ಶ್ರಮ ಜೀವಿಯಾದ ಪಿಎಸ್ಐ ಗೀತಾಂಜಲಿ ಶಿಂಧೆಗೆ ಮುಖ್ಯಮಂತ್ರಿ ಪದಕ :-

Spread the love

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಅಭಿವೃದ್ದಿಯತ್ತ ಸಾಗುತ್ತಿದ್ದು, ತಾವರಗೇರಾ ಪಟ್ಟಣದ ಪೊಲೀಸ್ ಠಾಣಾ ಅಧಿಕಾರಿಗಳು ಒಂದಲ್ಲಾ ಒಂದು ರೀತಿಯಲ್ಲಿ ವಿಶೇಷ ಸುದ್ದಿಯಲ್ಲಿ ಇರುತ್ತಾರೆ, ಈ ಹಿಂದೆ ಪೊಲೀಸ್ ಠಾಣೆ ಪಿ.ಎಸ್.ಐ. ಯಾಗಿ ಸಂತೋಷ್ ಎಲ್.ಟಿ.ಯವರು ತಾವರಗೇರಾದಲ್ಲಿ ನಾನಾ ರೀತಿ ಅಭಿವೃದ್ದಿ ಕಾರ್ಯಗಳು ಮಾಡುವಲ್ಲಿ ವಿಶೇಷರಾಗಿದ್ದಾರೆ. ಅದರಲ್ಲಿ ಕುಡುಕರ ಹಾವಳಿಗೆ ಬ್ರೇಕ್ ಹಾಕಿದವರು, ಮೀತಿ ಮೀರಿದ ಯುವಕರ ದಂಡುಗಳಿ ದಂಡಂ,ದಶಗುಣಂ ಆಗಿ ಪಾಠ ಕಲಿಸಿದವರು, ಅದೇ ರೀತಿ ವಿಶೇಷವಾಗಿ ಮಹಿಳೆಯಾಗಿ ಆಗಮಿಸಿದ ಪಿ.ಎಸ್.ಐ. ಗೀತಾಂಜಲಿ ಶಿಂದೆಯವರು ತಾವರಗೇರಾ ಪಟ್ಟಣ ಹಾಗೂ ತಾವರಗೇರಾ ಹೋಬಳಿ ಮಟ್ಟದಲ್ಲಿ ತಮ್ಮದೆಯಾದ ವಿಶೇಷ ಚಾತುರತೆಯಿಂದ ಕಾರ್ಯ ನಿರ್ವಹಿಸಿ ಹಿಂದು 2020ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾಗಿರುವುದ ಹೆಮ್ಮೆಯ ಸಂಗತಿ. ಮೇಲಾಧಿಕಾರಿಗಳ ಮಾರ್ಗದರ್ಶನ ಹಾಗೂ ಠಾಣಾ ಸಿಬ್ಬಂದಿ ಸಹಕಾರದೊಂದಿಗೆ 2020ನೇ ಸಾಲಿನ ಠಾಣೆಯಲ್ಲಿರುವ ಪ್ರಕರಣಗಳನ್ನು ಅತೀ ತವರಿತ ಗತಿಯಲ್ಲಿ ವಿಲೇವಾರಿ ಮಾಡಿದ್ದಕ್ಕಾಗಿ ಮತ್ತು ಪೊಲೀಸ್ ಐ.ಟಿ.ಯ ಉತ್ತಮ ಪ್ರಗತಿ ಹಾಗೂ ಕರೋನ ಸಂಧರ್ಬದಲ್ಲಿ ಉತ್ತಮ ಸೇವೆಯನ್ನು ಪರಿಗಣಿಸಿ ಮಾನ್ಯ ಮುಖ್ಯಮಂತ್ರಿ ಪ್ರಶಸ್ತಿಗೆ ಕೊಪ್ಪಳ ಜಿಲ್ಲೆಯಿಂದ ಆಯ್ಕೆಯಾಗಿದ್ದು, ಮೇಲಾಧಿಕಾರಿಗಳ ಹಾಗೂ ಠಾಣಾ ಸಿಬಂದಿ ಜೊತೆಗೆ ತಾವರಗೇರಾ ಪಟ್ಟಣದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಮನ್ಸ ಹಾಗೂ ವಾರೆಂಟ್ ಜಾರಿಗೊಳಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಕಾರ್ಯಕ್ಕೆ ಮುಖ್ಯಮಂತ್ರಿ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತಾವರಗೇರಾ ಪಟ್ಟಣದಲ್ಲಿ ವಿಶೇಷವಾಗಿ ಕಾನೂನು ಸುವ್ಯವಸ್ಥೆ ಕಾಪುಡುವ ಮೂಲಕ ಹಾಗೂ ವಿಶೇಷವಾಗಿ ಮಹಿಳೆಯರಿಗೆ ಅನ್ಯಾಯವಾಗಂದತೆ ಮಹಿಳೆಯರ ಸಭೆ ಸಮಾರಂಭಗಳಿಗೆ ಆಗಮಿಸಿ ಮಹಿಳೆಯರ ಕುಂದು ಕೊರತೆಗಳನ್ನ ಆಲಿಸುತ್ತಾರೆ. ಅತ್ಯಂತ ಕಡಿಮೆ ಶೇಕಡಾವಾರು ಪ್ರಕರಣಗಳ ತನಿಖೆಯಲ್ಲಿ ಬಾಕಿ ಇರಿಸಿಕೊಂಡು ಉತ್ತಮ ಕರ್ತವ್ಯ ನಿರ್ವಹಣೆ ಪರಿಗಣಿಸಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಪ್ರಶಸ್ತಿ ಪ್ರಧಾನ ಸಮಾರಂಭದ ದಿನಾಂಕ ನಿಗದಿಪಡಿಸಲಾಗುವುದೆಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸುವೆ. ತಮ್ಮ ಈ ಕಾರ್ಯಕ್ಕೆ ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಅಭಿನಂದನೆಗಳು ಸಲ್ಲಿಸುತ್ತ. ತಮ್ಮಲ್ಲಿ ಮತ್ತೊಂದು ಕಾರ್ಯ ಪಟ್ಟಣದಲ್ಲಿ ಸಾಗಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೆವೆ. ಅಂದರೆ ತಾವರಗೇರಾ ಪಟ್ಟಣವು ನಾನಾ ರೀತಿಯಿಂದ ಅಭಿವೃದ್ದಿ ಹೋಂದುತ್ತಿದ್ದು ಈ ಪಟ್ಟಣಕ್ಕೆ ಸಿ.ಸಿ ಕ್ಯಾಮೇರಾಗಳ ಅವಶ್ಯವಿದ್ದು ಹಾಗಾಗಿ ತಾವರಗೇರಾ ಪಟ್ಟಣದ ನಾನಾ ಕಡೆಯಲ್ಲಿ ಸದ್ಯ ಸ್ಥಗಿತವಾಗಿರುವ ಕ್ಯಾಮೇರಗಳನ್ನು ಪುನಃಹ ಚಾಲ್ತಿ ಮಾಡಿ ತಾವರಗೇರಾದಲ್ಲಿ ನಡೆಯುವ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಬೇಕೆಂದು ತಮ್ಮಲ್ಲಿ ಮನವಿ. ಸಂಪಾದಕಿಯ

4 thoughts on “ಶ್ರಮ ಜೀವಿಯಾದ ಪಿಎಸ್ಐ ಗೀತಾಂಜಲಿ ಶಿಂಧೆಗೆ ಮುಖ್ಯಮಂತ್ರಿ ಪದಕ :-

Leave a Reply

Your email address will not be published. Required fields are marked *