ತಾವರಗೇರಾದಲ್ಲಿ ಕಾಣದಂತೆ ಮಾಯಾವಾಗುತ್ತಿದೆ ಸುಣ್ಣಗಾರರ ಸುಣ್ಣದ ಬದುಕು..

Spread the love

ತಾವರಗೇರಾದಲ್ಲಿ ಕಾಣದಂತೆ ಮಾಯಾವಾಗುತ್ತಿದೆ ಸುಣ್ಣಗಾರರ ಸುಣ್ಣದ ಬದುಕು..

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಪಟ್ಟಣದ ಹೋರ ವಲಯದಲ್ಲಿ ತಲೆ ತಲೆಮಾರಿನಿಂದ ಸುಣ್ಣ ಭಟ್ಟಿಯಲ್ಲಿ ಕೈಯಾರೆಯತಯಾರು ಮಾಡಿ ಅದರ ವ್ಯಾಪಾರ ಮಾಡಿ ಬದುಕುವವರು ಸುಣಗಾರರು. ತಾವರಗೇರಾ ಸುತ್ತ ಮುತ್ತ ಹಳ್ಳಿಗಳ ಹಬ್ಬ ಜಾತ್ರೆ ಹರಿದಿನಗಳಿಗೆ ಮುಂಚಿತವಾಗಿ ಕತ್ತೆ ಮೇಲೆ ಹಾಗೂ ಎತ್ತಿನ ಚಕ್ಕಡಿ ಮೇಲೆ ಸುಣ್ಣದ ಚೀಲ ಹಾಕಿಕೊಂಡು ಹೊಟ್ಟೆ ಪಾಡಿಗೆ ಹಳ್ಳಿಹಳ್ಳಿಗೆ, ಗಲ್ಲಿಗಲ್ಲಿಗೆ ಸುಣ್ಣ ಮಾರಲು ಬರುತ್ತಿದ್ದುದನ್ನು ನನ್ನ ಬಾಲ್ಯದಲ್ಲಿ ನೋಡಿದ್ದೆ. ಅಲ್ಲದೆ ಸುಮಾರು 10 ವರ್ಷಗಳ ಕೆಳಗೂ ಕೂಡ ನಗರದ ಕೆಲ ವೃತ್ತಗಳಲ್ಲಿ ಪುಟ್ಟಿಯಲ್ಲಿ ಸುಣ್ಣ ಹಾಕಿಕೊಂಡು ಮಾರುತ್ತಿದ್ದ ಸನ್ನಿವೇಶಗಳು ಇನ್ನೂ ನೆನಪಿವೆ. ಹಳ್ಳಿಗಳಲ್ಲಿ  ಹಬ್ಬ ಹರಿದಿನ ಜಾತ್ರೆ ಗಳಿಗೆ ಹೊಸ ಬಟ್ಟೆ ಇಲ್ಲ ಎಂದರೂ ನಡೆಯುತ್ತದೆ. ಆದರೆ ಮನೆಗೆ ಸುಣ್ಣ ಮಾತ್ರ ಬಳಿಯಲೇಬೇಕು ನಮ್ಮ ಮನೆ ಬೆಳ್ಳಗೆ ಹಾಲಿನಂತೆ ಹೋಳೆಯುತ್ತಿರಬೇಕು  ಎಂಬ ಸಂಪ್ರದಾಯ ಕಾಲವಿತ್ತು.ಹಿಂದೆ ಅಂತಹ ಪ್ರಾಮುಖ್ಯತೆ ಹೊಂದಿದ್ದ ಸಾಂಪ್ರದಾಯಿಕ ಸುಣ್ಣವನ್ನು. ಹಾಗೂ ಸುಣ್ಣಗಾರರ ಬದುಕನ್ನು ಕೇಳುವವರಿಲ್ಲವಾಗಿದೆ. ಇದೇ ವೃತ್ತಿಯನ್ನು ನೆಚ್ಚಿಕೊಂಡಿದ್ದ ತಾವರಗೇರಾ ಪಟ್ಟಣದ ಬಹುತೇಕ ಸುಣಗಾರ ಕುಟುಂಬಗಳು ವೃತ್ತಿಯಿಂದ ವಿಮುಖಗೊಂಡಿವೆ.ಇದರಿಂದಾಗಿ ಸುಣಗಾರಿಕೆ ಎಂಬುದು ನಶಿಸಿ ಹೋಗುತ್ತಿದೆ.ತಾವರಗೇರಾ ಪಟ್ಟಣದಲ್ಲಿ ಸುಣಗಾರ ಓಣಿಯಲ್ಲಿ ಈ ಸಮುದಾಯದ ಕೆಲವು ಕುಟುಂಬಗಳಿವೆ. ಇವುಗಳಲ್ಲಿ ಬಹುತೇಕ ಕುಟುಂಬಗಳು ತಮ್ಮ ತಲೆತಲಾಂತರದ ವೃತ್ತಿಯನ್ನೆ ನಂಬಿ ಜೀವನ ಮಾಡುತ್ತಿದ್ದವು ಆದರೆ ಮಾರುಕಟ್ಟೆಯಲ್ಲಿ ಸುಣ್ಣಕ್ಕೆ ಬೇಡಿಕೆ ಇಲ್ಲದಂತಾಗಿ ಜೀವನ ಸಾಗಿಸುವದಕ್ಕೊಸ್ಕರ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡು ಉಪ ಜೀವನ ಸಾಗಿಸುತ್ತಿವೆ ಕೆಲವೇ ದಿನಗಳಲ್ಲಿ ಪಟ್ಟಣದಲ್ಲಿ ಸಾಂಪ್ರದಾಯಿಕ ಸುಣಗಾರಿಕೆ ಎಂಬುದು ಇತಿಹಾಸದ ಪುಟ ಸೇರಿ ಮುಂದಿನ ಮಕ್ಕಳ ಪಾಠ ಶಾಲೆಯಲ್ಲಿ ಪಾಠ ಆಗುವದು ಸಂಶಯವಿಲ್ಲ. ಇಂದು ವಿವಿಧ ಕಂಪನಿಗಳು ಕಾರ್ಖಾನೆಗಳಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಿದ ವಿವಿಧ ಬಗೆಯ ಸುಣ್ಣಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಅವರ ಬಣ್ಣದ ಜಾಹೀರಾತುಗಳಿಗೆ ಸುಲಭವಾಗಿ ಮರಳಾಗುವ ಜನರು ಅದನ್ನೇ ಹೆಚ್ಚಾಗಿ ಕೊಂಡುಕೊಳ್ಳುತ್ತಿದ್ದಾರೆ. ಇದು ಸಾಂಪ್ರದಾಯಿಕ ಭಟ್ಟಿಯಿಂದ ತಯ್ಯಾರ ಮಾಡುವ ಸುಣ್ಣದ ಬೇಡಿಕೆ ಕುಸಿಯಲು ಪ್ರಮುಖ ಮತ್ತು ಅಸಲಿ ಕಾರಣವಾಗಿದೆ. ಘಾಟು ವಾಸನೆ ಹೊಂದಿರುವ ಸುಣ್ಣವನ್ನು ಮನೆಯ ಗೋಡೆಗೆ ಬಳಿಯುವುದರಿಂದ ಅದು ನೈಸರ್ಗಿಕ ಕ್ರಿಮಿನಾಶಕದಂತೆ ಕೆಲಸ ಮಾಡುತ್ತದೆ. ಅಲ್ಲದೆ ನಮ್ಮ ಚರ್ಮದಲ್ಲಿರುವಂತೆ ಸುಣ್ಣ ಬಳಿದ ಗೋಡೆಗಳಲ್ಲೂ ಸಹ ಸಣ್ಣ ಸಣ್ಣ ರಂದ್ರಗಳಿರುತ್ತವೆ. ಇದು ತೇವಾಂಶ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಇದರಿಂದ ಸುಣ್ಣ ಬಳಿದ ಮನೆ ಬೇಸಿಗೆಯಲ್ಲಿ ತಣ್ಣನೆಯ ಹಾಗೂ ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಇದು ವೈಜ್ಞಾನಿಕವಾಗಿಯೂ ರುಜುವಾತಾಗಿದೆ. ಹಿಂದೆ ನಿರ್ಮಾಣ ಕ್ಷೇತ್ರದಲ್ಲಿ ಬಳಸುತ್ತಿದ್ದ ಗಾರೆ (ಗಚ್ಚು) ತಯಾರಿಕೆಯಲ್ಲಿ ಸುಣ್ಣದ ಪ್ರಾತಿನಿಧ್ಯ ಬಹುಮುಖ್ಯವಾದದ್ದು. ಉಸುಕು (ಮರಳು), ಸುಣ್ಣ, ಲೋಳೆಸರ, ಹಳೆಯ ಬೆಲ್ಲ ಇವುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ, ಗಾಣದಲ್ಲಿ ಅರೆದು ಗಾರೆ ತಯಾರಿಸುತ್ತಿದ್ದರು.ಅದನ್ನು ಬೃಹತ್ ಕೋಟೆ, ಕೊತ್ತಲಗಳ ನಿರ್ಮಾಣದಲ್ಲಿ ಬಳಸುತ್ತಿದ್ದರು ಎಂದು ಇತಿಹಾಸದಿಂದ ತಿಳಿದುಬರುತ್ತದೆ. ತಾಂಬೂಲದಲ್ಲಿ ಸುಣ್ಣವನ್ನು ಬಳಕೆ ಮಾಡುವುದರಿಂದ ಮೂಳೆಗಳಿಗೆ ಸಂಬಂಧಿಸಿದ ಖಾಯಿಲೆಗಳೂ ದೂರವಾಗುತ್ತವೆ ಸುಣ್ಣವು ಕೂಡ ಕೆಲವು ರೋಗ ವನ್ನು ತಡೆಗಟ್ಟತ್ಥದೆ. ಎಂದು ಆಯುರ್ವೇದದಲ್ಲಿ ಹೇಳಲಾಗುತ್ತದೆ. ಶತಶತಮಾನಗಳಿಂದ ಹಳ್ಳಿಗಳಲ್ಲಿ ನಗರಗಳಲ್ಲಿ ಮಾನವನಿಗೆ ಸಹಕಾರಿಯಾಗಿರುವ ಸುಣ್ಣದ ಬಳಕೆಯನ್ನು ಬಹುತೇಕ ನಿಲ್ಲಿಸಿರುವುದಕ್ಕೆ ನಮ್ಮನ್ನು ನಾವೇ ಅವಲೋಕಿಸಿಕೊಳ್ಳಬೇಕಿದೆ. ಹಿಂದುಳಿದ ವರ್ಗದಲ್ಲಿ ಬರುವ ಸುಣಗಾರರನ್ನು ಸರ್ಕಾರ ಕಾರ್ಮಿಕರೆಂದು ಗುರುತಿಸಿದೆಯೋ ಇಲ್ಲವೋ ಗೊತ್ತಿಲ್ಲ. ಅನಕ್ಷರತೆಯಿಂದಾಗಿ ತಾವರಗೇರಾ ಪಟ್ಟಣದಲ್ಲಿ ಕೆಲವು ಕುಟುಂಬಗಳು ಸರ್ಕಾರದಿಂದ ಈವರೆಗೆ ಇವರಿಗೆ ಯಾವುದೇ ಸಹಾಯ ದೊರೆತಿಲ್ಲ. ಸಾಕಷ್ಟು ಬಡತನದಲ್ಲಿರುವ ಈ ಸಮುದಾಯದ ಕೆಲವು ಕುಟುಂಬಗಳನ್ನು ಕರೋನಾ ಲಾಕ್‍ಡೌನ್‍ನಲ್ಲೂ ಯಾವುದೇ ಸಂಘ, ಸಂಸ್ಥೆಗಳೂ ಗುರುತಿಸದಿರುವುದು ನೋವಿನ ಸಂಗತಿ ಈ ಲಾಕಡೌನ್ ಸಂಧರ್ಭದಲ್ಲಿ ಸುಣ್ಣಗಾರರ ಸಮುದಾಯದ ಕೆಲವು ಬಡ ಕುಟುಂಬಗಳಿಗೆ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ವತಿಯಿಂದ ಸಣ್ಣ ಆರ್ಥಿಕ ನೇರವು ನಿಡಬೇಕಿದೆ.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *