ಉತ್ತರ ಪ್ರದೇಶದ ಗಾಜೀಪುರದಲ್ಲಿ ಗಂಗಾ ನದಿಯಲ್ಲಿ ತೇಲಿಬಂದ ಹೆಣ್ಣುಮಗುವಿದ್ದ ಮರದ ಡಬ್ಬ!

Spread the love

ಉತ್ತರ ಪ್ರದೇಶದ ಗಾಜೀಪುರದಲ್ಲಿ ಗಂಗಾ ನದಿಯಲ್ಲಿ ತೇಲಿಬಂದ ಹೆಣ್ಣುಮಗುವಿದ್ದ ಮರದ ಡಬ್ಬ!

ಇಂದು ಗಾಜೀಪುರದ  ಗಂಗಾ ನದಿಯಲ್ಲಿ ಮರದ ಡಬ್ಬದಲ್ಲಿ ನವಜಾತ ಹೆಣ್ಣು ಮಗುವೊಂದು ತೇಲಿ ಬಂದಿದೆ. ಉತ್ತರ ಪ್ರದೇಶದ ಗಾಜೀಪುರದಲ್ಲಿ. ಗಂಗಾ ನದಿ ನೀರಿನಲ್ಲಿ ಮರದ ಬಾಕ್ಸ್ ತೇಲಿಕೊಂಡು ಬರುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರ ಗುಲ್ಲು ಚೌಧರಿ ಬಾಕ್ಸ್ ಹಿಡಿದು ಪರಿಶೀಲಿಸಿದ್ದಾರೆ. ಬಾಕ್ಸ್ ತೆರೆದು ನೋಡಿದಾಗ ಅವರಿಗೆ ಅಚ್ಚರಿಯೇ ಕಾದಿತ್ತು. ಬಾಕ್ಸ್ ನಲ್ಲಿ ಮಗು ಮಾತ್ರವಲ್ಲದೆ ಒಂದು ಕಾಗದ ಇತ್ತು. ಅದರಲ್ಲಿ ದುರ್ಗಾ ಮಾತೆಯ ಚಿತ್ರ, ಜಾತಕ ಮತ್ತು ಅಗರಬತ್ತಿಯ ತುಂಡುಗಳಿದ್ದವು ಎಂದು ವರದಿಯಾಗಿದೆ. ಮರದ ಡಬ್ಬದಲ್ಲಿ ಶಿಶುವನ್ನಿರಿಸಿ ಗಂಗೆಯಲ್ಲಿ ತೇಲಿ ಬಿಡಲಾಗಿದೆ. ಗಂಗೆಯ ಮಗಳು ಎಂದು ಕಾಗದದಲ್ಲಿ ಬರೆದಿಡಲಾಗಿತ್ತು. ಮೀನುಗಾರ ಚೌಧರಿ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಮಾಹಿತಿ ಪೊಲೀಸರಿಗೆ ತಿಳಿದು ಚೌದರಿ ಮನೆಗೆ ಆಗಮಿಸಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ದದ್ರಿ ಘಾಟ್ ನಲ್ಲಿದ್ದಾಗ ಗುಲ್ಲು ಚೌಧರಿಗೆ ಮಗುವಿನ ಅಳುವಿನ ಶಬ್ಧ ಕೇಳಿಸಿದೆ. ಇದರಿಂದಾಗಿ ಆತ ಬಾಕ್ಸ್ ತೆರೆದು ನೋಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚೌದರಿಗೆ ಯುಪಿ ಯೋಗಿ ಆದಿತ್ಯನಾಥ್ ಸರಕಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಮಗುವಿನ ಬೆಳವಣಿಗೆಗೆ ಬೇಕಾದ ಎಲ್ಲಾ ಸಹಕಾರವನ್ನು ನೀಡುವ ಭರವಸೆಯನ್ನು ಸರಕಾರ ನೀಡಿದೆ.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *