ಕರ್ನಾಟಕ ರೈತ ಸಂಘ (AIKKS)ದ ಉದ್ಬಾಳ (ಯು) ಗ್ರಾಮ ಘಟಕ   (ಮಸ್ಕಿ ತಾಲೂಕ) ಉದ್ಘಾಟನೆ ಕಾರ್ಯಕ್ರಮ ನಡೆಯಿತು.

Spread the love

ಕರ್ನಾಟಕ ರೈತ ಸಂಘ (AIKKS) ಉದ್ಬಾಳ (ಯು) ಗ್ರಾಮ ಘಟಕ   (ಮಸ್ಕಿ ತಾಲೂಕ) ಉದ್ಘಾಟನೆ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ಡಿ.ಹೆಚ್.ಪೂಜಾರ, ಜಿಲ್ಲಾಧ್ಯಕ್ಷರಾದ ಅಶೋಕ್ ನಿಲೋಗಲ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿ ಸ್ಥಾನ  ಗಿಟ್ಟಿಸಿಕೊಂಡ  ಸಚಿವರು ಪಕ್ಷಕ್ಕೆ  ನೂರಾರು ಕೋಟಿ ರೂ, ಸಂದಾಯ ಮಾಡಿದ್ದಾರೆಂದು, ಹಿರಿಯರ ಸಂಗಾತಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ಶಶಿಕಲಾ ಜೊಲ್ಲೆ (ಪಕ್ಷದ ದೆಹಲಿ ಮಟ್ಟದ ಮುಖಂಡರಿಗೆ ನೂರಾರು ಕೋಟಿ ಕೊಟ್ಟು)  ಕೊನೆ ಗಳಿಗೆಯಲ್ಲಿ ಮಂತ್ರಿ ಸ್ಥಾನ ಗಿಟ್ಟಿಸಿಕೊಂಡರು. ಹಿರಿಯೂರ ಕ್ಷೇತ್ರದ ಶಾಸಕಿ ಗೆ ನಿಗದಿಯಾಗಿದ್ದ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ  ಹಣದ ವ್ಯವಹಾರವೆ ಕಾರಣ ಎನ್ನಲಾಗುತ್ತಿದೆ. ಭೂ ಗಣಿ ಮಂತ್ರಿ ಕೂಡ ನೂರಾರು ಕೋಟಿ ಹಣ ಕೊಟ್ಟಿದ್ದಾರೆಂದು ಸುದ್ದಿಗಳು ಹರಿದಾಡುತ್ತಿವೆ. ನೂರಾರು ಕೋಟಿ ಸಂದಾಯ   ಮಾಡಿ ಮಂತ್ರಿಯಾಗಿರುವವರು ಸಾವಿರಾರು ಕೋಟಿ ಲಾಭ ಮಾಡಿಕೊಳ್ಳುವ ಗುರಿ ಹೊಂದಿದ್ದಾರೆ. ಅಕ್ರಮ ಮರಳುಗಾರಿಕೆ, ಸಕೆಂಡ್ ಮದ್ಯೆ ಮಾರಾಟ ಇತರೆ ಮೋಸದ ವ್ಯವಹಾರಗಳ ಮೂಲಕ ಜನರನ್ನು ಸುಲಿಗೆ ಮಾಡಲಾಗುತ್ತದೆ.

ಹಾಗಾಗಿ ಎಲ್ಲಾ ರೈತರು, ಕಾರ್ಮಿಕರು  ಐಕ್ಯತೆಯಿಂದ ಹೋರಾಟ ಮಾಡಿ ಮೋಸ, ವಂಚನೆಯ ವ್ಯವಹಾರಗಳನ್ನು ನಿರ್ಮೂಲನೆ ಮಾಡಬೇಕೆಂದು ಕರೆ ಕೊಡಲಾಯಿತು. ಮಸ್ಕಿ ತಾಲೂಕ ಸಮಿತಿಯ ಅಧ್ಯಕ್ಷರಾದ ಸಂತೋಷ್ ದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೆಹಲಿಯಲ್ಲಿ ನಡೆದಿರುವ ರೈತರ ಹೋರಾಟಕ್ಕೆ ಬೆಂಬಲಸೋಣ ಮತ್ತು ಮೋದಿ ಸರ್ಕಾರ ತೊಲಗಲಿ ಎನ್ನುವ ಘೋಷಣೆಗಳು ಮೊಳಗಿದವು. ಶಿರವಾರ ತಾಲೂಕ ಅಧ್ಯಕ್ಷರಾದ ರಮೇಶ, ಲಿಂಗಸೂಗುರು ತಾಲೂಕ ಅಧ್ಯಕ್ಷರಾದ ಗೌಸಖಾನ, ಸಿಂಧನೂರ ತಾಲೂಕ ಅಧ್ಯಕ್ಷರಾದ ರಮೇಶ ಪಾಟೀಲ್, ಬಿ.ಎನ್.ಯರದಿಹಾಳ, ಚಿಟ್ಟಿಬಾಬು, ನಾಗರಾಜ್ ಶಿರವಾರ, ಹುಲಗಪ್ಪ ಮಡಿವಾಳರ ಶಿರವಾರ, ಅಂಬ್ರೇಶ ಪಾಪನಕೆಲೂರ, ರಾಮರಡ್ಡೆಪ್ಪ ಚಿಲಕರಾಗಿ, ಹನುಮಂತಪ್ಪ ಗುಂತುಗೊಳ, ಯಂಕಪ್ಪ ಗುಂತುಗೊಳ ಮತ್ತು ಉದ್ಬಾಳ ಗ್ರಾಮದ ಮರಿಸ್ವಾಮಿಯಪ್ಪ, ಹನುಮಂತ, ದುರುಗಪ್ಪ, ಇತತರರು ಭಾಗವಹಿಸಿದ್ದರು. ಇದಕ್ಕೂ ಮೊದಲು ಮಸ್ಕಿ ಪಟ್ಟಣದಲ್ಲಿ ಅಂಬೇಡ್ಕರ್ ಮೂರ್ತಿಗೆ  ಮಾಲರ್ಪಣೆ ಮಾಡಿ, ದೇಶದ ಸಂವಿಧಾನ ಉಳಿಸಿ, ಅಂಬೇಡ್ಕರ್ ಆಶಯಗಳನ್ನು ಎತ್ತಿ ಹಿಡಿಯೋಣ ಎನ್ನುವ ಘೋಷಣೆಗಳು ಮೊಳಗಿದವು. ಈ ಸಂದರ್ಭದಲ್ಲಿ ಜನ ಕವಿ ಸಿ.ದಾನಪ್ಪನವರು ಉಪಸ್ಥಿತರಿದ್ದರು. ಮಾರುತಿ ಜಿನ್ನಾಪೂರ ತಾಲೂಕ  ಕಾರ್ಯದರ್ಶಿ ಕರ್ನಾಟಕ ರೈತ ಸಂಘ (AIKKS)  ತಾಲೂಕ ಸಮಿತಿ ಮಸ್ಕಿ…

ವರದಿ – ಸೋಮನಾಥ ಹೆಚ್.ಎಮ್.

Leave a Reply

Your email address will not be published. Required fields are marked *