ರಕುಶಲಕರ್ಮಿಗಳ ಕುಶಲೋಪಚಾರ ಮಾಡಬೇಕಿದೆ-ಬಿ.ನಾಗರಾಜ-

Spread the love

ರಕುಶಲಕರ್ಮಿಗಳ ಕುಶಲೋಪಚಾರ ಮಾಡಬೇಕಿದೆಬಿ.ನಾಗರಾಜ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆ,ರೋಣಿ ಮಳೆ ಸುರಿದು ರೈತರನ್ನು ತಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಚುರುಕುಗೋಳಿಸಿದೆ.ನಾಡಿನ ರೈತರು ಹೆಮ್ಮರದಂತೆ ಅವರು ತಮ್ಮೊಂದಿಗೆ,ಇತರೆ ನೂರಾರು ವರ್ಗಗಳನ್ನು ಕಾಪಿಟ್ಟು ಸಲಹುತ್ತಾರೆ ಪೋಷಿಸುತ್ತಾರೆ, ಅಂತಹ ವರ್ಗದಲ್ಲಿ ಕುಶಲಕರ್ಮಿಗಳೂ ಸೇರಿದ್ದು ಇವರು ರೈತರ ನಾಡಿ ಮಿಡಿತವಾಗಿದ್ದಾರೆ. ಇವರಲ್ಲಿ ಬಡಿಗೇರ,ಕಮ್ಮಾರ, ಕೊರವ,ರೈತ ಕೂಲಿ ಕಾರ್ಮಿಕರು ಸೇರಿದಂತೆ ಮತ್ತಿತರರು ರೈತರ ಬದುಕಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಪ್ರತಿ ಗ್ರಾಮಗಳಲ್ಲಿ ದೊರಕುವ ಕುಶಲಕರ್ಮಿಗಳು ಸದಾ ಕೃಷಿಕರ ಮಂದಹಾಸದಲ್ಲಿಯೇ ಖುಷಿಯನ್ನ ಕಾಣುತ್ತಿರುತ್ತಾರೆ,ಇವರು ಎಂಥಹ ಸಂದರ್ಭದಲ್ಲಿಯೂ ತಮ್ಮ ಕೌಶಲ್ಯದಿಂದಲೇ ತಮ್ಮನ್ನು ಗುರುತಿಸಿಕೊಳ್ಳಲು ಇಚ್ಚಿಸುತ್ತಾರೆ. ಇವರೇ ಸಾಂಪ್ರದಾಯಿಕ ಕೃಷಿಕರ ಆರಾಧ್ಯರಾಗಿದ್ದಾರೆ, ಗ್ರಾಮೀಣ ಭಾಗದಲ್ಲಿಯೇ ಹೆಚ್ಚಾಗಿ  ಕಾಣಸಿಗುತ್ತಾರೆ. ತಮ್ಮ ಕೌಶಲ್ಯತೆಯ ಮೂಲಕವೇ ಖುಷಿಯಿಂದಲೇ ಗುರುತಿಸಿಕೊಳ್ಳುವ ಇವರು. ಸಾಂಪ್ರದಾಯಿಕ ಕೃಷಿಯ ರಾಯಭಾರಿಗಳಾಗಿದ್ದು,ಆಧುನಿಕ ಯಂತ್ರೋಪಕರಣಗಳ ಆಧಾರಿತ ಕೃಷಿಯ ಭರಾಟೆಯಲ್ಲಿ ಮರೆಯಾಗಿದ್ದಾರಷ್ಟೇ. ತಮ್ಮ ಶ್ರಮಕ್ಕೆ ಪ್ರತಿಯಾಗಿ ರೈತರು ಕೊಡುವ ಅತ್ಯಲ್ಪ ನಗದು ಅಥವಾ ಕಾಳು ಕಡಿಗೆ ತೃಪ್ತಿ ಹೊಂದಿ,ಹೃದಯ ವೈಷಲ್ಯತೆ ತೋರುವ ಇವರು ಕೃಷಿಸೇವೆಯಲ್ಲಿಯೇ ಖುಷಿಕಾಣುವ ಅಲ್ಪ ತೃಪ್ತರಾಗಿದ್ದಾರೆ. ಉಪಜೀವನಕ್ಕೆ   ಆಧಾರವಾಗಿರುವ ಈ ಕೌಶಲ್ಯಗಾರಿಕೆಗಳು ಅಳಿವಿನಂಚಿನಲ್ಲಿವೆ ಇವುಗಳನ್ನೇ ನಂಬಿದವರ ಅಳಲು ಹೇಳತೀರದಾಗಿದೆ, ಇವರನ್ನು ಇವರ ಕುಟುಂಬಗಳನ್ನು  ಸಮಾಜ ಸತ್ಕರಿಸಬೇಕಿದೆ. ಸ್ಥಳೀಯ ಆಡಳಿತಗಳು ಜನಪ್ರತಿನಧಿಗಳು ಸಂಘ ಸಂಸ್ಥೆಗಳು  ಗುರುತಿಸಿ ಸತ್ಕರಿಸಬೇಕಿದೆ.ಅವರಿಗೆ ಅಗತ್ಯ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಒದಗಿಸಿಕೊಡಬೇಕಿದೆ, ಸರ್ಕಾರ ಕುಶಲ ಕರ್ಮಿಗಳ ಯೋಗ ಕ್ಷೇಮಕ್ಕೆ ಅಗತ್ಯ ಯೋಜನೆಗಳನ್ನು ರೂಪಿಸಬೇಕಿದೆ ಎನ್ನುತ್ತಾರೆ. ಲಾಕ್ ಡೌನ್ ಪರಿಹಾರ ಒದಗಿಸಿ- ಕೃಷಿ ಪರಿಕರಗಳ ತಯಾರಿಕಾ ವರ್ಗ  ಕೌಶಲ್ಯಾಧಾರಿತವಾಗಿ ಗುರುತಿಸುತ್ತಿರುವ ಕಾರ್ಮಿಕ  ವರ್ಗವಾಗಿದ್ದು,ಯಾವುದೇ ಜಾತಿ ಕುಲಕ್ಕೆ ಸೀಮಿತವಾಗಿಲ್ಲ,ಇದು ಜಾತ್ಯಾತೀತವಾಗಿದೆ.ಗ್ರಾಮೀಣ ಭಾಗದಲ್ಲಿ ತಮ್ಮ ಕುಶಲ ಕರ್ಮದಿಂದಲೇ ಗುರುತಿಸಿಕೊಂಡಿರುವ ನಾನಾ ಜಾತಿ ಧರ್ಮದವರಿದ್ದಾರೆ. ಕುಶಲಕರ್ಮಿಗಳನ್ನು ವಿಶೇಷ ಕಾರ್ಮಿಕರೆಂದು ಗುರತಿಸ ಬೇಕು,ಲಾಕ್ ಡೌನ್ ಕಾರಣಕ್ಕೆ ಸಂಕಷ್ಟದಲ್ಲಿರುವ  ಅವರಿಗೆಂದೇ ಸರ್ಕಾರ  ವಿಷೇಶವಾಗಿ “ಪರಿಹಾರ ಪ್ಯಾಕ್ಯಾಜ್” ಜಾರಿತರಬೇಕಿದೆ. ಅಳಿವಿನಂಚಿನಲ್ಲಿರುವ ಸಾಂಪ್ರದಾಯಿಕ ಕೃಷಿ ಪದ್ದತಿಯ ಪರಿಕರಗಳ ತಯಾರಿಕ ಕುಟುಂಬಗಳ,ಯೋಗಕ್ಷೆಮವನ್ನು ಸ್ಥಳೀಯ ಆಡಳಿತಗಳು ವಿಚಾರಿಸಿ ಅಹವಾಲುಗಳಿಗೆ ಸ್ಪಂಧಿಸಬೇಕು. ಅಂದಾಗ ಮಾತ್ರ ನಾಡಿನ ಸಾಂಪ್ರದಾಯಿಕ ರಾಯಭಾರಿಗಳಾದ ಕುಶಲ ಕರ್ಮಿ ವರ್ಗಕ್ಕೆ ಜೀವಕಳೆ ಬರಲಿದೆ ಎಂದು,ವಿಶ್ವಕರ್ಮ ವಿಕಾಸ ವೇದಿಕೆಯ ಉಪಾಧ್ಯಕ್ಷ ಬಡಿಗೇರ ನಾಗರಾಜ ಆಚಾರಿ ನುಡಿದಿದ್ದಾರೆ.

ವರದಿ – ಚಲುವಾದಿ ಅಣ್ಣಪ್ಪ

Leave a Reply

Your email address will not be published. Required fields are marked *