ವಿದ್ಯುತ್ ಖಾಸಗೀಕರಣದಿಂದ ರೈತರು, ಸಾಮಾನ್ಯ ಜನರಷ್ಟೆ ಅಲ್ಲ,  ನೌಕರರು/ ಅಧಿಕಾರಿಗಳು ಕೂಡ ತೀವ್ರ ತೊಂದರೆಗೆ ಸಿಲುಕಲಿದ್ದಾರೆ…

Spread the love

ವಿದ್ಯುತ್ ಖಾಸಗೀಕರಣದಿಂದ ರೈತರು, ಸಾಮಾನ್ಯ ಜನರಷ್ಟೆ ಅಲ್ಲನೌಕರರು/ ಅಧಿಕಾರಿಗಳು ಕೂಡ ತೀವ್ರ ತೊಂದರೆಗೆ ಸಿಲುಕಲಿದ್ದಾರೆ

ಸಿಂಧನೂರಲ್ಲಿಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ನೌಕರರು, ಮುಂದೆ   ತಮಗಾಗುವ ತೊಂದರೆಗಳನ್ನು  ಬಹಿರಂಗವಾಗಿ ಹೇಳಿಕೊಂಡರು. ದೆಹಲಿಗೆ ಕಾಲ್ನಡಿಗೆ ಜಾಥಾ ನಡೆಸಿರುವ ನಾಗರಾಜ್  (ಕಲ್ಲಕುಟಗರು) ಬಾಗಲಕೋಟೆ ನಿನ್ನೇಯ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.ವಿದ್ಯುತ್ ಖಾಸಗೀಕರಣ  ಮತ್ತು ಮೂರು ಕೃಷಿ  ತಿದ್ದುಪಡಿ ಕಾಯ್ದೆ ವಿರುದ್ಧ ನಡೆದಿರುವ ಹೋರಾಟಗಳ ವಿಧಾನಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ. ( ಕರ್ನಾಟಕದಲ್ಲಿ ನಡೆದಿರುವ ಹೋರಾಟಗಳ ಕುರಿತು)  ಸಾಂಕೇತಿಕವಾಗಿ ನಡೆಸುವ ಹೋರಾಟಗಳು ಸ್ವಲ್ಪ ಪ್ರಚಾರ ಪಡೆದುಕೊಳ್ಳಬಹುದಷ್ಟೆ. ಜನರಿಗೆ ವಿಷಯವನ್ನು ತಲುಪಿಸಲು ಮತ್ತು ಜಾಗೃತಿ ಮೂಡಿಸಲು ಸಾಂಕೇತಿಕ ಹೋರಾಟಗಳು ಅಗತ್ಯ. ಆದರೆ ಸ್ವಯಂ ತೃಪ್ತಿಗಾಗಿ ಸಾಂಕೇತಿಕ ಹೋರಾಟಗಳು  ಎನ್ನುವಂತಾಗಬಾರದು.  ಹೋರಾಟಗಳು ಜನರಲ್ಲಿ ಪ್ರಕ್ಷೋಭೆಯನುಂಟುಮಾಡುವಂತಾಗಬೇಕು. ಜನರನ್ನು ಬಡಿದೆಬ್ಬಿಸುವ ರೀತಿಯ ಹೋರಾಟಗಳು ನಡೆಯಬೇಕು. ಅಸಂಬ್ಲಿ, ಪಾರ್ಲಿಮೆಂಟಗಳಲ್ಲಿ ಶಾಸಕರು ಮತ್ತು ಸಂಸದರು ಧ್ವನಿ ಎತ್ತುವಂತಾಗಬೇಕು. ರೈತರು ಸ್ವಯಂ ಇಚ್ಛೆಯಿಂದ ಶಾಸಕರ, ಸಂಸದರ ಮನೆಯ ಮುಂದೆ  ಹೋರಾಟಗಳನ್ನು ನಡೆಸುವಂತ ಪರಸ್ಥಿತಿ ನಿರ್ಮಾಣವಾಗಬೇಕಾಗಿದೆ. ವಿದ್ಯುತ್ ಖಾಸಗೀಕರಣ  ಮತ್ತು ಮೂರು  ಕೃಷಿ ತಿದ್ದುಪಡಿ ಕಾಯ್ದೆಗಳ ವಿರುದ್ಧ ಮಾತನಾಡದ ಜನಪ್ರತಿನಿಧಿಗಳನ್ನು ಕಾರ್ಪೋರೇಟ್ ಕಂಪನಿಗಳ ದಲ್ಲಾಳಿಗಳೆಂದು ಘೋಷಿಸಬೇಕು. ಈ ಕಾರ್ಯವು ವ್ಯವಸ್ಥಿತವಾಗಿ ನಡೆಯಬೇಕಾದರೆ ಹೋರಾಟಗಳು ಹಳ್ಳಿಗಳನ್ನು ಕೇಂದ್ರಿಕರಿಸಬೇಕು ದೆಹಲಿಯಲ್ಲಿ 8 ತಿಂಗಳಿಂದ ನಡೆದಿರುವ ಹೋರಾಟದ ಹಿಂದೆ ಸಾವಿರಾರು  ಕಾರ್ಯಕರ್ತರ ನಿಸ್ವಾರ್ಥದ  ನಿರಂತರ ಪರಿಶ್ರಮವಿದೆ.  ಪಂಜಾಬ್, ಹರಿಯಾಣ (ಉತ್ತರಪ್ರದೇಶದ ಹಲವು ಭಾಗ) ರಾಜಸ್ಥಾನ ರಾಜ್ಯಗಳಲ್ಲಿನ ಕಾರ್ಯಕರ್ತರು,  ಎರಡು ವರ್ಷಗಳ ಹಿಂದೆ   ಕಠಿಣ ಪರಿಶ್ರಮ ಪಟ್ಟಿದ್ದರಿಂದಲೆ ದೆಹಲಿ ಹೋರಾಟ ಜಾಗತಿಕ ಮನ್ನಣೆ ಪಡೆದಕೊಂಡಿದೆ.  ಈ ಹಿನ್ನೆಲೆಯಲ್ಲಿ ಎಲ್ಲಾ ರೈತ ಮತ್ತು ಕಾರ್ಮಿಕ, ವಿದ್ಯಾರ್ಥಿ ಯುವಜನ  ಸಂಘಟನೆಗಳು ಹಳ್ಳಿಗಳ ಕಡೆಗೆ  ಹೋರಾಟವನ್ನು ವಿಸ್ತರಿಸುವ ತೀರ್ಮಾನಕ್ಕೆ ಮುಂದಾಬೇಕಾಗಿದೆ. ಡಿ.ಹೆಚ್.ಪೂಜಾರ ರಾಜ್ಯಾಧ್ಯಕ್ಷರು ಕರ್ನಾಟಕರೈತ ಸಂಘ (AIKKS) ವರದಿ – ಸಂಪಾದಕೀಯ

Leave a Reply

Your email address will not be published. Required fields are marked *