ಭಾರೀ ಮಳೆ ಮಂತ್ರಾಲಯದಲ್ಲಿ ಪ್ರವಾಹ…..

Spread the love

ಭಾರೀ ಮಳೆ ಮಂತ್ರಾಲಯದಲ್ಲಿ ಪ್ರವಾಹ…..

ರಾಯಚೂರು: ಆಂಧ್ರಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಂತ್ರಾಲಯದಲ್ಲಿ ಹಳ್ಳಗಳು ತುಂಬಿ ಹರಿಯುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಒಂದು ವಾರದ ಹಿಂದೆಯಷ್ಟೇ ಭಕ್ತರಿಗೆ ಬೃಂದಾವನ ದರ್ಶನಕ್ಕೆ ಅವಕಾಶ ಕಲ್ಪಿಸಲಾ ಗಿತ್ತು. ಆದರೆ ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂತ್ರಾಲಯದ ಸುತ್ತಮುತ್ತಲೂ ಜಲಾವೃತವಾಗಿದೆ. ಮಳೆಯಿಂದಾಗಿ ಮಂತ್ರಾಲಯದ ಗುರುರಾಯರ ಸನ್ನಿಧಿ, ಸುತ್ತಮುತ್ತ ಲಿನ ರಸ್ತೆಗಳು ಜಲಾವೃತವಾಗಿದೆ. ಕರ್ನಾಟಕ ಅತಿಥಿ ಗೃಹದಲ್ಲಿ ರಸ್ತೆ ಅಕ್ಕ,ಪಕ್ಕದ ನೀರು ಸೇರಿ ಬಹುತೇಕ ಅತಿಥಿ ಗೃಹ ಜಲಾವತ್ತಗೊಂಡಿದೆ‌. ರಸ್ತೆ ಹಾಗೂ ಪಾರ್ಕಿಂಗ್ ಪ್ರದೇಶದಲ್ಲಿ ನೀರು ತುಂಬಿದ್ದರಿಂದ ವಾಹನ ಗಳು ನೀರಿನಲ್ಲಿ ಮುಳುಗಿ ಹೋಗಿದೆ. ನೆರೆಯಿಂದಾಗಿ ಭಕ್ತರು ನೀರಿನಲ್ಲಿ ಯೇ ನಡೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆ ಯಾಗಿದೆ. ಅದ್ರಲ್ಲೂ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ಇದರಿಂದ ಬಹುತೇಕ ಕಡೆಗಳು ಜಲಾವೃತವಾಗಿದೆ. ಇನ್ನು ಮಂತ್ರಾಲಯದ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದ್ದರಿಂದ ಮದುವೆ ಸಮಾರಂಭ ಅಸ್ತವ್ಯಸ್ತ ಗೊಂಡಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *