ಮಾಹಿತಿ ಹಕ್ಕು ಜನಜಾಗೃತಿ ವೇದಿಕೆ ವತಿಯಿಂದ ಸಾಧಕರಿಗೆ ಸನ್ಮಾನ

Spread the love

ಮಾಹಿತಿ ಹಕ್ಕು ಜನಜಾಗೃತಿ ವೇದಿಕೆ ವತಿಯಿಂದ ಸಾಧಕರಿಗೆ ಸನ್ಮಾನ ಆರಕ್ಷಕ ರತ್ನ ಪ್ರಶಸ್ತಿ ನೀಡುವ ಬಗ್ಗೆ ಇಂದು ಕುಶಾಲನಗರದ ತಾಲ್ಲೂಕು ಮಟ್ಟದ ಕಾರ್ಯಕ್ರಮವೊಂದನ್ನು   ಕೆ ಟಿ ಶ್ರೀನಿವಾಸ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು ಡಿಪಿಎಸ್ಪಿ ಶೈಲೇಂದ್ರ ಕುಮಾರ್ ರಾಷ್ಟ್ರಪತಿ ಪದಕ ಪ್ರಶಸ್ತಿ ವಿಜೇತರು ಮಾತನಾಡಿ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ದಂಡುಪಾಳ್ಯ ಹಂತಕರನ್ನು ಹಿಡಿಯಲಾಯಿತು  ಹಲವು ಭಾಗದಲ್ಲಿ ಬಡವರ ಪರವಾಗಿ ನೊಂದವರ ಪರವಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರಿಂದ ನನ್ನನ್ನು ಗುರುತಿಸಲಾಗಿದೆ  ನನ್ನನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ ನಿಮಗೆ ಆಭಾರಿ ಎಂದು ಡಿಎಸ್ಪಿ ಶೈಲೇಂದ್ರ ಕುಮಾರ್ ಅವರು ಹೇಳಿದರು   ಸರ್ಕಲ್ ಇನ್ಸ್ಪೆಕ್ಟರ್ ಮುಖ್ಯಮಂತ್ರಿ ಪದಕ ವಿಜೇತರು ಮಹೇಶ್ ಅವರು ಮಾತನಾಡಿ ನಾನು ಹಲವು ಜಿಲ್ಲೆಗಳಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಮಹಾಮಾರಿ ಕೊರೊನಾ ಸಂದರ್ಭದಲ್ಲಿ ಹಗಲು-ರಾತ್ರಿಯೆನ್ನದೆ ನಾನು ಮತ್ತು ನನ್ನ ಪೊಲೀಸ್ ಇಲಾಖೆ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ನ್ಯಾಯಕ್ಕಾಗಿ ಮನನೊಂದು ನಮ್ಮ ಹತ್ತಿರ ಬರುವ ಬಡವರನ್ನು  ಕೂರಿಸಿ ತಾಳ್ಮೆಯಿಂದ ಅವರ ಕಷ್ಟಗಳನ್ನು ಕೇಳಿ ಅವರ ಪರವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇನೆ ನಮ್ಮನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವ ನಿಮಗೆ ನಾನು ಅಭಾರಿ ಎಂದು ಮಹೇಶ್ ಹೇಳಿದರು ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಗಣೇಶ್  ಮಾತನಾಡಿ ಕುಶಾಲನಗರದ ಪೊಲೀಸ್ ಠಾಣೆಗೆ ಹೊಸದಾಗಿ ಕರ್ತವ್ಯಕ್ಕೆ ಬಂದಿದ್ದೇನೆ ಉತ್ತಮವಾದ ಅಧಿಕಾರಿಗಳೊಂದಿಗೆ ಕರ್ತವ್ಯ ನಿರ್ವಹಿಸಲು ನನಗೆ ಹೆಮ್ಮೆಯಾಗುತ್ತಿದೆ ನನ್ನನ್ನು ಕೂಡ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನನಗೆ ತುಂಬಾ ಸಂತೋಷವಾಗಿದೆ ಮುಂದಿನದಿನಗಳಲ್ಲಿ ಎಲ್ಲರೊಂದಿಗೂ ಉತ್ತಮವಾದ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಮೂಲಕ ನಮ್ಮ ಪೊಲೀಸ್ ಇಲಾಖೆಗೆ ಗೌರವವನ್ನು ತರುವ ಮೂಲಕ ಜನಪರವಾಗಿ ನೊಂದವರ ಪರವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು ಕೊಡಗಿನ ಸಾಮಾಜಿಕ ಹೋರಾಟಗಾರ ಬಡವರ ಬಂಧು ಸ್ನೇಹಜೀವಿ ಪ್ರಾಮಾಣಿಕ ಹೋರಾಟಗಾರ  ಕೆ ಬಿ ರಾಜು ಜಿಲ್ಲಾ ಅಧ್ಯಕ್ಷರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಮಾತನಾಡಿ ಬಹಳಷ್ಟು ವರ್ಷಗಳಿಂದ ಬಡವರ ಪರವಾಗಿ ನೊಂದವರ ಪರವಾಗಿ ನಮ್ಮ ಜಾತಿ ಜನರ ಒಳಿತಿಗಾಗಿ ಬಹಳಷ್ಟು ಹೋರಾಟಗಳನ್ನು ಮಾಡಿದ್ದೇನೆ ಎಲ್ಲ ವರ್ಗದ ಜನರಿಗೂ ಪ್ರೀತಿಯಿಂದ ಬೇರೆಯವ ಮೂಲಕ ಕೊಡಗು ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳನ್ನು ಸರಿಪಡಿಸುವ ಮೂಲಕ ಸಮಾಜದ ಒಳಿತಿಗಾಗಿ35 ವರ್ಷಗಳಿಂದ ನನ್ನ ಜೀವನವನ್ನು ಹೋರಾಟದಲ್ಲಿ ಕಳೆದಿದ್ದೇನೆ ಇದಕ್ಕೆಲ್ಲ ಕಾರಣಕರ್ತರು ನಮ್ಮ ಸಂಘಟನೆಯ ಮುಖಂಡರಾದ ಡಾಕ್ಟರ್ ಆರ್ ಮೋಹನ್ ರಾಜ್ ರಾಜ್ಯ ಅಧ್ಯಕ್ಷರು ರಾಜ್ಯ ಉಪಾಧ್ಯಕ್ಷರು ರಾಜು ಎಂ ತಳವಾರ ಪರಶುರಾಮ್ ನೀನ್ ನಾಯಕ್ ಡಾಕ್ಟರ್ ಓಬಳೇಶ್ ನಾರಾಯಣ್ ರಾಜ್ಯ ಹಲವಾರು ಮುಖಂಡರು ನನಗೆ ಸ್ಥಾನಮಾನ ನೀಡಿದ್ದರಿಂದ ನಾನೊಬ್ಬ ಉತ್ತಮ ಹೋರಾಟಗಾರನಾಗಿ ಗುರುತಿಸಿಕೊಳ್ಳಲು ಸಾಧ್ಯವಾಯಿತು ನನ್ನನ್ನು ಆರಕ್ಷಕ ರತ್ನ ಪ್ರಶಸ್ತಿಗೆ  ಆಯ್ಕೆ ಮಾಡಿದ ಕೇಟಿ ಶಿನಿವಾಸ್ ಅಧ್ಯಕ್ಷರು ಮತ್ತು ಭಾಸ್ಕರ್ ರಾಜ್ಯ ಅಧ್ಯಕ್ಷರು ಮತ್ತು ನಮ್ಮ ಸಂಘದ ರಾಜ್ಯ ಅಧ್ಯಕ್ಷರು ಎಲ್ಲ ಮುಖಂಡರಿಗೂ ಪ್ರಶಸ್ತಿ ಸಲ್ಲಬೇಕೆಂದು ಕೆ ಬಿ ರಾಜು ಹೇಳಿದರು ಎಚ್ಎಂ ರಘು ಪ್ರೆಸ್ ಕ್ಲಬ್ ಅಧ್ಯಕ್ಷರು ಮತ್ತು ಪತ್ರಕರ್ತರ ಜಿಲ್ಲಾ ಮಾಧ್ಯಮ ಘಟಕ ರಾಜ್ಯ ಅಧ್ಯಕ್ಷರು ಮಾತನಾಡಿಇದೊಂದು ಉತ್ತಮವಾದ ಕಾರ್ಯಕ್ರಮ ಇಂತ ಕಾರ್ಯಕ್ರಮಗಳು ಮತ್ತೆ ಮತ್ತೆ ಮಾಡಬೇಕು ಹೋರಾಟಗಾರರನ್ನು ನಮ್ಮ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡಿದರೆ ಸನ್ಮಾನವನ್ನು ಪಡೆದ ಫಲಾನುಭವಿಗಳು ಇನ್ನು ಮುಂದಕ್ಕೆ ಉತ್ತಮವಾಗಿ ಜನಪರವಾಗಿ ಕೆಲಸವನ್ನು ಮಾಡುತ್ತಾರೆ ಕೆ ಬಿ ರಾಜು ರವರು ಬಹಳಷ್ಟು ವರ್ಷಗಳಿಂದ ಪ್ರಮಾಣಿಕವಾಗಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದಾರೆ ಇಂಥವರನ್ನು ಹಲವು ಸಂಘ ಸಂಸ್ಥೆಗಳು ಗುರುತಿಸಿ ಸನ್ಮಾನಿಸಬೇಕು ಸಮಾಜದ ಏಳಿಗೆಗಾಗಿ ತನ್ನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬಡವರ ಪರವಾಗಿ ಹೋರಾಟ ಮಾಡಲು ಕೆಲವರು ಮಾತ್ರ ನಿಲ್ಲುತ್ತಾರೆ ಕೆಲವು ಸಂಘಟನೆಗಳು ಸಮಾಜದ ಜನರ ಪರವಾಗಿ ಕೆಲಸ ಮಾಡಿದೆ ತನ್ನ ಹೊಟ್ಟೆಪಾಡಿಗಾಗಿ ಕೆಲಸವನ್ನು ಮಾಡುತ್ತಾ ತನ್ನ ಸಮುದಾಯದ ಜನರ ವಿರುದ್ಧ  ನಿಲ್ಲುತ್ತಾರೆ ಏನೇ ಆಗಲಿ ಈ ಕಾರ್ಯಕ್ರಮದಲ್ಲಿ ನನ್ನನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿದಕ್ಕೆ ನಿಮ್ಮೆಲ್ಲರಿಗೂ ಹೃದಯಪೂರ್ವಕವಾಗಿ ನಮಸ್ಕರಿಸುತ್ತೇನೆ ಕೆ ಆರ್ ಜಗದೀಶ್ ವಸಂತ ಪ್ರಕಾಶ್ ಶಿವು ದಾಮೋದರ್ ಎಲ್ಲರಿಗೂ ಸಾಲು ಓದಿಸಿ ಹೂವಿನ ಹಾರ ಹಾಕಿ ಆರಕ್ಷಕ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲಾ ಗಣ್ಯರನ್ನು ಕೆಟಿ ಶ್ರೀನಿವಾಸ್ ಮಾಹಿತಿ ಹಕ್ಕು ಜನಜಾಗೃತಿ ವೇದಿಕೆ ರಾಜ್ಯ ಸಂಘಟನಾ ಸಂಚಾಲಕ ಮಾಧ್ಯಮ ಘಟಕದ ಜಿಲ್ಲಾಧ್ಯಕ್ಷರು ಅತಿಥಿಗಳನ್ನು ವೇದಿಕೆಗೆ  ಸ್ವಾಗತಿಸಿದರು ರೂಪ ಪ್ರಾರ್ಥನೆಯನ್ನು ಮಾಡಿದರು  ವಂದನಾರ್ಪಣೆಯನ್ನು ನದೀನ್ ಭಾಷಾ ಮಾಡಿದರು  ಆರಕ್ಷಕ ಪತ್ರಿಕೆಯ ವರದಿಗಾರರು.  ಕೆ ಟಿ ಶ್ರೀನಿವಾಸ್

Leave a Reply

Your email address will not be published. Required fields are marked *