ಹೋರಾಟಗಾರರ ಕಿಚ್ಚಿನ ನಮ್ಮಲ್ಲರ ಹೃದಯ ಭಾಗ ಇನ್ನಿಲ್ಲ…..

Spread the love

ಹೋರಾಟಗಾರರ ಕಿಚ್ಚಿನ ನಮ್ಮಲ್ಲರ ಹೃದಯ ಭಾಗ ಇನ್ನಿಲ್ಲ…..

ಹೋರಾಟದ ಚಿಲುಮೆ..ಕೊಪ್ಫಳ ಜಿಲ್ಲೆಯ ಹೋರಾಟದ ಸ್ಪೂರ್ತಿ… ಹಿರಿಯ ಚೇತನ ವಿಠ್ಠಪ್ಪ ಗೋರಂಟ್ಲಿಯವರ ನಿಧನ ನಮ್ಮೆಲ್ಲರಿಗೂ ಅತ್ಯಂತ ‌ನಷ್ಟವೇ ಆಗಿದೆ. ಜಿಲ್ಲೆಯ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ನಡೆದ ಕೊಪ್ಳಳ ಚಲೋ ನಡೆದ ಕಾರ್ಯಕ್ರಮದಲ್ಲಿ ಮೊದಗಲಿಗರಾಗಿದ್ದರು.‌ ಪ್ರಜಾಪ್ರಭುತ್ವವನ್ನು ಉಳಿಸಿ ಬೆಳೆಸಬೇಕು, ಮಾನವ ಹಕ್ಕುಗಳ ಕಾಪಾಡಲು ಹಲವು ರೀತಿಯಲ್ಲಿ ಸಂಘಟನಾತ್ಮಕವಾದ ಚಳವಳಿ, ಆಂದೋಲನದಲ್ಲಿ ತೊಡಗಿಕೊಂಡವರಾಗಿದ್ದರು.‌ ಇವರ ಅಗಲಿಕೆ ಚಳವಳಿಗೆ ದೊಡ್ಡ ನಷ್ಟವೇ ಆಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು,ಬಂಡಾಯ ಸಾಹಿತಿಗಳು ಮತ್ತು ಸಾಮಾಜಿಕ ಹಾಗೂ ಪ್ರಗತಿ ಪರ ಚಿಂತಕರಾದ ಶ್ರೀ ವಿಠ್ಠಪ್ಪ ಗೋರಂಟ್ಲಿಯವರ ಕುರಿತು ಮಾಡಿದ ಕಿರು ಸಂಶೋಧನೆ ” ಪತ್ರಕರ್ತರಾಗಿ ವಿಠ್ಠಪ್ಪ ಗೋರಂಟ್ಲಿ ಒಂದು ಅಧ್ಯಯನ ” ಕಿರು ಸಂಶೋಧನೆಯ ಅಧ್ಯಯನವನ್ನು ಮಾಡಲಾಗಿತ್ತು.ಅವರ ಜೊತೆಯಲ್ಲಿ ತುಂಬ ವಿಷಯದ ಬಗ್ಗೆ ಸುದೀರ್ಘವಾದ ಸಂವಾದ ಮತ್ತು ಪ್ರಗತಿ ಪರ ಚರ್ಚೆ ಪತ್ರಿಕೋದ್ಯಮ ಮತ್ತು ಬರವಣಿಗೆಯ ಕುರಿತು ಉಪನ್ಯಾಸವನ್ನು ಮಾಡುತ್ತಿದ್ದರು.  ಸಾಮಾಜಿಕ ಜೀವನದಲ್ಲಿ  ಪತ್ರಕರ್ತರಾದವರು ಹೇಗಿರಬೇಕು.ಪತ್ರಿಕೆಯಲ್ಲಿ ನಮ್ಮ ವರದಿಗಳಿಂದ ಸಾಮಾಜಿಕ ಬದಲಾವಣಿಗೆಯ ಉಂಟಾಗುವಂತಿರಬೇಕು . ಅನ್ಯಾಯದ ವಿರುದ್ಧ ವಾಗಿ ವರದಿಗಳು ಮೂಡಿಬರಬೇಕು. ಸಮಾಜದಲ್ಲಿ ಶೋಷಿತರು, ಮಹಿಳೆಯರು, ಬಾಲಕಾರ್ಮಿಕರು ಪದ್ಧತಿ ದೇವದಾಸಿ ಪದ್ಧತಿ ಅಸ್ಪೃಶ್ಯತೆ ಇತ್ಯಾದಿ  ವಿಷಯಗಳ ಕುರಿತು ಮಾರ್ಗದರ್ಶನ ಮಾಡುತ್ತಿದ್ದರು.ಅವರು ನಮ್ಮನ್ನು ಬಿಟ್ಟು ಇಹಲೋಕವನ್ನು ತ್ಯಜಿಸಿದ್ದಾರೆ.  18-7-2021 ರಂದು ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ಸಭೆ ಮುಗಿಸಿಕೊಂಡು ಮನೆಗೆ ಹೋದ ನಂತರ  ಲೂಜ್ ಮೂಸನ್ ಹಾಗಿತ್ತಂತೆ. ತಕ್ಷಣ ನಾವು ಮನೆಗೆ ಹೋಗಿ ಆಸ್ಪತ್ರೆಗೆ ಕರೆದರೆ ಬರಲಿಲ್ಲ. ಗುಳಿಗೆಗೆ ಸರಿಯಾಗತ್ತೆ ಎಂದಿದ್ದರು.  ರಾತ್ರಿ ಅನೇಕ ಭಾರಿ ಕರೆ ಮಾಡಿ ವಿಚಾರಿಸಿದಾಗ ನನ್ನ ಬಗ್ಗೆ ಚಿಂತೆ ಬೇಡ. ನಾಳೆ ನಡೆಯುವ ಹೋರಾಟದ ತಯಾರಿ  ಮಾಡೋಣ ಎಂದಿದ್ದರು. ಹೊಟ್ಟೆಯ ಕೊಳೆ ಕ್ಲೀನ್ಬ ಆದರೆ ಒಳ್ಳೆಯದು ಮತ್ತು ಹಾಗಾಗ ಈ ರೀತಿಯಾದರೆ ಉಸಿರಾಟಕ್ಕೆ ಅನುಕೂಲವಾಗುತ್ತದೆ ಎಂದಿದ್ದರು.   ಆ ದಿನವೇ ನನಗೆ ಅವರ ಆರೋಗ್ಯದ ಬಗ್ಗೆ ಭಯ ಕಾಡಿತ್ತು. 19 ರಂದು ಬೆಳಿಗ್ಗೆ  ತಾವೆ ಸ್ವತಃ ಅಡಿಗೆಯ ಜವಾಬ್ದಾರಿಗೆ ನಿಂತಿದ್ದರು.  ಸಾವಿರಾರು ಜನರು ಮಾಡುವ ಊಟ ತುಂಬಾ ರುಚಿಯಾಗಿರಬೇಕೆಂದು ಅಡಿಗೆ ಮಾಡುವ ವ್ಯಕ್ತಿಗೆ ಹೇಳುತ್ತ ಕುಳಿತಿದ್ದರು.  19 ರ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಪಬ್ಲಿಕ್ ಗ್ರೌಂಡ್ ಗೆ ಬಂದು ದಲಿತ ದಮನಿತರ ಒಕ್ಕೂಟದ  ಹೋರಾಟದಲ್ಲಿ ಭಾಗವಹಿಸಿ ಸಂಜೆ 5 ಗಂಟೆಯವರೆಗೆ ನಮ್ಮೊಂದಿಗಿದ್ದರು. ಸರ್ ನೀವು ಹೋಗಿ ರೆಸ್ಟ್ ಮಾಡಿರೆಂದರೇ, ಊಟದ ಜವಾಬ್ದಾರಿ ನನಗೆ ವಹಿಸಿದಿರಿ ಆ ಕೆಲಸ ಪೂರ್ಣವಾದ ನಂತರ ಹೋಗುತ್ತೇನೆಂದಿದ್ದರು. ನಾನು ಮತ್ತು ಕುಮಾರ ಸಮತಳ ಒತ್ತಾಯ ಮಾಡಿ ಸಂಜೆ 5 30 ಕ್ಕೆ ಅವರನ್ನು ಮನೆಗೆ ಕಳುಹಿಸಿದ್ದೆವು. ಮರು ದಿನ (ದಿನಾಂಕ 20 ರಂದು) ಹೋರಾಟದ ಖರ್ಚು ವೆಚ್ಚದ ಕುರಿತು ಚರ್ಚಿದರು. ನಿನ್ನೇ (21 ರಂದು) ಬೆಳಿಗ್ಗೆ ಅವರೊಂದಿಗೆ ಮಾತನಾಡಿ ಜಿಲ್ಲಾ ಪೋಲಿಸ್ ಅಧಿಕಾರಿಗಳನ್ನು ಬೇಟಿಯಾಗಲು ಕರೆದಿದ್ದೆವು. ಬೇಡ ನೀವೇ ಬೇಟಿಯಾಗಿರಿ ಎಂದಿದ್ದರು. ಇಂದು ಮದ್ಯಾಹ್ನ ಆಸ್ಪತ್ರೆಗೆ ಹೋಗಿ E C G ಮಾಡಿಸಿಕೊಂಡಿದ್ದರೆಂದು ರಾತ್ರಿ ಗೊತ್ತಾಯಿತು… ಈ ವಿಷಯ ನಮಗೆ ಗೊತ್ತಿರಲಿಲ್ಲ.ಮೊದಲೆ ಗೊತ್ತಾಗಿದ್ದರೆ ಕೊಪ್ಪಳದಲ್ಲಿಯೇ ಉಳಿದುಕೊಳ್ಳುತ್ತಿದ್ದೆವು. ಸರ್ ನಿಮ್ಮ ಹಗಲಿಕೆಯನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ನಿಮಗೆ ಸಾವಿರ ಸಾವಿರ ನಮನಗಳು. ನೀವು ಮಾಡುತ್ತಿದ್ದ ಮಾನವೀಯ ಕೆಲಸವನ್ನು ಮುಂದುವರೆಸುತ್ತೇವೇ. ಮಾನ್ಯ ಡಿ.ಹೆಚ್.ಪೂಜಾರ ಇವರು ಸಂತಾಪ ಸೂಚಿಸಿದರು….

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *