ಸಾಮಾನ್ಯ ಕರ್ತರಾದ ಕುಮಾರ ಪಾಟೀಲ ಅವರ ಮನೆಗೆ ಕಾಗವಾಡ ಮತಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ರಾಜು (ಅಣ್ಣಾ)ಕಾಗೆ ಅವರು ಭೇಟಿ ನೀಡಿದರು.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದ ಸಾಮಾನ್ಯ ಕರ್ತರಾದ ಕುಮಾರ ಪಾಟೀಲ ಅವರ ಮನೆಗೆ ಕಾಗವಾಡ ಮತಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ಶ್ರೀ ರಾಜು (ಅಣ್ಣಾ)ಕಾಗೆ ಅವರು ಭೇಟಿ ನೀಡಿದರು. ಕುಮಾರ ಪಾಟೀಲ ದಂಪತಿಗಳಿಂದ ಅಭಿಮಾನದ ಸನ್ಮಾನ ಸ್ವೀಕರಿಸಿ ನಾನು ಸಾಮಾನ್ಯ ಕಾರ್ಯಕರ್ತರಿಂದ ನಾಲ್ಕು ಬಾರಿ ಶಾಸಕನಾಗಿ ಜನರ ಸೇವೆ ಮಾಡಲಿಕ್ಕೆ ಅವಕಾಶ ಸಿಕ್ಕಿದೆ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ನನ್ನ ದೇವರು ನನ್ನನ್ನು ಒಬ್ಬ ಸಾಮಾನ್ಯ ಕಾರ್ಯಕರ್ತ ಬರಮಾಡಿ ಕೊಂಡು ಅಭಿನಂದಿಸಿ ನೂರಾರು ಜನರಿಗೆ ಭೋಜನ ಕೂಟ ಏರ್ಪಡಿಸಿದ್ದು ಶ್ಲಾಘನೀಯವಾದದ್ದು ಈ ಸಂದರ್ಭದಲ್ಲಿ ಕೃಷ್ಣಾ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾದ ಶ್ರೀ ಗೂಳಪ್ಪ ಜತ್ತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ದಳವಾಯಿ,ಗಜಾನನ ಎರಂಡೋಲೆ,ಅನಂತಪುರ ಬ್ಲಾಕ ಅಧ್ಯಕ್ಷ ಓಂಪ್ರಕಾಶ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ನಾಯ್ಕುಬಾ ಸಿಂದೆ , ವಿಷ್ಣು ಕಾಂಬಳೆ, ಅಶೋಕ ಪಾಟೀಲ, ಯಶವಂತ ಪಾಟೀಲ, ರಾವಸಾಬ ಐಹೋಳೆ, ಸತ್ಯಪ್ಪ ಕೆಂಪವಾಡೆ, ಲಕ್ಷ್ಮಣ ಪಾಟೀಲ, ಬೀಮಗೊಂಡ ಪಾಟೀಲ, ಶ್ರೀಕಾಂತ ವಿವೇಕ,ವಿಠ್ಠಲ ಗಾಡಿವಡ್ಡರ, ಸಿದ್ದು ಪಾಟೀಲ, ಸುರೇಶ ನಾಯಕ, ಸಂತೋಷ ಕಲ್ಲೋತ್ತಿ ,ಅಶೋಕ ಗಾಡಿವಡ್ಡರ,ಪಂಡರೀನಾಥ ಭಂಡಾರೆ ,ಸುರೇಶ ನಿವಲಗಿ ,ಅಸ್ಲಮ್ ಮುಲ್ಲಾ ,ಸಿದರಾಯ ತೋಡಕರ ಹಾಗೂ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.
ವರದಿ – ಮಹೇಶ ಶರ್ಮಾ