ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ ಬಿ ಎಸ್ ಯಡಿಯೂರಪ್ಪ…..

Spread the love

ಕರ್ನಾಟಕ ರಾಜ್ಯ ಕಂಡ ಧೀಮಂತ ನಾಯಕ ಬಿ ಎಸ್ ಯಡಿಯೂರಪ್ಪ…..

ಈ ಬಾರಿಯ ಕರ್ನಾಟಕ ರಾಜ್ಯದಲ್ಲಿ ಸರ್ಕಾರ ರಚನೆ ಆಗಿರೋದು ಯಡಿಯೂರಪ್ಪ ನವರ 40 ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಹಾಗಾಗಿ ಬಿ ಎಸ್ ವೈ ರವರ ನೇತೃತ್ವದಲ್ಲಿ ಸರಕಾರ ರಚನೆಗೊಂಡಿರುವುದು ಇಡೀ ದೇಶದ ಜನರಿಗೆ ಗೊತ್ತಿರುವ ವಿಚಾರ, ಇನ್ನು ಮುಂದೆ ಹೋಗಿ ಹೇಳಬೇಕೆಂದರೆ ಕರ್ನಾಟಕದ ಜನತೆಗೆ ಕೇಂದ್ರದ ಬಿಜೆಪಿ ನಾಯಕರು ಯಡಿಯೂರಪ್ಪನವರು ಮುಂದಿನ ಸರಕಾರದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳೆಂದೇ ಭರವಸೆ ನೀಡಿಯೇ ಚುನಾವಣೆ ಎದುರಿಸಿದ್ದು, ಜನತೆ ಕೂಡ ಅವರಿಗೆ ಅಂದರೆ ಯಡಿಯೂರಪ್ಪ ನವರಿಗೆ ಆಶೀರ್ವಾದ ಮಾಡಿದ್ದಾರೆ.ಎನ್ನುವುದು ಇಂದಿನ ಬಿಜೆಪಿಯ ಎಲ್ಲಾ ಹಿರಿಯ, ಕಿರಿಯ ನಾಯಕರಿಗೆ ತಿಳಿದಿರುವ ವಿಚಾರವೇ ಸರಿ, ಹೀಗಿದ್ದ ಮೇಲೂ, ಯಾಕೇ ಇಂತಹ ಪ್ರಶ್ನೆಗಳು ಈಗೇಕೆ ಉದ್ಭವವಾಗುತ್ತಿದೆ ಎಂಬುವುದೇ ತಿಳಿಯದ ಡಾಲರ್ ಸಮಸ್ಯೆಯಾಗಿ ಕಾಡುತ್ತಿದೆ. ಯಡಿಯೂರಪ್ಪ ನವರ ನೇತೃತ್ವದ ಸರ್ಕಾರವು ಕೂಡ ಅನೇಕ ಸಂಕಷ್ಟಗಳ ಸಮಯದಲ್ಲೂ ಕೂಡ ತಮ್ಮ ವಯಸ್ಸಿನ ಅಡ್ಡಿಯನ್ನು ಲೆಕ್ಕಿಸದೆ ಉತ್ತಮ ಆಡಳಿತವನ್ನು ಕರ್ನಾಟಕ ರಾಜ್ಯದ ಜನರಿಗೆ ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ. ಜೊತೆಗೆ ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಮಾಣಿಕ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಹೀಗಿದ್ದ ಮೇಲೆ ಯಾಕೆ ಬದಲಾವಣೆ ಎನ್ನುವುದೇ ತಿಳಿಯದೇ ಇರುವ ರಾಜಕೀಯ !. ಇಡೀ ಕರ್ನಾಟಕ ರಾಜ್ಯ ಸುತ್ತಿ ಸರ್ಕಾರ ರಚನೆ ಮಾಡುವಾಗ ಇಲ್ಲದ ಅವರ ವಯಸ್ಸಿನ ಅಡ್ಡಿ, ಈಗೇಕೆ ಕಾಣಿಸುತ್ತಿದೆಯೇ? ಇದುವೇ ಜನಸಾಮಾನ್ಯರಿಗೆ ತಪ್ಪು ಸಂದೇಶ ಹೋಗುತ್ತಿದೆ. ಯಾಕಂದರೆ ಬೇರೆ ಬೇರೆ ರಾಜ್ಯಗಳಲ್ಲಿ ಇವರಿಗಿಂತ ಹಿರಿಯ ನಾಯಕರುಗಳಿಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಕೇಂದ್ರದ ಬಿಜೆಪಿ ನಾಯಕರು ಮುಂದಾಗಿದ್ದು ಗೊತ್ತಿರುವ ವಿಷಯವೇ ಎಂಬುದು ಅವರೆಲ್ಲರೂ ಮರೆಯಬಾರದು. ಉದಾಹರಣೆಗೆ ಮೊನ್ನೆ ಮೊನ್ನೆ ನಡೆದ ಕೇರಳ ರಾಜ್ಯದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದ ವ್ಯಕ್ತಿಯ ವಯಸ್ಸು ಸುಮಾರು 86 ರಿಂದ 88 ಇತ್ತು ಎನ್ನುವ ಮಾಹಿತಿಗಳು ಇವೆ. ಹೀಗಿದ್ದ ಮೇಲೆಯೂ, ಅಲ್ಲಿ ಒಂದು ನಿಯಮ, ಇಲ್ಲಿ ಒಂದು ನಿಯಮ, ಇದು ಯಾಕೇ ? ಇದು ಸರಿಯಾದ ಕ್ರಮವಲ್ಲ. ಒಬ್ಬ ಪಕ್ಷದ ನಿಷ್ಠಾವಂತ ಸೇವಕ, 40 ವರ್ಷಗಳಿಂದ ಬಿಜೆಪಿಯ ಬಲವರ್ಧನೆಗೆ ದುಡಿದ

ವ್ಯಕ್ತಿಗೆ ಇವತ್ತಿನ ದಿನಗಳಲ್ಲಿ ಅವಮಾನದಿಂದ  ಕಾಣುವ ಸಂಸ್ಕೃತಿ ಚಂದವಲ್ಲ. ಅನ್ನುವುದು ಈಗಿನ ಕೇಂದ್ರ ಸರ್ಕಾರದ ಪ್ರಮುಖ ವ್ಯಕ್ತಿಗಳು ಹಾಗೂ ಸಂಘದ ಪ್ರಮುಖ ವ್ಯಕ್ತಿಗಳು ತಿಳಿದುಕೊಳ್ಳುವುದು ಅವಶ್ಯಕತೆ ಇದೆ. ದಯವಿಟ್ಟು ತಿಳಿದುಕೊಳ್ಳಿ ಪಕ್ಷ ಉಳಿಸುವ ಕೆಲಸ ಮಾಡಿ,ಇದನ್ನು ಬಿಟ್ಟು ಸ್ವಾರ್ಥಕ್ಕಾಗಿ ಪಕ್ಷದ ಸಂಘಟನೆ ಬಳಸಿಕೊಳ್ಳುವುದು ಸಮಂಜಸವಲ್ಲ, ಸರಿಯಾದ ಕ್ರಮವಲ್ಲ.

ಇನ್ನು ಸಂಘಟನೆ ದೃಷ್ಟಿಯಿಂದ ಕಾಲ ಕಾಲಕ್ಕೆ ಬದಲಾವಣೆ ಆಗಲೇಬೇಕು, ಹಾಗಂತ ಸುಮಾರು ವರ್ಷಗಳ ಕಾಲ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಕಟ್ಟಲು ಶ್ರಮಿಸಿದ ಒಬ್ಬ ನಾಯಕನಿಗೆ, ಇವತ್ತಿನ ಕೆಲವು ಚೇಲಾಗಳ ಮಾತು ಕೇಳಿಕೊಂಡು ಅಪಪ್ರಚಾರ, ಅವಮಾನ, ಮಾನಸಿಕ ಹಿಂಸೆ, ಒತ್ತಡದಂತಹ ಸನ್ನಿವೇಶ ನಿರ್ಮಾಣ ಮಾಡುವ ಮೂಲಕ ಹೀನಾಯವಾಗಿ ಯಡಿಯೂರಪ್ಪನವರನ್ನು

ನಡೆಸಿಕೊಳ್ಳುತ್ತಿರುವ ರೀತಿಯನ್ನು ದೇಶಾದ್ಯಂತ ಸಾಮಾನ್ಯರಿಂದ ಹಿಡಿದು ಕಾರ್ಯಕರ್ತರವರೆಗೆ ಖಂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಜೊತೆಗೆ  ಹಿಡಿಶಾಪ ಸಹ ಹಾಕುತ್ತಿದ್ದಾರೆ. ಇದೆ ಸಮಯಕ್ಕೆ ಯಡಿಯೂರಪ್ಪನವರ ಹುಟ್ಟು ಹೋರಾಟದ ಗುಣಗಳನ್ನು ಕೊಂಡಾಡುತ್ತಿದ್ದಾರೆ. ಸಾಮಾನ್ಯ ನಾಗರಿಕರು, ವಿರೋಧ ಪಕ್ಷಗಳು, ನಾಡಿನ ಸರ್ವ ಜನಾಂಗದ ಸ್ವಾಮೀಜಿಗಳು ಯಡಿಯೂರಪ್ಪ ನವರ ಸೇವೆಯ ಬಗೆ ಗುಣಗಾನ ಮಾಡುತ್ತಿದ್ದಾರೆ. ಎಂಬುದು ನಾವ್ಯಾರು ಮರೆಯಬಾರದು. ಕಾರಣ ಯಡಿಯೂರಪ್ಪ ರವರೆಂದರೆ ಅಭಿವೃದ್ಧಿ, ಅಭಿವೃದ್ಧಿ ಹರಿಕಾರ, ಬಡವರ ಬಂಧು,ಕರ್ನಾಟಕ ರಾಜ್ಯದ ಒಂದು ಶಕ್ತಿ ಮತ್ತು ಸರ್ವಜನಾಂಗದ ಹೆಮ್ಮೆಯ ಜನ ನಾಯಕ,ರೈತ ಹೋರಾಟಗಾರ. ಹೀಗೆ ಹೇಳುತ್ತ ಹೋದರೆ ಬರೆಯುವುದಕ್ಕೆ ಪುಟಗಳೇ ಸಾಕಾಗುವುದಿಲ್ಲ. ಹಾಗಾಗಿ ಯಡಿಯೂರಪ್ಪನವರಿಗೆ ಸರಿಸಾಟಿಯಾಗಿ ನಿಲ್ಲುವ ನಾಯಕ ಸದ್ಯ ಕರ್ನಾಟಕ ರಾಜ್ಯದಲ್ಲಿ ಸಿಗುವುದು ಕಷ್ಟ. ಹೀಗಿದ್ದ ಮೇಲೆಯೂ ಇವರನ್ನು ಬದಲಾಯಿಸಿ, ಬೇರೆ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡುವುದು ಬಿಜೆಪಿಗೆ ಸೂಕ್ತವಲ್ಲ ಎಂಬ ಭಾವನೆ ಕರ್ನಾಟಕದ ಮಹಾಜನತೆಯದಾಗಿದೆ. ಈ ದಿಸೆಯಲ್ಲಿ ಸೂಕ್ತವಾದಂತಹ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರ್ಕಾರ,ಬಿಜೆಪಿ ಕೇಂದ್ರದ ಮುಖಂಡರಿಗೆ ಬಿಟ್ಟ ವಿಚಾರ. ಆಶಯ ಮಾತು : – ಭಾರತ ದೇಶದ ಒಬ್ಬ ನಾಗರಿಕನಾಗಿ ನಮ್ಮ ಕೇಂದ್ರದ ಪ್ರಮುಖ ಬಿಜೆಪಿಯ ನಾಯಕರಲ್ಲಿ ನನ್ನ ದೊಂದು ಮನವಿ. ದಯಮಾಡಿ ಯಡಿಯೂರಪ್ಪ ನವರ ನೇತೃತ್ವದ ಸರ್ಕಾರವನ್ನು ಈ ಅವಧಿ ಸಂಪೂರ್ಣವಾಗಿ ಆಡಳಿತ ನಡೆಸಲು ಬಿಡಿ ಅಂದರೆ ಈ ಅವಧಿಯ ಆಡಳಿತ ಮುಗಿಯುವವರೆಗೂ ಬಿಡುವುದು ಒಳ್ಳೆಯದು ಜೊತೆಗೆ ನಿಮ್ಮ ಸಹಕಾರ, ಬೆಂಬಲ, ಪ್ರೋತ್ಸಾಹ ಸಹ ಇವರ ಮೇಲೆ ಶ್ರೀರಕ್ಷೆಯಾಗಿ ನಿಲ್ಲಬೇಕು. ಮುಂದಿನ ಚುನಾವಣೆಯಲ್ಲಿ ನೀವು ಯಾರನ್ನೇ ಗುರುತಿಸಿ ಅವಕಾಶ ನೀಡಿದರೆ. ಖಂಡಿತ ಅವರ ನೇತೃತ್ವದಲ್ಲೇ  ಚುನಾವಣೆಗೆ ಹೋಗೋಣ, ಮತ್ತೊಮ್ಮೆ ನಮ್ಮ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರೋಣ.ಏನಂತೀರಿ.

ಸಂಗಮೇಶ ಎನ್ ಜವಾದಿ, ಬೀದರ ಜಿಲ್ಲೆ, ಸಾಹಿತಿ,ಸಮಾಜಿಕ ಕಾರ್ಯಕರ್ತ,ಪರಿಸರ ಸಂರಕ್ಷಕ.

Leave a Reply

Your email address will not be published. Required fields are marked *