ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಕಟ್ಟೆ ನಾಗರಕಟ್ಟೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆ ಅಸ್ಥಿತ್ವ…

Spread the love

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಕಟ್ಟೆ ನಾಗರಕಟ್ಟೆಯಲ್ಲಿ ಕಟ್ಟಡ ಕಾರ್ಮಿಕ ಸಂಘಟನೆ ಅಸ್ಥಿತ್ವ…

-ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಕಟ್ಟೆ ಗ್ರಾಮದಲ್ಲಿ,ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ತಾಲೂಕು ಸಮಿತಿ ನೇತೃತ್ವದಲ್ಲಿ. ಗ್ರಾಮ ಘಟಕವನ್ನು ಅಸ್ಥಿತ್ವಕ್ಕೆ ತರಲಾಯಿತು ಮತ್ತು ನಾಮಫಲಕ ಉದ್ಘಾಟಿಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುನಾಥ್  ಉದ್ಘಾಟಿಸಿ ಮಾತನಾಡಿ ಈ ದಿನ ನಮ್ಮೂರಿನಲ್ಲಿ ಕಾರ್ಮಿಕರ ನಾಮಫಲಕ ಉದ್ಘಾಟನೆಯನ್ನು ಮಾಡಿರುವುದು ನನಗೆ ಖುಷಿ ತಂದಿದೆ ಆದರೆ ಕಾರ್ಮಿಕ ಮಂಡಳಿಯಲ್ಲಿ ಸಿಗುವಂತ ಅನೇಕ ಸೌಲಭ್ಯಗಳನ್ನು ಕಟ್ಟಡ ಕಾರ್ಮಿಕರು ಪಡೆಯಲು ಸಂಘಟನೆಯ ಅಡಿಯಲ್ಲಿ ಒಗ್ಗಟ್ಟಾಗಿ ಎಲ್ಲರೂ ಜಾಗೃತಗೊಂಡು ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದು ಕಾರ್ಮಿಕರಿಗೆ ಕರೆ ನೀಡಿದರು ಇದೇ ಸಂದರ್ಭದಲ್ಲಿ . ಹಾಗೂ ತಾಲೂಕು ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ಯು.ಪೆನ್ನಪ್ಪ, ಮಾತನಾಡಿ ನಾಗರಕಟ್ಟೆ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ ಮಾಡಿರುವುದು ಕಟ್ಟಡ ಕಾರ್ಮಿಕ ಮಂಡಳಿ ವತಿಯಿಂದ ಸೌಲಭ್ಯಗಳನ್ನು ದೊರಕಿಸಿಕೊಡುವ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ಹಾಗೂ ಕೊಟ್ಟೂರು ತಾಲೂಕಿನ ಪ್ರತಿ ಗ್ರಾಮದಲ್ಲಿರುವ ಕಟ್ಟಡ ಕಾರ್ಮಿಕರನ್ನು ಸಂಘಟಿತರನ್ನಾಗಿಸಿ ಸೌಲಭ್ಯಗಳನ್ನು ಕೊಡಿಸಲು ಹಾಗೂ ಮಧ್ಯವರ್ತಿಗಳನ್ನು ಮಟ್ಟಹಾಕಿ ಕಳಪೆ ಕಾರ್ಡ್ ದಾರರನ್ನು ಮಟ್ಟಹಾಕಿ ಮಂಡಳಿಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ಸರಿಪಡಿಸಲು ಹಾಗೂ ಎಲ್ಲಾ ಕಾರ್ಮಿಕರು ಸಂಘಟಿತರಾಗ  ಬೇಕೆಂದರು ಕಾರ್ಮಿಕರಿಗೆ ಕಿವಿಮಾತು ತಿಳಿಸಿದರು ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರು ಯಶವಂತ್ ಗ್ರಾಮದ ಮುಖಂಡ ಏ.ಕೆ ಸಿದ್ದಲಿಂಗಪ್ಪ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ದೇವೇಂದ್ರಪ್ಪ ತೂಲಹಳ್ಳಿ ಕಾರ್ಮಿಕ ಸಂಘಟನೆ ಅಧ್ಯಕ್ಷರು ಹಾಗೂ ಖಜಾಂಚಿ ಕರಿಬಸಪ್ಪ ಹನುಮಂತಪ್ಪ ಕುರುಬನಹಳ್ಳಿ ಬಸವರಾಜ ವಿ ಎಚ್. ಹನುಮನಹಳ್ಳಿ ಮುನ್ನ ಮಂಗನಹಳ್ಳಿ ಅಂಜಿನಪ್ಪ  ಕೂಡ್ಲಿಗಿ ಕಾರ್ಮಿಕ ಮುಖಂಡ ಹಾಗೂ ಸಿಪಿಐ ಕಾರ್ಯದರ್ಶಿ ಹೆಚ್.  ವೀರಣ್ಣ,  ಇದೇ ಸಂದರ್ಭದಲ್ಲಿ ಗ್ರಾಮ ಘಟಕದ ನೂತನ ಪದಾಧಿಕಾರಿಗಳ ನಾಯಕ ಮಾಡಲಾಗಿದ್ದು ಅಧ್ಯಕ್ಷರನ್ನಾಗಿ ಏ.ಕೆ. ಚೌಡಪ್ಪ ಉಪಾಧ್ಯಕ್ಷರಾಗಿ ಮರುಳಸಿದ್ಧ ಕಾರ್ಯದರ್ಶಿ ಮಂಜುನಾಥ್ ಸಂಚಾಲಕ ಏಕಲವ್ಯ ಸಂಘಟನಾ ಸಂಚಾಲಕರಾಗಿ ಸಂತೋಷ್ ಹಾಗೂ ಆರು ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನಾ ಒಳಗೊಂಡ ಎಲ್ಲ ಸರ್ವ ಸದಸ್ಯರ ಸಮಿತಿಯನ್ನು ರಚಿಸಲಾಯಿತು ಈ ಸಂದರ್ಭದಲ್ಲಿ ಕಾರ್ಮಿಕರು ಗ್ರಾಮದ ಹಿರಿಯರು.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *