“ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ನಂದಾ ದೀಪ”

Spread the love

“ಕಿರು ಲೇಖನ”

“ ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ಸದಾ ಉರಿಯುವ ನಂದಾದೀಪ ವಿದ್ದಂತೆ”.

“ ಗುರುವೇ ಅರುವಿನ ಜ್ಞಾನದ ಬೆಳಕಿನ ಮೂಲ ಪುರುಷ”,..ಏನೊಂದು ಗೊತ್ತಿರದ ವಿದ್ಯಾರ್ಥಿಯು ಗುರುವಿನ ಬಳಿ ಬಂದಾಗ..ಏನೊಂದು ವಸ್ತುವು ತುಂಬಿರದ ಖಾಲಿ  ಚೀಲದಂತೆ ಖಾಲಿಯಿರುವ ವಿದ್ಯಾರ್ಥಿಗೆ “ ಅಕ್ಷರ “  “ ಓಂ “ ಕಾರದ ಜ್ಞಾನದ ಬತ್ತಿಯನ್ನು ತುಂಬಿ, ಕಠಿಣ ಪರಿಶ್ರಮವೆಂಬ ಎಣ್ಣೆಯನ್ನು ಬಸಿದು,ಪೂರ್ತಿ ಖಾಲಿಯಾಗಿರುವ ಫೊಣತಿಯೆಂಬ ವಿದ್ಯಾರ್ಥಿಗೆ   “ ಅಕ್ಷರ “ ವೆಂಬ ಅಗ್ನಿಯಿಂದ ಜ್ಞಾನವೆಂಬ ಬೆಳಕನ್ನು ಹೊತ್ತಿಸುವುನು,ವಿದ್ಯಾರ್ಥಿಯ ಮನದಲ್ಲಿ ಸದಾ ಜೀವನಪೂರ್ತಿ ಹೊತ್ತಿ ಉರಿಯವಂತೆ ಮಾಡುವ ಮಹಾತ್ಮ..ಪುರುಷೋತ್ತಮ ಗುರು..ಅದಕ್ಕಾಗಿ ಅಲ್ಲವೇ ಗುರು ಬ್ರಹ್ಮನೆಂದು.ಅಜ್ಞಾನ..ಅಂಧಕಾರ ಕಳೆಯುವ..ರೋಗ ರುಜಿನಗಳಂತಹ ..ಕಷ್ಟ ಕಾರ್ಪಣ್ಯಗಳನ್ನು ಕರಣೆಯಿಂದ ಕಳೆಯುವ.. ವಿದ್ಯಾ ಬುದ್ದಿಗಳನ್ನು ಹೇಳಿಕೊಡುವಾಗ ಮಗುವನ್ನು ಸಲಹುವ ಎರಡನೇಯ ತಾಯಿಯಂತಾಗುವನು ನಮ್ಮ ಗುರು ವಿಷ್ಣು ಸ್ವರೂಪಿ..ಕುತ್ತು ಬಂದಾಗ ದುಷ್ಟಶಕ್ತಿಗಳ ಕಾಟಗಳಿಂದ ವಿಮುಕ್ತಿಗೊಳಿಸಲು ಗುರು ಶಿವನಾಗುವ ಶಿವಸ್ವರೂಪಿ ಎನಿಸಿಕೊಳ್ಳುವನು.. ಅದಕ್ಕಲ್ಲವೇ..ಅನುಭಾವಿಗಳು ಹೇಳಿದ್ದು..”ಹರ ಮುನಿದರೂ ಗುರು ಕಾಯುವನು “ ಎಂದು..ಕಣ್ಣಿಗೆ ಕಾಣುವ ಹರನೇ ಗುರುವು ಎಂದರೆ ತಪ್ಪೇನಿಲ್ಲ.. ಶಿಕ್ಷಕರು ಮಗುವಿನ ಮಂದಹಾಸದ ಹೊನಲು..ಮುಗ್ಧ ಮನಸ್ಸಿನಲ್ಲಿ ಉತ್ತಮೋತ್ತಮವಾದ ಸಂಸ್ಕಾರದ ಸಂಸ್ಕೃತಿಯ..ಬೀಜಬಿತ್ತಿ ಪರಿಶ್ರಮದಿಂದ ನಿಷ್ಕಾಮಮನದಿ ಕಾಯಕವ ಮಾಡುವ ಯೋಗಿವರ್ಯ..ಎಕೆಂದರೆ ಶಿಕ್ಷಕರು ನಿತ್ಯ ಬದುಕಿನಲ್ಲಿ ತಂದೆತಾಯಿಗಿಂತ ಮಿಗಿಲಾಗಿ..ಮಗುವಿನ ಮನಸ್ಸಿನಲ್ಲಿರುವ ತುಮುಲಗಳನ್ನು ಗುರುತಿಸುವ ಗುರಿಕಾರ..ಮಗುವಿನ ಚಲನವಲನಾಗಳನ್ನು ಚಾಚುತಪ್ಪದೆ ನೆಟ್ಟಗಣ್ಣಿನಿಂದ ದಿವ್ಯದ ದಿಟ್ಟಿಯಲ್ಲಿ ನೋಡಿ ಮಗುವಿನ ಮುಂದಿನ ಭವಿಷ್ಯವ ಬಯಲಿಗೆ ಬರುವಂತೆ ಅದಕ್ಕೆ ಪುರಕವಾದ ಜ್ಞಾನವನ್ನು ಪುಷ್ಠಿಯನ್ನು..ಬೆಂಬಲವನ್ನು..ಸಹಕಾರವನ್ನು ..ಹೊರಗಿನ ಪ್ರಪಂಚಕ್ಕೆ ಮಗುವಿನ ವ್ಯಕ್ತಿತ್ವವನ್ನು ಪ್ರಕಟಪಡಿಸಿ..ಉನ್ನತದಾರಿಯ ಮಾರ್ಗ ಸೂಚಿಸುವ ಮಾರ್ಗದರ್ಶಕ, ಮಗುವಿನ ಬಾಳಲ್ಲಿ ದಿನ ಚೈತನ್ಯ ತುಂಬಲು ನಿತ್ಯ ಬೆಳಕನ್ನು ತೋರಿಸಲು ಬರುವ ನಂದಾದೀಪದಂತೆ ಬರುವ ದಿನಕರ.. ವಿದ್ಯಾರ್ಥಿಗೆ ಸಂಕಷ್ಟ ಬಂದಾಗ ಮೊದಲು ಮನ ನೊಂದು ಕೊಳ್ಳುವ ಜೀವಿ ಗುರು, ತಾನೂ ತನ್ನ ಪರಿಶ್ರಮದಿಂದ ಕಲಿಸಿದ ವಿದ್ಯಾರ್ಥಿಯು ಯಾವೂದೋ ಒಂದು ತೊಂದರೆಯಿಂದ ಮುಂದೆ ಬರದಿದ್ದಾಗ ಮತ್ತೇ ಮತ್ತೇ ಎದೆಗುಂದದ ಹಾಗೆ ಧೈರ್ಯ ಸ್ಥೈರ್ಯ  ತುಂಬುವ ಶಿಷ್ಟ ಗುಣಗಳ ಪರಿಪಾಲಕ ಶಿಕ್ಷಕ, ವಿದ್ಯಾರ್ಥಿಗಳನ್ನು ಅವಕಾಶಗಳಿಂದ ವಂಚಿತರಾಗದಂತೆ,ಅರ್ಧಕ್ಕೆ ಜೀವನದ ದೋಣಿಯು ಎಲ್ಲಿಯೂ ನಿಲ್ಲದಂತೆ, ದಡವನ್ನು ಮುಟ್ಟಿಸಿ..ಮನದಲ್ಲಿ ಉಲ್ಲಾಸ ಪಡುವ ಜೀವಿ ಶಿಕ್ಷಕ, ಜೀವನದಲ್ಲಿ ಮುಕ್ತಿ ,ಸ್ವರ್ಗಗಳು ಇವೆಯೋ ಇಲ್ಲ ಗೊತ್ತಿಲ್ಲ ಆದರೆ ನಮ್ಮ ಜೀವನ ಸುಖ ಸಂತಸದಿಂದ ಇರಲು ಮಾತ್ರ ಶಿಕ್ಷಕ / ಗುರುವೇ ಕಾರಣ. ಆದ್ದರಿಂದ ಈ ನಮ್ಮ ಜೀವನದಲ್ಲಿ ತಾಯಿಯ ಋಣ, ಈ ಭೂಮಿಯ ಋಣ, ತಂದೆಯ ಋಣ, ಗುರುವಿನ ಋಣ ಈ ಋಣಗಳನ್ನು ನಮ್ಮಿಂದ ಕೈಯಿಂದ ತೀರಿಸಲು ಸಾಧ್ಯವಿಲ್ಲ. ಗುರುವು ಒಳ್ಳೆಯದನ್ನುಮಾಡೇ ಮಾಡುತ್ತಾನೆ. ಆದ್ದರಿಂದ “ ಶಿಕ್ಷಕರು ವಿದ್ಯಾರ್ಥಿಗಳ ಬದುಕಿಗೆ ಸದಾ ಉರಿಯುವ ನಂದಾದೀಪ ವಿದ್ದಂತೆ “, ಇದು ನಿಮ್ಮ ಆತ್ಮ ಸಾಕ್ಷಿಗೆ ಗೊತ್ತಿರಲಿ.

✍️ ಹನುಮಂತಪ್ಪ..ಕಿಡದೂರು @ ನಾರಿನಾಳ.

Leave a Reply

Your email address will not be published. Required fields are marked *