ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮ ಪಂಚಾಯತಿ ಸಮ್ಮುಖದಿಂದ ಬಿಜೆಪಿ ಮುಖಂಡರು ಬಡವರಿಗೆ ಕಿಟ್ ವಿತರಣೆಗೆ ಚಾಲನೆ ನೀಡಿದರು.

Spread the love

ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮ ಪಂಚಾಯತಿ ಸಮ್ಮುಖದಿಂದ ಬಿಜೆಪಿ ಮುಖಂಡರು ಬಡವರಿಗೆ ಕಿಟ್ ವಿತರಣೆಗೆ ಚಾಲನೆ ನೀಡಿದರು.

ಕೋವಿಡ್ 19 ಎರಡನೇ ಅಲೆ ಕೊರೋನ ಸಂಕಷ್ಟಕ್ಕೆ ಮತ್ತು ಕೊರೋನ ವಾರಿಯರ್ಸ್ಗಳಿಗೆ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ಮಾಡಿದರು. ಯಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಚನಬಸಪ್ಪ ರಡ್ದೆರ ರವರು ಮಾತನಾಡಿ ತಾಲೂಕಿನ ನಿಷ್ಠಾವಂತ ಶಾಸಕರ ಎಂದರೆ ಅದು ಹಾಲಪ್ಪ ಆಚಾರ್ ಮತ್ತು ಯಲಬುರ್ಗಾ ತಾಲೂಕಿನಲ್ಲಿ ಕೊರೋನ ಸಂಕಷ್ಟದಲ್ಲಿರುವವರಿಗೆ 5000 ಕಿಟ್ಟ ವಿತರಣೆ ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿದ್ದಾರೆ ಹಾಗೂ ಮುಧೋಳ ಗ್ರಾಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಮಾಹಿತಿ ಪ್ರಕಾರ  181 ಬಡಬಜನರಿಗೆ ಕಿಟ್ ಮಾಡಲಾಯಿತು ಎಂದು ಹೇಳಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭಾರತಿ ಚಲವಾದಿ ಉಪಾಧ್ಯಕ್ಷರಾದ ಚಂದ್ರ ಬಾಯಿ ಕುದರಿ ಹಾಗೂ ಗ್ರಾಂ ಪಂ ಅಭಿವೃದ್ಧಿ ಅಧಿಕಾರಿಗಳಾದ ಫಕೀರಪ್ಪ ಕಟ್ಟಿಮನಿಯವರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಕುಮಾರ್ ಅವರು  ಮುಖಂಡರಾದ ಚನ್ನಬಸಪ್ಪ ರಡ್ದೆರ  ನಿಂಗಪ್ಪ ವದ್ನಾಳ ಅಪ್ಪಣ್ಣ ಗೌಡರ ಪಲ್ಲೇದ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು ಊರಿನ ಎಲ್ಲಾ ಪ್ರಮುಖ ಮುಖಂಡರು ಭಾಗಿಯಾಗಿದ್ದರು

ವರದಿಹುಸೇನ್ ಮೋತೆಖಾನ್

Leave a Reply

Your email address will not be published. Required fields are marked *