ಮತದಾರರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆರ್ ಬಸನಗೌಡ ತುರುವಿಹಾಳ್

Spread the love

ಮತದಾರರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಆರ್ ಬಸನಗೌಡ ತುರುವಿಹಾಳ್

ಕಳೆದ ಏಪ್ರಿಲ್ 17 ರಂದು ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳು ಇಂದು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಮಕ್ಷದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಿತು. ಬಸವಕಲ್ಯಾಣ ಕ್ಷೇತ್ರದಿಂದ ಚುನಾಯಿತರಾದ ಬಿಜೆಪಿಯ ಶರಣು ಸಲಗಾರ್ ಹಾಗೂ ಮಸ್ಕಿ ಕ್ಷೇತ್ರದಿಂದ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಬಸವನಗೌಡ ತುರುವಿಹಾಳ್ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದರು. ಬಸವಕಲ್ಯಾಣದಿಂದ ಆಯ್ಕೆಯಾದ ಶರಣು ಸಲಗಾರ್, ಬಸವಣ್ಣ ಹಾಗೂ ಕ್ಷೇತ್ರದ ಪ್ರಜೆಗಳ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರೆ, ಮಸ್ಕಿಯಿಂದ ಆಯ್ಕೆಯಾದ ಬಸವನಗೌಡ ತುರುವಿಹಾಳ್ ಕ್ಷೇತ್ರದ ಮತದಾರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು  ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದ್ರುವಕುಮಾರ್, ಸಚಿವ ಪ್ರಭು ಚೌಹಾಣ್, ಕಾಂಗ್ರೆಸ್ ಸಚೇತಕ ಡಾ.ಅಜಯ ಸಿಂಗ್, ಬೀದರ್ ಸಂಸದ ಭಗವಂತ ಕೂಬಾ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಮಾಣವಚನ ಸಮಾರಂಭಕ್ಕೆ ಸ್ಪೀಕರ್, ಡಿಸಿಎಂ ಸೇರಿದಂತೆ ಹಲವು ಗಣ್ಯರು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಆಗಮಿಸಿದ್ದರೂ, ಪ್ರಮಾಣವಚನ ಸ್ವೀಕರಿಸಬೇಕಾದ ಅಭ್ಯರ್ಥಿಗಳೇ ತಡವಾಗಿ ಆಗಮಿಸಿದರು. ಇಬ್ಬರು ಶಾಸಕರು 10 ನಿಮಿಷ ತಡವಾಗಿ ಆಗಮಿಸಿದ ಹಿನ್ವೆಲೆಯಲ್ಲಿ ಸಮಾರಂಭ ಸ್ವಲ್ಪ ತಡವಾಯಿತು.

ವರದಿ – ಸಂಪಾದಕೀಯ

Leave a Reply

Your email address will not be published. Required fields are marked *