ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಸತತವಾಗಿ  ಇಂದಿಗೆ ನೂರು ದಿನಗಳ ಕಾಲ ಹಸಿದ ಜೀವಗಳಿಗೆ ಅನ್ನ ನಿಡುತ್ತಾ ಬಂದಿರುವ ಸಮಾಜ ಸೇವಕ  ಎಮ್ ಡಿ ರಫೀಕ್…

Spread the love

ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದಲ್ಲಿ ಸತತವಾಗಿ  ಇಂದಿಗೆ ನೂರು ದಿನಗಳ ಕಾಲ ಹಸಿದ ಜೀವಗಳಿಗೆ ಅನ್ನ ನಿಡುತ್ತಾ ಬಂದಿರುವ ಸಮಾಜ ಸೇವಕ  ಎಮ್ ಡಿ ರಫೀಕ್

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರ ಪಟ್ಟಣದವರಾದ ಎಮ್ ಡಿ ರಫೀಕ್ ಅವರು ಮಾನಸಿಕ ಅಸ್ತವ್ಯಸ್ತರಿಗೆ, ವಯೋವೃದ್ದ ನಿರ್ಗತಿಕರ ಹಸಿವು ನೀಗಿಸುವ  ವಯೋವೃದ್ಧರ ಪಾಲಿಗೆ ಅನ್ನದಾತ  ಈ ಸಮಾಜ ಸೇವಕ. ಹಸಿದವರಿಗೆ ಅನ್ನ ನೀಡಿದ್ರೆ, ದೊಡ್ಡ ಪುಣ್ಯದ ಕೆಲಸ  ಹೀಗಂತ ಹಿರಿಯರು ಹೇಳಿದ್ದಾರೆ. ಈ ಮಾತು ನಿಜಕ್ಕೂ ಅರ್ಥಪೂರ್ಣವಾಗಿದೆ. ಹಸಿದವನ ಹೊಟ್ಟೆ ತಣಿಸಿದ್ರೆ ಅದು ಪುಣ್ಯದ ಕೆಲಸ. ಆದ್ರೆ ಈ ಕೆಲಸವನ್ನು ಕೆಲವು ದಿನಗಳಿಂದ ಎಡೆಬಿಡದೆ ಮಾಡಿಕೊಂಡು ಬರುತ್ತಿರುವುದು ಸಮಾಜಮುಖಿ ಕೆಲಸವಾಗಿದೆ. ಯಾವುದೇ ರಿತಿಯಿಂದ ದಾನ ಧರ್ಮ ಮಾಡಬೇಕಾದರೆ  ಒಳ್ಳೆಯ ಮನಸ್ಸು ಗುಣ  ಇರಬೇಕು. ಎಲ್ಲ ರೀತಿಯಿಂದ ಇದ್ದು ದಾನ ಧರ್ಮ ಮಾಡದಂತಹ ಇಂತಹ ಸಂಧರ್ಭದಲ್ಲಿ ಯಾವುದು ಆಸರೆಯಿಲ್ಲದೆ ಸ್ವಂತ ದುಡಿಮೆಯಿಂದ ಹಸಿದವರಿಗೆ ಅನ್ನ ನೀಡುತ್ತಿರುವ ಇಂತಹ ಸಮಾಜ ಸೇವಕರ  ಪುಣ್ಯದ ಕೆಲಸವಾಗಿದೆ. ತಾವರಗೇರ ಪಟ್ಟಣದ ಕೆಲವು ಏರಿಯಾದ ಲಾಕ್ಡೌನ್ ಸಂದರ್ಭದಲ್ಲಿ ದಿನದ ಎರಡು ಹೊತ್ತು ಮದ್ಯಾಹ್ನ ಸುಮಾರು 20 ರಿಂದ 25 ಜನ ರಾತ್ರಿ 10 ರಿಂದ 15 ಜನಕ್ಕೂ ಅಧಿಕ ಹಿರಿಯ ಜೀವಗಳಿಗೆ ಸತತವಾಗಿ ಅನ್ನ ನೀಡಿದ್ದಾರೆ. ಈ ಬಾರಿ ಲಾಕಡೌನ 28/4/2021  ರಿಂದ ಹಿಡಿದು ಇಲ್ಲಿಯ ವರಗೆ ದಿನಸಿ ಕೀಟ್ ವಿತರಿಸಿದರು ಅಡುಗೆ ಮಾಡಿಕೊಳ್ಳಲು ಅಶಕ್ತರಾಗಿದ್ದ ವೃದ್ಧರಿಗೆ ನಿರ್ಗತಿಕರಿಗೆ  ಊಟ ನೀಡುವ ಕೆಲಸ ಶುರುಮಾಡಿ ಇಂದಿಗೂ ಕೂಡಾ ಅದೆ ಸೇವೆಯಲ್ಲಿ ತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಸದ ಕಾಲ ಇದೆ ತರ ಸೇವೆ ಮಾಡಬೇಕು ಎನ್ನುವ ಛಲ ಹೊತ್ತಿದ್ದಾರೆ. ನಮ್ಮ ಪತ್ರಿಕೆಯ ಜೋತೆ ಮಾತನಾಡಿದ ಎಮ್.ಡಿ ರಫೀಕ್ ಇಂತಹ ಕೆಲಸ ಮಾಡುವುದರಿಂದ  ಸಾಕಷ್ಟು ನನಗೆ ತೃಪ್ತಿ ನೀಡಿದೆ. ಅಷ್ಟೇ ಅಲ್ಲ ಮತ್ತಷ್ಟು ಜನರ ಹೊಟ್ಟೆ ತುಂಬಿಸಲು ಸ್ಫೂರ್ತಿ ನೀಡಿದೆ ಹಾಗಾಗಿ ಇಂತಹ ಕಾರ್ಯ ಕೈಗೊಂಡಿದ್ದೆನೆ. ಸ್ವತಃ ಅವರ ತಾಯಿ ಮತ್ತು ಪತ್ನಿ ಅಡುಗೆಯ  ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ . ಆದ್ರೆ ಈಗ 10-12  ಕ್ಕೂ ಅಧಿಕ ಜನರಿಗೆ  ವಿಶೇಷ ಅಡುಗೆಯೂ ತಯಾರಾಗುತ್ತದೆ. ಪ್ರತಿದಿನವೂ ತಮ್ಮ ಮನೆಯಲ್ಲಿ ತಯಾರಾಗುವ ಆಹಾರವನ್ನು ತಾವೇ ಖುದ್ದಾಗಿ ಪರಿಶೀಲನೆ ಮಾಡಿ  ಪೂರೈಸುತ್ತಿದ್ದಾರೆ. ತಾವು ಮಾಡುತ್ತಿರುವ “ಹಸಿದವರಿಗೆ ಅನ್ನ” ಎಂಬಸಾಮಾಜಿಕ ಸೇವೆಗೆ ಹಣದ ಕೊರತೆ ಇದೆ ಆದರೂ ಎದೆಗುಂದದೆ  ಖರ್ಚಾಗುವ ಹಣವನ್ನು  ಸ್ವಂತ ಖರ್ಚಿನಲ್ಲಿ ಮಾಡುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ವೃದ್ಧಾಶ್ರಮ ಕಟ್ಟುವ ಕನಸು ಕೂಡ ಕಾಣುತ್ತಿದ್ದಾರೆ. ಇವರ ಕಂಡು ಕನಸು ಬೇಗನೆ ಇಡೆರಲಿ ಹಾಗೆ ಇವರು ಕೈಗೊಂಡಿರುವ “ಹಸಿದವರಿಗೆ ಅನ್ನ” ಎಂಬ ಈ ಸಮಾಜ ಸೇವೆ  ಎಲ್ಲರಿಗೂ ಮಾದರಿ ಅನ್ನುವುದರಲ್ಲಿ ಎರಡು ಮಾತಿಲ್ಲ.

ವರದಿ – ಅಮಾಜಪ್ಪ ಹೆಚ್.ಜುಮಾಲಾಪೂರ

Leave a Reply

Your email address will not be published. Required fields are marked *