ಆಮ್ ಆದ್ಮಿ ಪಕ್ಷದಿಂದ ಮಾಜಿ ಸೈನಿಕರಿಗೆ ಸನ್ಮಾನಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ……

Spread the love

ಆಮ್ ಆದ್ಮಿ ಪಕ್ಷದಿಂದ ಮಾಜಿ ಸೈನಿಕರಿಗೆ ಸನ್ಮಾನಿಸುವ ಮೂಲಕ 75 ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ……

ಇಂದು ಆಮ್ ಆದ್ಮಿ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸುವ ಮೂಲಕ ೭೫ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣನವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಾಜಿ ಸೈನಿಕರಾದ ಬಸವರಾಜ ಕಟಾಂಬ್ಲಿ, ಇಂದಿನ ಸಂದರ್ಭಕ್ಕೆ ಆಮ್ ಆದ್ಮಿ ಪಕ್ಷವೊಂದೇ ಪರ್ಯಾಯವಾಗಿದ್ದು, ಪಕ್ಷದ ಹೋರಾಟಗಳನ್ನು ಮತ್ತು ಪ್ರಾಮಾಣಿಕ ರಾಜಕಾರಣವನ್ನು ನೋಡಿ ಮೆಚ್ಚಿಕೊಂಡಿದ್ದೇನೆ. ಈ ಹೋರಾಟಗಳು ಮತ್ತು ಪ್ರಾಮಾಣಿಕ ರಾಜಕಾರಣದ ಕೆಚ್ಚು ಹಾಗೆಯೇ ಮುಂದುವರೆಯುವಂತಾಗಲಿ, ಆ ಮೂಲಕ ಗಂಗಾವತಿಯಲ್ಲೂ ಜನಸಾಮಾನ್ಯರಿಗೆ ಆಮ್ ಆದ್ಮಿ ಸರ್ಕಾರದ ಸೌಲಭ್ಯಗಳು ದೊರೆಯಲಿ ಎಂದು ಆಶಿಸಿದರು. ಅಲ್ಲದೆ ತಾವು ಸೈನ್ಯದಲ್ಲಿದ್ದಾಗ ಪಟ್ಟ ಶ್ರಮ ಮತ್ತು ದೇಶಭಕ್ತಿ ಹಾಗೂ ವಿವಿಧ ಕಾರ್ಯಾಚರಣೆಗಳನ್ನು ಮನಮುಟ್ಟುವಂತೆ ಚಿತ್ರಿಸಿದರು. ಆಮ್ ಆದ್ಮಿ ಪಕ್ಷದ ಜಿಲ್ಲಾ ಸಂಚಾಲಕರಾದ ಹುಸೇನಸಾಬ್ ಗಂಗನಾಳರವರು ಧ್ವಜಾರೋಹಣದ ಅಧ್ಯಕ್ಷತೆ ವಹಿಸಿ ಭಾರತದ ರಾಜಕಾರಣದಲ್ಲಿ ದಿನದಿನವೂ ಬದಲಾವಣೆ ಉಂಟಾಗುತ್ತಿದ್ದು, ಆಮ್ ಆದ್ಮಿ ಪಕ್ಷಕ್ಕೆ ಎಲ್ಲಾ ವರ್ಗದ ಜನರ ಕಡೆಯಿಂದ ನಿರಂತರವಾಗಿ ಪ್ರತಿಕ್ರಿಯೆಗಳು ಬರುತ್ತಿದ್ದು, ಮುಂಬರುವ ಜಿಲ್ಲಾ ಮತ್ತು ತಾಲೂಕ ಪಂಚಾಯತ್ ಚುನಾವಣೆಗಳಲ್ಲಿ ಕೊಪ್ಪಳ ಆಮ್ ಆದ್ಮಿ ಪಕ್ಷ ಜನಸಾಮಾನ್ಯರ ಸಹಕಾರದೊಂದಿಗೆ ಸ್ಪರ್ಧಿಸಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ. ಆ ಮೂಲಕ ಕರ್ನಾಟಕ ಆಮ್ ಆದ್ಮಿ ಪಕ್ಷಕ್ಕೆ ಕೊಪ್ಪಳ ಕಾರ್ಯಕರ್ತರು ಅವಿಸ್ಮರಣೀಯ ದಾಖಲೆಯನ್ನು ಒದಗಿಸಲಿದ್ದಾರೆ ಎಂದು ತಿಳಿಸಿದರು. ನಂತರ ಮಾತನಾಡಿದ ಆಮ್ ಆದ್ಮಿ ಪಕ್ಷದ ಗಂಗಾವತಿ ತಾಲೂಕ ಅಧ್ಯಕ್ಷರಾದ ಶರಣಪ್ಪ ಸಜ್ಜಿಹೊಲ ವಕೀಲರು ಮಾತನಾಡುತ್ತಾ, ಸೈನಿಕರ ಶ್ರಮ ಮತ್ತು ಆಮ್ ಆದ್ಮಿ ಕಾರ್ಯಕರ್ತರ ಶ್ರಮ ಹಾಗೂ ದೇಶಭಕ್ತಿ ನಿಸ್ವಾರ್ಥ ಸೇವೆಗಳನ್ನು ಪ್ರಶಂಶಿಸುತ್ತಾ, ಸೈನಿಕರಂತೆಯೇ ಆಮ್ ಆದ್ಮಿ ಕಾರ್ಯಕರ್ತರು ನಿರಂತರವಾಗಿ ಶ್ರಮಿಸಬೇಕಾದ ಹಾಗೂ ಗಟ್ಟಿ ಛಲವನ್ನು ಹೊಂದಿರಬೇಕಾದ ಅಗತ್ಯತೆ ಇದೆ. ಆ ಮೂಲಕ ಕರ್ನಾಟಕವನ್ನು ಪ್ರಾಮಾಣಿಕ ರಾಜಕಾರಣದತ್ತ ಕೊಂಡೊಯ್ಯಲು ಎಲ್ಲರೂ ಸಹಕರಿಸಬೇಕಿದೆ ಎಂದು ಕರೆನೀಡಿದರು. ಈ ಸಂದರ್ಭದಲ್ಲಿ ಚನ್ನಬಸವ ಜೇಕಿನ್, ಕನಕಗಿರಿ ಮುಖ್ಯಸ್ಥರಾದ ರಮೇಶ ಕೋಟಿ, ಕೊಪ್ಪಳ ಮುಖ್ಯಸ್ಥರಾದ ನಾಸೀರ್ ಮುಲ್ಲಾ, ನ್ಯಾಯವಾದಿಗಳಾದ ಪ್ರಕಾಶ ಬಿ., ಪರಶುರಾಮ ಒಡೆಯರ್, ರೈತ ಮುಖಂಡರಾದ ಹನುಮೇಶ ಮಲ್ಲಾಪುರ, ಅಭಿಯಂತರರಾದ ಮಣಿಕಂಠ ಸೇರಿದಂತೆ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರಾದ ಬಸವರಾಜ ನಾಯಕ, ದೊಡ್ಡನಗೌಡ ದಾಸನಾಳ, ಆಮ್ ಆದ್ಮಿ ಪಕ್ಷದ ಪದಾಧಿಕಾರಿಗಳಾದ ಶಿವರಾಜ ಪೂಜಾರಿ, ರೇಣುಕಾ ಬಸವರಾಜ, ಅಮ್ಜದ್ ಖಾನ್, ದೊಡ್ಡಬಸಪ್ಪ, ಜಿಲಾನಿಪಾಷಾ, ಅಯ್ಯಪ್ಪ ದರ್ಶನ್, ನೀಲಮ್ಮ, ಅಯ್ಯಮ್ಮ, ವಿರುಪಣ್ಣ, ಜ್ಯೋತಿ ಸಜ್ಜಿಹೊಲ, ಬೇಬಿ ಶ್ವೇತಾ, ಭೋಗೇಶ, ಚಂದ್ರು ನಿಸರ್ಗ, ಮಲ್ಲಿಕಾರ್ಜುನ ಹೂಗಾರ, ರವಿಚಂದ್ರ, ಚಂದ್ರಕಾಂತ್ ಶ್ರೀರಾಮನಗರ, ಮಾಸ್ಟರ್ ಸಿದ್ದಾಂತ್, ಮಾಸ್ಟರ್ ನುಮನ್, ಶೈಲಾಬಾನು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು…..

  ವರದಿ – ಸೋಮನಾಥ ಹೆಚ್ ಎಮ್

Leave a Reply

Your email address will not be published. Required fields are marked *