ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್‌ ಗಾಲ್ವೋ ಅವರಿಂದ ರಾಜ್ಯದ ವೈದ್ಯರಿಗೆ ನೂತನ ಚಿಕಿತ್ಸಾ ವಿಧಾನದ ತರಬೇತಿ..

Spread the love

ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್ಗಾಲ್ವೋ ಅವರಿಂದ ರಾಜ್ಯದ ವೈದ್ಯರಿಗೆ ನೂತನ ಚಿಕಿತ್ಸಾ ವಿಧಾನದ ತರಬೇತಿ..

ತೂಕ ಇಳಿಸಲು ಶಸ್ತ್ರಚಿಕಿತ್ಸೆ ಇಲ್ಲದ ನೂತನ ಚಿಕಿತ್ಸಾ ವಿಧಾನದ ಬಗ್ಗೆ ತರಬೇತಿ ಟ್ರಸ್ಟ್‌ವೆಲ್‌ ಆಸ್ಪತ್ರೆಯಲ್ಲಿ ವಿನೂತನ ಚಿಕಿತ್ಸಾ ವಿಧಾನದ ನೇರ ಪ್ರದರ್ಶನ ಹಾಗೂ ತರಬೇತಿ•ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್‌ ಗಾಲ್ವೋ ಹಾಗೂ ಡಾ ಮೋಹಿತ್‌ ಭಂಡಾರಿ ಅವರಿಂದ ತರಬೇತಿ ಬೆಂಗಳೂರು ಆಗಸ್ಟ್‌ 1, 2021: ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮನೋಯಿಲ್‌ ಗಾಲ್ವೋ ಅವರು ಶಸ್ತ್ರಚಿಕಿತ್ಸೆ ಇಲ್ಲದೆ ತೂಕ ಇಳಿಸುವ ನೂತನ ಚಿಕಿತ್ಸಾ ವಿಧಾನದ ಬಗ್ಗೆ ರಾಜ್ಯದ ಜಠರಶಾಸ್ತ್ರಜ್ಞರುಗಳಿಗೆ ತರಬೇತಿಯನ್ನು ನೀಡಿದರು.  27 ರಿಂದ 35 ರ ವರೆಗಿನ ಬಾಡಿ ಮಾಸ್‌ ಇಂಡೆಕ್ಸ್‌ ಹೊಂದಿರುವ ಜನರು ಸುಲಭವಾಗಿ ತಮ್ಮ ದೇಹದ ತೂಕವನ್ನು ನಿಯಂತ್ರಣಕ್ಕೆ ತಂದುಕೊಳ್ಳಲು ಈ ಚಿಕಿತ್ಸಾ ವಿಧಾನ ಸಹಕಾರಿಯಾಗಿದೆ. ಶಸ್ತ್ರಚಿಕಿತ್ಸೆ ಇಲ್ಲದ ವಿಶೇಷ ಎಂಡೋಸ್ಕೋಪಿಕ್‌ ಯಂತ್ರವನ್ನು ಬಳಸುವ ಮೂಲಕ ಹೊಟ್ಟೆಯ (ಜಠರದ) ಗಾತ್ರವನ್ನು ಕಡಿಮೆ ಮಾಡಲಾಗುತ್ತದೆ. ಇದರಿಂದ ತೂಕ ಇಳಿಕೆಯಾಗುತ್ತದೆ. ಟ್ರಸ್ಟ್‌ವೆಲ್‌ ಆಸ್ಪತ್ರೆಯ ಗ್ಯಾಸ್ಟ್ರೋ ಸೈನ್ಸ್‌ಸ್‌ ವಿಭಾಗದ ಮುಖ್ಯಸ್ಥರಾದ ಡಾ ಮನೀಶ್‌ ಜೋಶಿ ಅವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಶ್ವದಾದ್ಯಂತ ಇಂತಹ 2000 ಕ್ಕೂ ಹೆಚ್ಚು ಪ್ರಕ್ರಿಯೆಗಳನ್ನು ನಡೆಸಲಾಗಿದೆ. ಇದರಿಂದ ರೋಗಿಗಳಿಗೆ ಬಹಳಷ್ಟು ಅನುಕೂಲವಿದೆ. ಇದೊಂದು ಶಸ್ತ್ರಚಿಕಿತ್ಸೆ ಹೊರತಾದ ಚಿಕಿತ್ಸಾ ವಿಧಾನವಾಗಿದ್ದು, ಡೇ ಕೇರ್‌ ವಿಧಾನವಾಗಿದೆ. ಬೊಜ್ಜಿನಿಂದ ಬಳಲುತ್ತಿರುವ ಎಲ್ಲರಿಗೂ ಒಳ್ಳೆಯ ಚಿಕಿತ್ಸಾ ವಿಧಾನವಾಗಿದೆ. ಈ ಚಿಕಿತ್ಸಾ ವಿಧಾನದ ಸಂಶೋಧಕ ವಿಶ್ವವಿಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್‌ ಗಾಲ್ವೋ ಅವರಿಂದ ನಮ್ಮ ಆಸ್ಪತ್ರೆಯ ಗ್ಯಾಸ್ಟ್ರೋಎಂಟ್ರೋಲೈಜಿಸ್ಟ್‌ಗಳು ತರಬೇತಿಯನ್ನು ಪಡೆದುಕೊಂಡಿರುವುದು ಬಹಳ ಸಂತಸದ ವಿಷಯವಾಗಿದೆ. ಈ ಚಿಕಿತ್ಸಾ ವಿಧಾನ ನಮ್ಮ ಟ್ರಸ್ಟ್‌ವೆಲ್‌ ಆಸ್ಪತ್ರೆ ಯಲ್ಲೂ ಲಭ್ಯವಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ ಎಂದು ಟ್ರಸ್ಟ್‌ವೆಲ್‌ ಹಾಸ್ಪಿಟಲ್‌ ನ ಸಿಎಂಡಿ ಡಾ. ಹೆಚ್‌ ವಿ ಮಧುಸೂಧನ್‌ ಹೇಳಿದರು.  ಪ್ರಖ್ಯಾತ ಜೀರ್ಣಾಂಗ ರೋಗ ತಜ್ಞ ಡಾ ಮೊನೊಯೀಲ್‌ ಗಾಲ್ವೋ ಹಾಗೂ ಇಂದೋರ್‌ ನ ಡಾ ಮೋಹಿತ್‌ ಭಂಡಾರಿ ಅವರು ರಾಜ್ಯದ 15 ಜಠರಶಾಸ್ತ್ರಜ್ಞ ವೈದ್ಯರುಗಳಿಗೆ ತರಬೇತಿಯನ್ನು ನೀಡಿದರು.  ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಅಶೋಕ್‌ ಆರ್‌, ಮಾರ್ಕೇಟಿಂಗ್‌ ವಿಭಾಗದ ಮುಖ್ಯಸ್ಥರು ಟ್ರಸ್ಟ್‌ ವೆಲ್‌ ಆಸ್ಪತ್ರೆ, ಮೊ: 91 99004 42219..

ವರದಿ – ಹರೀಶ ಶೇಟ್ಟಿ ಬೆಂಗಳೂರು

Leave a Reply

Your email address will not be published. Required fields are marked *