ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನಿಡುವ ಮೂಲಕ ಶಾಲೆಗೆ ಬರಮಾಡಿ ಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು …..

Spread the love

ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನಿಡುವ ಮೂಲಕ ಶಾಲೆಗೆ ಬರಮಾಡಿ ಕೊಂಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ….

ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಆದರ್ಶ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನಿಡುವ ಮೂಲಕ ಶಾಲೆಗೆ ಬರಮಾಡಿ ಕೊಂಡರು. ನಂತರ ಮಾತನಾಡಿದ ಅವರು ಸರಕಾರದ ನಿರ್ದೇಶನದಂತೆ ಪ್ರೌಢಶಾಲೆಗಳನ್ನು ಮಾತ್ರ ಪ್ರಾರಂಭಮಾಡಿದ್ದು, ಶಾಲೆಗಳ ಪ್ರವೇಶದ್ವಾರದಲ್ಲಿಯೇ ಮಕ್ಕಳಿಗೆ ಥರ್ಮಲ್ ಸ್ಕಾö್ಯನ್ ಮತ್ತು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಮಾಸ್ಕ್ ಧರಿಸಿಕೊಂಡು ಬರುವುದನ್ನು ಕಡ್ಡಾಯ ಗೊಳ್ಳಿಸಲಾಗಿದೆ ಎಂದು ತಿಳಿಸಿದರು.  ತಾಲ್ಲೂಕಿನ ನೀರಮಾನವಿ ,ಹರವಿ, ಮಾಡಗಿರಿ ಗ್ರಾಮಗಳು ಸೇರಿದಂತೆ ,ಸಿರವಾರ ತಾಲ್ಲೂಕಿನ ವಿವಿಧ ಪ್ರೌಢ ಶಾಲೆಗಳಿಗೆ ಸಂದರ್ಶನ ನೀಡಿ ಪರಿಶೀಲನೆ ನಡೆಸಿದರು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಶಾಲೆಗೆ ಅಗಮಿಸುತ್ತಿರುವುದು ಕಂಡು ಬಂತು. ಡಯಟ್‌ನ ಹಿರಿಯ ಉಪನ್ಯಾಸಕ ಮಲ್ಲಿಕಾರ್ಜುನ ಹಾಗೂ ಶಿಕ್ಷಣ ಸಂಯೋಜಕರು, ಸಿ.ಆರ್.ಪಿ.ಗಳು ಇದ್ದರು. ಶಾಲೆಗಳನ್ನು ತಳಿರು ತೋರಣ ಕಟ್ಟಿ ಆಕರ್ಷಕವಾಗಿ ಸಿಂಗರಿಸಲಾಗಿತ್ತು. ಶಿಕ್ಷಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡರು.  ಮಾನ್ವಿ: ತಾಲ್ಲೂಕಿನ ನೀರಮಾನ್ವಿ ಗ್ರಾಮದಲ್ಲಿನ ಆದರ್ಶ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನಿಡುವ ಮೂಲಕ ಶಾಲೆಗೆ ಬರಮಾಡಿ ಕೊಂಡರು.

ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *