ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು..

Spread the love

ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು..

ಇಂದು ವೈದ್ಯರ ಹಾಗೂ ಪತ್ರಕರ್ತರ, ಪತ್ರಿಕಾ ದಿನಾಚರಣೆ. ಇಂದಿನ ಸಂದಿಗ್ಧ ಸ್ಥಿತಿಯಲ್ಲಿ ಈ ಎರಡು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಹಾಗೂ ಪತ್ರಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಜನರನ್ನು ಮಹಾಮಾರಿ ಕೊರೋನಾ ದಿಂದ ರಕ್ಷಿಸಲು ಹೋರಾಡುತ್ತಿದ್ದಾರೆ. ವೈದ್ಯರು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿ, ತಾವು ಕೊರೊನಾ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಅಲ್ಲದೆ ಪತ್ರಕರ್ತರು ಕೊರೋನಾ ಕುರಿತು ವರದಿ ಮಾಡಲು ಹೋಗಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವ ಘಟನೆಗಳು ನಡೆದಿವೆ. ಈ ವರ್ಷ ನಾವು ಹಲವಾರು ಜನ ನಮ್ಮ ಆತ್ಮೀಯ ವೈದ್ಯರನ್ನು ಹಾಗೂ ಪತ್ರಕರ್ತರನ್ನು ಕಳೆದುಕೊಂಡಿದ್ದೇವೆ. ಹೀಗೆ ನಮ್ಮಿಂದ ಅಗಲಿರುವ ವೈದ್ಯರಿಗೆ ಹಾಗೂ ಪತ್ರಕರ್ತರಿಗೆ ನಮನಗಳನ್ನು ಸಲ್ಲಿಸುತ್ತಾ, ವೈದ್ಯರ ಹಾಗೂ ಪತ್ರಿಕಾ ದಿನಾಚರಣೆಯ ಈ ದಿನ ನಾಡಿನ ಎಲ್ಲಾ ವೈದ್ಯರಿಗೆ ಹಾಗೂ ಪತ್ರಕರ್ತರಿಗೆ ತುಂಬು ಹೃದಯದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ದೇಶದಲ್ಲಿ ಕೊರೋನಾ ಮಹಾಮಾರಿಯಿಂದ ಉಂಟಾಗಿರುವ ಸಂಕಷ್ಟದ ಸ್ಥಿತಿಯಲ್ಲಿ ನಮ್ಮ ವೈದ್ಯರು ಸೈನಿಕರ ರೀತಿಯಲ್ಲಿ ಕೊರೋನಾ ಸೋಂಕು ತಗುಲಿರುವ ರೋಗಿಗಳ ಜೀವ ಉಳಿಸಲು ತಮ್ಮ ಜೀವವನ್ನೆ ಪಣಕ್ಕೆ ಇಟ್ಟಿದ್ದಾರೆ. ಹಗಲಿರುಳು ಜನರ ಜೀವ ರಕ್ಷಣೆಗಾಗಿ ಹೋರಾಟ ನಡೆಸಿದ್ದಾರೆ. ಮನೆ, ಮಕ್ಕಳನ್ನು ಬಿಟ್ಟು, ರೋಗಿಗಳ ರಕ್ಷಣೆಗೆ ನಿಂತಿದ್ದಾರೆ. ವೈದ್ಯರ ದಿನಾಚರಣೆಯ ಈ ದಿನ ನಾನು ವೈದ್ಯಕೀಯ ಕ್ಷೇತ್ರದ ಎಲ್ಲರಿಗೂ ತುಂಬು ಹೃದಯದಿಂದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಅದೇ ರೀತಿ ಜನರಿಗೆ ಎಲ್ಲಾ ರೀತಿಯ ಸುದ್ದಿಗಳನ್ನು ಮುಟ್ಟಿಸುವ, ಜನರಲ್ಲಿ ಜಾಗೃತಿ ಮೂಡಿಸುತ್ತಿರುವ ಎಲ್ಲಾ ಪತ್ರಕರ್ತರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತೇನೆ. ಆ ಭಗವಂತನು ನಾಡಿನ ಎಲ್ಲಾ ವೈದ್ಯರಿಗೆ ಹಾಗೂ ಪತ್ರಕರ್ತರಿಗೆ ಉತ್ತಮ ಆರೋಗ್ಯ ಹಾಗೂ ಹೆಚ್ಚಿನ  ಆಯುಷ್ಯವನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಖಡ್ಗಕ್ಕಿಂತ ಲೇಖನಿ ಹರಿತ,ಗನ್ ಗಿಂತ ಹೆಚ್ಚಿನ ಶಕ್ತಿ ಹೊಂದಿರುವ ಪೆನ್ನು ಪತ್ರಕರ್ತನ ಬಲವಾದ ಆಯುಧ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕಾರಂಗದ ಸಾರಥಿಯಾದ ಪತ್ರಕರ್ತ ಸಮಾಜದ ಜೀವಾಳ. ಜಾತಿ, ಮತ, ಪಕ್ಷ, ರಾಜಕೀಯ, ಮೇಲು-ಕೀಳು ಎಂಬ ಬೇಧವಿಲ್ಲದೇ, ಯಾವದೇ ಬೆದರಿಕೆಗೂ ಬಗ್ಗದೇ, ಯಾವ ಆಶೆ-ಆಮಿಶಗಳಿಗೆ ಒಳಗಾಗದೇ, ನೇರ, ನಿಷ್ಟುರ, ನಿರಂತರ ಕ್ರಿಯಾಶೀಲ ಬರವಣಿಗೆಯ ಮೂಲಕ ಸಮಾಜದ ಅಂಕುಡೊಂಕು ತಿದ್ದುವದೇ ಪತ್ರಕರ್ತನ ಕರ್ತವ್ಯ.ಅದೇ ನನ್ನ ಧರ್ಮ . ಆ ದಿಶೆಯಲ್ಲಿ ಕಳೆದ ಅನೇಕ  ಬಹುಗಳಿಂದ ನನ್ನ ಪತ್ರಿಕಾ ಜೀವನ ಮುಂದುವರೆದಿದೆ. ನನ್ನ ನಿಷ್ಠಾವಂತ ಹಿರಿಯ ಮತ್ತು ಕಿರಿಯ ಪತ್ರಿಕಾ ಮಿತ್ರರಿಗೆ ಪತ್ರಿಕಾ ದಿನಾಚರಣೆ,ಹಾಗೂ ಸಮಸ್ತ ವೈದ್ಯರಿಗೆ ರಾಷ್ಟ್ರೀಯ ವೈದ್ಯರ ದಿನದ  ಹಾರ್ದಿಕ ಶುಭಾಶಯ ಕೋರುವವರು ನಿಮ್ಮ ಆತ್ಮೀಯ ವರದಿಗಾರರು.

ವರದಿ – ಮಹೇಶ ಶರ್ಮಾ

Leave a Reply

Your email address will not be published. Required fields are marked *