ಪಟ್ಟಣ ಪಂ.ಯ ಸದಸ್ಯರ ಹಾಗೂ ಸ್ಥಳಿಯ ಅಧಿಕಾರಿಗಳ ವಿರುದ್ಧ ಮಾನ್ಯ ತಹಶೀಲ್ದಾರ ಎಂ. ಸಿದ್ದೇಶರವರಿಗೆ ತಾವರಗೇರಾ ಪಟ್ಟಣದ ಹಲವು ಸಂಘನೆಗಳಿಂದ ದೂರು……

Spread the love

ಪಟ್ಟಣ ಪಂ.ಯ ಸದಸ್ಯರ ಹಾಗೂ ಸ್ಥಳಿಯ ಅಧಿಕಾರಿಗಳ ವಿರುದ್ಧ ಮಾನ್ಯ ತಹಶೀಲ್ದಾರ ಎಂ. ಸಿದ್ದೇಶರವರಿಗೆ ತಾವರಗೇರಾ ಪಟ್ಟಣದ ಹಲವು ಸಂಘನೆಗಳಿಂದ ದೂರು……

 

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣಕ್ಕೆ ಹೊಂದಿಕೊಂಡಿರುವ (ಗೌಂವಠಾಣ) ಸರಕಾರಿ ಜಮೀನು ಸಾಕಷ್ಟು ಉಳಿದಿದ್ದು, ಅಂದರೆ ತಾವರಗೇರಾ ಪಟ್ಟಣಕ್ಕೆ ಹತ್ತಿರುವ ಸರ್ವೆ ನಂಬರ್ 54 * ರಲ್ಲಿ ಬರುವ 18 ಎಕರೆ 36 ಗುಂಟೆ ಜಮೀನು ಇದ್ದು, ಜೊತೆಗೆ  ಈ ಜಮೀನಿಗೆ ಹತ್ತಿಕೊಂಡಿರುವ ಗೌಂವಠಾಣ ಜಮೀನು ಇದ್ದು, ಈ ಎರಡು ಸರಕಾರಿ ಜಮೀನಿನಲ್ಲಿ ರಾಜಕೀಯ ಪ್ರಭಾರಿಗಳು, ಊರಿನ ಗಣ್ಯರು, ಅತೀ ಕ್ರಮಿಸಿದ್ದು, ಖಂಡನೀಯವಾಗಿರುತ್ತದೆ ಜೊತೆಗೆ ಇದೇ ವಿಷಯಕ್ಕೆ ಸಂಬಂದಪಟ್ಟಂತೆ ಹಲವು ಭಾರಿ ಸ್ಥಳಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು ಕ್ಯಾರೇ ಎನ್ನದೇ ಬಲಿಷ್ಠ ಸದಸ್ಯರ ಜೊತೆ ಶಾಮೀಲು ಆಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ವೆಲ್ಫರ್ ಪಾರ್ಟಿ ಆಪ್ ಇಂಡಿಯಾ ತಾವರಗೇರಾ ಹೋಬಳಿ ಘಟಕ ಅಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ, ಹಾಗೂ ಕ.ನ.ಸೇ ತಾಲೂಕಾ ಹೋಬಳಿ ಘಟಕದ ಅಧ್ಯಕ್ಷರಾದ ಶ್ಯಾಮೂರ್ತಿ ಅಂಚಿ, ಶ್ಯಾಮರಾಜ್ ದಾಸನೂರ, ಮಂಜುನಾಥ ಎಸ್.ಕೆ. ಆರ್.ಬಿ.ಅಲಿಆದಿಲ್, ಅಂಬಣ್ಣ ಕಲಾಲ್, ರಮೇಶ ಗದ್ದಿ, ಲಕ್ಷ್ಮಣ್ಣ ದಾಸನೂರು ಇತರರು ಭಾಗಿಯಾಗಿದ್ದರು. ಹಕ್ಕೋತ್ತಾಯಗಳು :- 1) ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂದಪಟ್ಟಂತೆ ಮುಂದಿನ ದಿನಮಾನಗಳಲ್ಲಿ  ಅಧಿಕಾರಿಗಳು ಸ್ಪಂಧಿಸದೆ ಹೋದರೆ ಸರಕಾರಿ (ಗೌಂವಠಾಣ) ಜಮೀನು ಉಳಿವಿಗಾಗಿ ಹೋರಾಟ ಹಮ್ಮಿಕೊಳ್ಳಲಾಗುವುದು. 2) ಅಧಿಕಾರದ ದುರುಫಯೋಗದಿಂದ ಬೇನಾಮಿ ಆಸ್ಥಿ ಮಾಡುವಲ್ಲಿ ಮುಂದಾದ ಸದಸ್ಯರ ವಿರುದ್ದ ದಂಗೆ ಹೇಳುವುದು, 3) ಸದಸ್ಯರಿಗೆ ಸಾತ್ ನೀಡುವ ಪ.ಪಂ ಅಧಿಕಾರಿಗಳು ಜೊತೆಗೆ ನಾಡ ಕಚೇರಿಯ ಸಂಬಂಧಪಟ್ಟ ಅಧೀಕಾರಿಗಳನ್ನು ಕೂಡಲೇ  ಅಮಾನತ್ತು ಗೋಳಿಸಬೇಕು, 4) ಸರಕಾರಿಯ ಜಮೀನಿನಲ್ಲಿ  ಹಾಕಿರುವ ಶೇಡ್ಡುಗಳನ್ನೂ ಈ ಕೂಡಲೇ ತೇರವುಗೊಳಿಬೇಕು, ಈ ಎಲ್ಲಾ ಬೇಡಿಕೆಗಳನ್ನು ಆದಷ್ಟು ಬೇಗನೇ ಇಡೇರಿಸದಿದ್ದರೆ ಸಂಬಂದಪಟ್ಟ ಇಲಾಖೆಯ ಮುಂದೆ ಧರಣಿ ಹಮ್ಮಿಕೊಳ್ಳಲಾಗುವುದೇಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗ ಹಾಗೂ ವೆಬ್ ಬಳಗದವತಿಯಿಂದ  ಮಾನ್ಯ ತಹಶೀಲ್ದಾರಾದ ಎಂ.ಸಿದ್ದೇಶರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *