿ ಸದಸ್ಯರಾದ ಶ್ರೀಮತಿ ಮರಿಯಮ್ಮ ಹರಿಜನ ಇನ್ನಿತರ ಉಪಸ್ಥಿತರಿದ್ದರು..

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *